ಹೈದರಾಬಾದ್ನ ‘ರಿಂಗ್ ರಸ್ತೆ’ಯನ್ನು ತೋರಿಸುತ್ತದೆ ಎಂಬ ಹೇಳಿಕೆಯೊಂದಿಗೆ ಅನೇಕ ರಸ್ತೆಗಳು ಮತ್ತು ಜಂಕ್ಷನ್ಗಳನ್ನು ತೋರಿಸುವ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಚಿತ್ರದಲ್ಲಿ ‘ದೇಶದ ಅತಿದೊಡ್ಡ ರಿಂಗ್ ರಸ್ತೆ’ ಎಂದು ಹೇಳಲಾದ ಚಿತ್ರವು ಬಹು-ಹಂತದ ರಸ್ತೆಗಳು, ಕಟ್ಟಡದ ಮೂಲಕ ಹಾದುಹೋಗುವ ಫೈಓವರ್, ವೃತ್ತಗಳು ಮತ್ತು ಬಹುಮಹಡಿ ಕಟ್ಟಡಗಳ ಸುತ್ತಲಿನ ಜಂಕ್ಷನ್ಗಳಿಂದ ಮಾಡಲ್ಪಟ್ಟಿದೆ. ಹೀಗಾಗಿ ಈ ಪೋಸ್ಟ್ಗಳು ಹೆಚ್ಚಾಗಿ ಹಂಚಿಕೊಳ್ಳಲಾಗುತ್ತಿದೆ.

ವೈರಲ್ ಆಗುತ್ತಿರುವ ಫೋಟೋವನ್ನು ಹಂಚಿಕೊಳ್ಳುತ್ತಿರುವ ಹಲವರು “ಭಾರತದ ಹೈದರಾಬಾದ್ 156 ಕಿಲೋಮೀಟರ್ ಉದ್ದದ ರಿಂಗ್ ರಸ್ತೆಯನ್ನು ಹೊಂದಿದೆ, ಇದು ದೇಶದ ಅತಿದೊಡ್ಡ ರಿಂಗ್ ರಸ್ತೆಯಾಗಿದೆ” ಎಂದು ಬರೆದುಕೊಳ್ಳುತ್ತಿದ್ದಾರೆ. ಇದನ್ನು ನೋಡಿದ ಹಲವು ಮಂದಿ ಸಾಮಾಜಿಕ ಜಾಲತಾಣದ ಬಳಕೆದಾರರು ವೈರಲ್ ಫೋಟೋವನ್ನು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ವೈರಲ್ ಫೋಟೋವಿನ ಹಿನ್ನೆಲೆ ಏನು ಎಂಬುನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವಿವಿಧ ಕೀ ವರ್ಡ್ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದ್ದೇವೆ. ಈ ವೇಳೆ ನಮಗೆ ವಿವಿಧ ಚಿತ್ರಗಳು ಮತ್ತು ವೀಡಿಯೊಗಳು ಕಂಡು ಬಂದಿವೆ.17 ಜೂನ್ , 2021 ರಂದು ಸಾಯಿಕಾಂತ್ ಕೃಷ್ಣ ಅವರು ತಮ್ಮ ಯೂಟ್ಯೂಬ್ನಲ್ಲಿ ನೆಹರು ಹೊರ ವರ್ತುಲ ರಿಂಗ್ ರಸ್ತೆಯ ಡೋನ್ ದೃಶ್ಯಾವಳಿಗಳನ್ನು ಅಪ್ಲೋಡ್ ಮಾಡಿರುವುದು ಕಂಡುಬಂದಿದೆ,ಇದು ಬೃಹತ್ ವೃತ್ತಾಕಾರದ ಸಂಚಾರ ಮಾರ್ಗಗಳನ್ನು ಹೊಂದಿರುವುದು ಕಂದು ಬಂದಿದೆ. ಆದರೆ ಇದಕ್ಕೂ ವೈರಲ್ ಫೋಟೋಗೂ ದೊಡ್ಡ ಪ್ರಮಾಣದ ಹೋಲಿಕೆ ಏನು ಕಂಡು ಬಂದಿಲ್ಲ
ಹೀಗಾಗಿ ನಾವು ವೈರಲ್ ಚಿತ್ರವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, AI- ರಚಿತವಾದ ಚಿತ್ರಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅನೇಕ ದೃಶ್ಯ ವೈಪರೀತ್ಯಗಳನ್ನು ನಾವು ಕಂಡುಕೊಂಡಿದ್ದೇವೆ. ರಸ್ತೆಗಳು ಮತ್ತು ಜಂಕ್ಷನ್ ಗಳು ಹಠಾತ್ತನೆ ಕೊನೆಗೊಳ್ಳುವುದರಿಂದ ಡೆಡ್ ಎಂಡ್ ಗಳು ಮತ್ತು ಅಸಾಮಾನ್ಯ ಗಾತ್ರದ ವಾಹನಗಳು ಮತ್ತು ಸಂಚಾರದ ದಿಕ್ಕಿನಲ್ಲಿ ವೈಪರೀತ್ಯಗಳು ಕಂಡುಬಂದಿವೆ. AI ಪತ್ತೆ ಸಾಧನವಾದ ಹೈವ್ ಮಾಡರೇಶನ್ ಅನ್ನು ಬಳಸಿಕೊಂಡು ಪರಿಶೀಲಿಸಿದಾಗ ವೈರಲ್ ಚಿತ್ರವು 99.9 ಪ್ರತಿಶತದಷ್ಟು Al-ರಚಿತ ಅಥವಾ ಡೀಪ್ಫೇಕ್ ಆಗಿರುವ ಸಾಧ್ಯತೆಯಿದೆ ಎಂದು ನಾವು ಕಂಡುಕೊಂಡಿದ್ದೇವೆ.


ಒಟ್ಟಾರೆಯಾಗಿ ನಾವು ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ‘ದೇಶದ ಅತಿದೊಡ್ಡ ರಿಂಗ್ ರಸ್ತೆ’ ಎಂದು ಹೇಳಲಾದ ಚಿತ್ರವು ಬಹು-ಹಂತದ ರಸ್ತೆಗಳ ಚಿತ್ರ AI ನಿಂದ ನಿರ್ಮಿಸಲಾಗಿದೆ. ಹಾಗಾಗಿ ಈ ಫೋಟೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಮಹಾ ಕುಂಭಮೇಳದಲ್ಲಿ ಪ್ರೀತಿ ಜಿಂಟಾ, ಗ್ಲೆನ್ ಮ್ಯಾಕ್ಸ್ವೆಲ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎಂದು AI ಫೋಟೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

