ಏಪ್ರಿಲ್ 22 ರಂದು 26 ಜನ ಪ್ರವಾಸಿಗರನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತವು ಪಾಕಿಸ್ತಾನಿ ಪ್ರಜೆಗಳಿಗೆ ವೀಸಾಗಳನ್ನು ಸ್ಥಗಿತಗೊಳಿಸಿತು ಮತ್ತು ದೇಶಾದ್ಯಂತ ಹೆಚ್ಚಿನ ಭದ್ರತಾ ಕ್ರಮಗಳನ್ನು ಜಾರಿಗೊಳಿಸಿತು.ಇದರ ಮಧ್ಯೆ, ಎಕ್ಸ್ ಬಳಕೆದಾರರು “ಬ್ರೇಕಿಂಗ್ ನ್ಯೂಸ್: ಅಲ್ ಜಜೀರಾ ಚಾನೆಲ್ ಭಾರತೀಯ ಸೇನೆ ಪಾಕಿಸ್ತಾನದ ಸಿಯಾಲ್ಕೋಟ್ ಮೇಲೆ ನಡೆಸಿದ ದಾಳಿಯ ಹೊಸ ದೃಶ್ಯಗಳನ್ನು ಬಿಡುಗಡೆ ಮಾಡಿದೆ” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ
Breaking News 🚨: Al Jazeera Channel has released new footage of the Indian Army's attack on Sialkot, Pakistan.#Sialkot #IndianArmy #IndiaPakistan #PahelgamTerroristattack #PehalgamTerroristAttack pic.twitter.com/TSk48Epe5h
— Dr. Kiran J Patel (@kiranpatel1977) April 30, 2025
ಈ ವೈರಲ್ ವಿಡಿಯೋದಲ್ಲಿ ಕೂಡ ದೊಡ್ಡ ಸ್ಪೋಟದ ಘಟನೆ ಸಂಭವಿಸಿರುವ ರೀತಿ ಕಂಡು ಬಂದಿದ್ದು, ತೀವ್ರ ಸ್ವರೂಪದ ಬೆಂಕಿಗೆ ಕೆಲ ಕಟ್ಟಡಗಳು ಆಹುತಿಯಾಗಿರುವುದನ್ನು ಕೂಡ ಕಾಣ ಬಹುದಾಗಿದೆ. ಈ ವಿಡಿಯೋವನ್ನು ನೋಡಿದ ಹಲವು ಮಂದಿ ವೈರಲ್ ಪೋಸ್ಟ್ ಅನ್ನು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
BIG BREAKING
Al Jazeera Channel has released new footage of the Indian Army's attack on Sialkot, Pakistan
Well done Indian army#CasteCensus can be done of Pakistanis too.#IndianArmy #IndoPakBorder #PakistanArmyBehindPahalgam #IndiaPakistanWar #Sialkot #LOC #IndiaPakWar pic.twitter.com/BqsAJFvaih
— Pranay Maheshwari (@PranayHinger) April 30, 2025
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 10 ನವೆಂಬರ್ 2023ರಂದು ದಿ ಸನ್ ಎಂಬ ಇಂಗ್ಲೆಂಡ್ ಆವೃತ್ತಿಯ ಡಿಜಿಟಲ್ ಸುದ್ದಿ ಪೋರ್ಟಲ್ನಲ್ಲಿ ವರದಿಯೊಂದು ಕಂಡು ಬಂದಿದೆ. ಈ ವರದಿಯ ಪ್ರಕಾರ ವೈರಲ್ ವಿಡಿಯೋ ಇಸ್ರೇಲ್ ಹಮಾಸ್ ಮೇಲೆ ನಡೆಸಿದ ವಾಯು ದಾಳಿಗೆ ಸಂಬಂಧಿಸಿದ್ದಾಗಿದೆ.

ಈ ಕುರಿತು ಇನ್ನಷ್ಟು ಮಾಹಿತಿಗಾಗಿ ನಾವು ಕೆಲವೊಂದು ಕೀ ವರ್ಡ್ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ನವೆಂಬರ್ 9, 2023 ರಂದು ಅಲ್ ಜಜೀರಾ ಇಂಗ್ಲಿಷ್ (@AJEnglish) ಹಂಚಿಕೊಂಡ X ಪೋಸ್ಟ್ ಕಂಡು ಬಂದಿದೆ. ಇದರಲ್ಲಿ ಗಾಜಾದ ಇಂಡೋನೇಷಿಯನ್ ಆಸ್ಪತ್ರೆಯ ಮೇಲೆ ಇಸ್ರೇಲಿ ಪಡೆಗಳು ನಡೆಸಿದ ದಾಳಿಯ ದೃಶ್ಯ ಎಂದು ವಿವರಿಸಲಾಗಿದೆ. ಈ ದೃಶ್ಯಗಳನ್ನು 2023 ರಲ್ಲಿ ಇಸ್ರೇಲ್-ಗಾಜಾ ಸಂಘರ್ಷದ ಸಮಯದಲ್ಲಿ ರೆಕಾರ್ಡ್ ಮಾಡಲಾಗಿದೆಯೇ ಹೊರತು ಭಾರತೀಯ ಸೇನೆ ಅಥವಾ ಪಾಕಿಸ್ತಾನದ ಸಿಯಾಲ್ಕೋಟ್ನಲ್ಲಿ ನಡೆದ ಇತ್ತೀಚಿನ ಘಟನೆಯಲ್ಲ ಎಂಬುದು ಈ ಪೋಸ್ಟ್ ಮೂಲಕವೇ ಸಾಬೀತಾಗಿದೆ.
Video captured the moment a series of explosions rocked the vicinity of the Indonesian hospital in Gaza.
The Palestinian interior ministry said the area was attacked by Israeli fighter jets. pic.twitter.com/p95p7q7mUZ
— Al Jazeera English (@AJEnglish) November 9, 2023
ಒಟ್ಟಾರೆಯಾಗಿ ಹೇಳುವುದಾದರೆ ವೈರಲ್ ವಿಡಿಯೋದಲ್ಲಿ ಹೇಳಲಾಗುತ್ತಿರುವ ರೀತಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತವು ಪಾಕಿಸ್ತಾನದ ಸಿಯಾಲ್ಕೋಟ್ ಮೇಲೆ ನಡೆಸಿದ ದಾಳಿ ನಡೆಸಿದೆ ಎಂಬುದು ಸುಳ್ಳಾಗಿದೆ. ವೈರಲ್ ವಿಡಿಯೋ ಇಸ್ರೇಲ್ ಗಾಜಾದ ಮೇಲೆ ನಡೆಸಿದ ದಾಳಿಗೆ ಸಂಬಂಧಿಸಿದ್ದಾಗಿದೆ. ಹೀಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ.
ಇದನ್ನೂ ಓದಿ : Fact Check | ಗಡಿಯಲ್ಲಿ ಭಾರತೀಯ ಸೇನಾ ಠಾಣೆಗಳನ್ನು ಪಾಕಿಸ್ತಾನ ನಾಶಪಡಿಸಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

