ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ಭಾರೀ ವೈರಲ್ ಆಗುತ್ತಿದೆ. ಇದರಲ್ಲಿ ಟ್ರೈನ್ ಒಂದು ರೈಲ್ವೆ ನಿಲ್ದಾಣದಲ್ಲಿ ನಿಂತಿರುವುದನ್ನು ಕಾಣಬಹುದಾಗಿದೆ. ಈ ವೇಳೆ ಕೆಲವರು ರೈಲಿಗೆ ಕಲ್ಲನ್ನು ಎಸೆಯುವುದು ಈ ವಿಡಿಯೋದಲ್ಲಿ ಕಂಡು ಬಂದಿದೆ. ಇನ್ನು ಈ ವಿಡಿಯೋ ಹೆಚ್ಚಾಗಿ ವೈರಲ್ ಆಗಲು ಕಾರಣ ಇದು ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ ವಿಶೇಷ ರೈಲು ಎಂಬುದು. ಇದಕ್ಕೆ ಕಲ್ಲು ಎಸೆದವರು ಮುಸ್ಲಿಮರು ಎಂಬ ಉಲ್ಲೇಖದೊಂದಿಗೆ ಹಲವು ಬಳಕೆದಾದರರು ವೀಡಿಯೊವನ್ನು ಹಂಚಿಕೊಳ್ಳುತ್ತಿರುವುದು, ಈ ವಿಡಿಯೋ ಹೆಚಾಗಿ ಶೇರ್ ಆಗುವಂತೆ ಮಾಡಿದೆ.
महाकुंभ स्पेशल ट्रेन में तोड़फोड़ और पथराव. यह ट्रेन झांसी से प्रयागराज जा रही थी.
ट्रेन पर पत्थरबाजी करने वाले कौन हैं? pic.twitter.com/P0FWPhV4ek— Narendra (@iNarendraIN) January 28, 2025
ಫೇಸ್ಬುಕ್ ಬಳಕೆದಾರರೊಬ್ಬರು ಜನವರಿ 28, 2025 ರಂದು ಈ ವೀಡಿಯೊವನ್ನು ಅಪ್ಲೋಡ್ ಮಾಡಿ, “ಜನವರಿ 28 ರಂದು ಝಾನ್ಸಿಯಿಂದ ಪ್ರಯಾಗರಾಜ್ಗೆ ಪ್ರಯಾಣಿಸುತ್ತಿದ್ದ ವಿಶೇಷ ಮಹಾಕುಂಭರೈಲಿನ ಮೇಲೆ ಕಲ್ಲು ತೂರಾಟ ಮಾಡಿದ ಮುಸ್ಲಿಮರು” ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಇನ್ನಷ್ಟು ಬಳಕೆದಾರರು ವೈರಲ್ ವಿಡಿಯೋವನ್ನು ನಿಜವೆಂದು ಭಾವಿಸಿ, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ಹಿನ್ನೆಲೆ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
झांसी से प्रयागराज जा रही स्पेशल ट्रेन में तोड़फोड़ और पत्थर बरसा रहे लोग
ट्रेन पर पत्थरबाजी करने वाले कौन हैं? यह अभी सामने नहीं आया है.#स्पेशल_ट्रेन #railway #MahaKumbh #UPPolice @RailMinIndia
@RPF_INDIA pic.twitter.com/G8DSyrw3Eb— Webdunia Hindi (@WebduniaHindi) January 28, 2025
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ NDTV ಜನವರಿ 28, 2025 ರಂದು ಒದೇ ವೈರಲ್ ವೀಡಿಯೊವನ್ನು ಹಂಚಿಕೊಂಡು ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ. ಇದಕ್ಕೆ “ಮಹಾಕುಂಭ ವಿಶೇಷ ರೈಲಿನ ಬಾಗಿಲುಗಳು ಲಾಕ್ ಆಗಿರುವುದನ್ನು ಕಂಡು ಪ್ರಯಾಣಿಕರು ಕಲ್ಲು ಎಸೆದಿದ್ದಾರೆ” ಎಂಬ ಹೆಡ್ ಲೈನ್ ನೀಡಲಾಗಿದೆ. ಈ ಸುದ್ದಿಯಲ್ಲಿ ಎಲ್ಲಿಯೂ ಕೂಡ ಕಲ್ಲು ಎಸೆದಾತ ಮುಸಲ್ಮಾನ ಎಂಬ ಉಲ್ಲೇಖ ನಮಗೆ ಕಂಡು ಬಂದಿಲ್ಲ.

ಈ ಕುರಿತು ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ 28 ಜನವರಿ 2025ರಂದು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿರುವ ವರದಿಯೊಂದು ಕಂಡು ಬಂದಿದೆ. ಇದರ ಪ್ರಕಾರ “ಝಾನ್ಸಿಯಿಂದ ಪ್ರಯರಾಜ್ ಗೆ ತೆರಳುತ್ತಿದ್ದ ವಿಶೇಷ ರೈಲಿಗೆ ಹರ್ಪಾಲ್ಪುರ ನಿಲ್ದಾಣದಲ್ಲಿ ಅನೇಕ ಜನರು ಕಾಯುತ್ತಿದ್ದರು. ರೈಲು ಬಂದು ನಿಂತಾಗ ಬಾಗಿಲು ಲಾಕ್ ಆಗಿರುವುದನ್ನು ಕಂಡು ಕಲ್ಲು ತೂರಾಟ ನಡೆಸಲಾಯಿತು. ಪ್ರಯಾಣಿಕರು ಸುಮಾರು ಎರಡು ಗಂಟೆಗಳ ಕಾಲ ರೈಲಿಗಾಗಿ ಕಾದು ಕುಳಿತಿದ್ದರು. ಆದರೆ ರೈಲು ಹತ್ತಲು ಯತ್ನಿಸಿದಾಗ ಬಾಗಿಲು ಹಾಕಿರುವುದು ಕಂಡು ಬಂತು. ಆಕ್ರೋಶಗೊಂಡ ಪ್ರಯಾಣಿಕರು ಹಿಂಸಾಚಾರಕ್ಕೆ ತಿರುಗಿ ಕಂಪಾರ್ಟ್ಮೆಂಟ್ಗಳ ಮೇಲೆ ಕಲ್ಲು ತೂರಾಟ ನಡೆಸಿದರು’ ಎಂದು ಉಲ್ಲೇಖಿಸಲಾಗಿದೆ. ಇನ್ನು ಇದೇ ಅಂಶವನ್ನು ಹೊಂದಿರುವ ವರದಿಯನ್ನು TV5 ಕನ್ನಡ ಕೂಡ ಮಾಡಿರುವುದು ಕಂಡು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಮಹಾ ಕುಂಭಮೇಳಕ್ಕೆ ಹೋಗುವ ರೈಲಿಗೆ ಮುಸಲ್ಮಾನರು ಕಲ್ಲು ಹೊಡೆದಿದ್ದಾರೆ ಎಂಬುದು ಸುಳ್ಳು. ವರದಿಗಳ ಪ್ರಕಾರ ರೈಲಿನ ಬಾಗಿಲು ತೆರೆದುಕೊಳ್ಳದ ಕಾರಣ ಆಕ್ರೋಶಗೊಂಡ ಪ್ರಯಾಣಿಕರು ಬಾಗಿಲಿಗೆ ಕಲ್ಲು ಹೊಡೆದಿದ್ದಾರೆ, ಇದರಲ್ಲಿ ಯಾವುದೇ ರೀತಿಯಾದ ಕೋಮು ಆಯಾಮವಿಲ್ಲ. ಆದರೆ ಈ ವಿಡಿಯೋವನ್ನು ದುರ್ಬಳಕೆ ಮಾಡಿಕೊಂಡಿರುವ ಕಿಡಿಗೇಡಿಗಳು ಸುಳ್ಳು ನಿರೂಪಣೆಯೊಂದಿಗೆ ವೈರಲ್ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಯಾವುದೇ ಕಾರಣಕ್ಕೂ ವೈರಲ್ ಆಗುತ್ತಿರುವ ಪೋಸ್ಟ್ ಅನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

