“ರೈಲ್ವೇ ನಿಲ್ದಾಣದಲ್ಲಿ ತಾಯಿ ಎಳನೀರು ಮಾರುತ್ತಿದ್ದಾಳೆ. ಅವಳ ಮಗ ಸೈನ್ಯದಲ್ಲಿದ್ದಾನೆ ಮತ್ತು ಅವನು ರಜೆಗಾಗಿ ಬಂದನು. ಆದರೆ ಅವನ ಆಗಮನ ಅವಳಿಗೆ ತಿಳಿದಿರಲಿಲ್ಲ. ನೇರವಾಗಿ ಅವನು ತನ್ನ ತಾಯಿಯ ಬಳಿಗೆ ತಾಜಾ ಎಳನೀರನ್ನು ಕೇಳಿದನು. ಅವನಿಗಾಗಿ ತಾಜಾ ಎಳನೀರು ತೆಗೆದಳು. ಅವನು ಇದ್ದಕ್ಕಿದ್ದಂತೆ ತನ್ನ ತಾಯಿಗೆ ನಮಸ್ಕರಿಸಿದನು. ಅದರ ನಂತರ ನೀವು ಅವಳ ಪ್ರತಿಕ್ರಿಯೆಯನ್ನು ನೋಡುತ್ತೀರಿ. ಜೈಹಿಂದ್” ಎಂಬ ಬರಹದೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ..
She is selling tender coconut at railway station. Her son is in army and he came for holidays. But she was not aware of his arrival. Directly he came to his mother asking for a tender coconut. She removed a tender coconut for him. He suddenly saluted his mother.
🙏🙏🙏 pic.twitter.com/DGD6NPCnOE
— sona (@Sonaj_Sin) November 20, 2024
ವೈರಲ್ ವಿಡಿಯೋದಲ್ಲಿ ಕೂಡ ಸೇನೆಯ ಸಮವಸ್ತ್ರ ಧರಿಸಿದ ವ್ಯಕ್ತಿಯೊಬ್ಬ ಎಳನೀರು ಮಾರುವ ಮಹಿಳೆಯ ಬಳಿ ಬಂದು ಎಳನೀರು ಕೇಳುತ್ತಾನೆ. ಈ ವೇಳೆ ಆತನಿಗಾಗಿ ಎಳನೀರು ತೆಗೆದುಕೊಡುವಾಗ, ಆತ ತಾನು ಧರಿಸಿದ್ದ ಮಾಸ್ಕ್ ತೆಗೆದು ಸೆಲ್ಯುಟ್ ಮಾಡುತ್ತಾನೆ. ಆಗ ಆ ವ್ಯಕ್ತಿಯನ್ನು ನೋಡಿ ಮಹಿಳೆ ಭಾವನಾತ್ಮಕವಾಗಿ ನಗುತ್ತಾಳೆ. ಈ ವಿಡಿಯೋ ನೋಡಿದ ಹಲವು ಮಂದಿ ವೈರಲ್ ಪೋಸ್ಟ್ ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಲವರು ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
She is selling tender coconut at railway station. Her son is in army and he came for holidays. But she was not aware of his arrival. Directly he came to his mother asking for a tender coconut.@VanberghenEU @khushsundar @pallavict @SidHimachal @bhash
— Samara (@SamaraKarkara) November 20, 2024
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ವಿಡಿಯೋವಿನ ಕೆಲವೊಂದು ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 12 ನವೆಂಬರ್ 2024 ರಂದು ನಟಿ ಸಂಜನಾ ಗಲ್ರಾನಿ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ “ಈ ತಾಯಿಗೆ ಸೆಲ್ಯೂಟ್ ಮಾಡಿ..!” ಎಂದು ಬರೆದುಕೊಂಡು ಮೂಲ ವಿಡಿಯೋವನ್ನು ಹಂಚಿಕೊಂಡಿರುವುದು ಕಂಡು ಬಂದಿದೆ.

ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ವಿಡಿಯೋವಿನ ಕೊನೆಯಲ್ಲಿ ” ವಿಡಿಯೋ ನೋಡಿದ್ದಕ್ಕಾಗಿ ಧನ್ಯವಾದಗಳು! ಈ ಪುಟವು ಸ್ಕ್ರಿಪ್ಟ್ ಮಾಡಿದ ನಾಟಕಗಳು, ವಿಡಂಬನೆಗಳು ಮತ್ತು ಜಾಗೃತಿ ವೀಡಿಯೊಗಳನ್ನು ಒಳಗೊಂಡಿದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ಕಿರುಚಿತ್ರಗಳನ್ನು ಮನರಂಜನೆ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ರಚಿಸಲಾಗಿದೆ. ವೀಡಿಯೊಗಳಲ್ಲಿ ಚಿತ್ರಿಸಲಾದ ಎಲ್ಲಾ ಪಾತ್ರಗಳು ಮತ್ತು ಸನ್ನಿವೇಶಗಳು ಕಾಲ್ಪನಿಕವಾಗಿವೆ ಮತ್ತು ಜಾಗೃತಿ ಮೂಡಿಸಲು, ಮನರಂಜನೆ ಮತ್ತು ಶಿಕ್ಷಣ ನೀಡಲು ಉದ್ದೇಶಿಸಲಾಗಿದೆ” ಎಂದು ಬರೆದುಕೊಂಡಿರುವುದು ಕಂಡು ಬಂದಿದೆ. ಇನ್ನು “3RD EYE” YouTube ಚಾನಲ್ನಲ್ಲಿ 15 ನವೆಂಬರ್ 2024 ರಂದು ಅಪ್ಲೋಡ್ ಮಾಡಲಾದ ವೀಡಿಯೊವನ್ನು ( ಆರ್ಕೈವ್ ಮಾಡಿದ ಲಿಂಕ್ ) ನಾವು ಕಂಡುಕೊಂಡಿದ್ದೇವೆ . ಈ “3RD EYE” ಚಾನೆಲ್ ಶೈಕ್ಷಣಿಕ ಉದ್ದೇಶಗಳಿಗಾಗಿ ಸ್ಕ್ರಿಪ್ಟ್ ಮಾಡಿದ ವೀಡಿಯೊಗಳನ್ನು ರಚಿಸುತ್ತದೆ ಮತ್ತು ವೀಡಿಯೊ ಮತ್ತು ಅದರ ವಿವರಣೆಯು ಮನರಂಜನೆ ಮತ್ತು ಶಿಕ್ಷಣಕ್ಕಾಗಿ ಮಾಡಲ್ಪಟ್ಟಿದೆ ಎಂದು ಈ ಹಿಂದೆಯೂ ಹೇಳಿಕೊಂಡಿದೆ.
https://www.youtube.com/watch?v=q5zI98ya2XM
ಒಟ್ಟಾರೆಯಾಗಿ ಹೇಳುವುದಾದರೆ, ಸೈನಿಕನ್ನೊಬ್ಬ ತನ್ನ ರಜಾ ಅವಧಿಯಲ್ಲಿ ನೇರವಾಗಿ ತನ್ನ ತಾಯಿ ನಡೆಸುತ್ತಿರುವ ಎಳೆನೀರು ಅಂಗಡಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಅಚ್ಚರಿ ಪಡಿಸಿದ್ದಾನೆ ಎಂದು ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಸ್ಕ್ರಿಪ್ಟ್ ಮಾಡಿದ್ದಾಗಿದೆ. ಇದು ನಿಜವಾಗಿ ನಡೆದ ಘಟನೆಯಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ವೈರಲ್ ವಿಡಿಯೋವನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ
ಇದನ್ನೂ ಓದಿ : Fact Check: ಮಂಜಿನಿಂದಾಗಿ ಕಾರುಗಳ ಸರಣಿ ಅಪಘಾತ ನಡೆದ ವಿಡಿಯೋ 2017ರದ್ದು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

