ಜಪಾನಿನಲ್ಲಿ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ್ದಕ್ಕಾಗಿ ಹರಿಯಾಣದ ಪ್ರಮೋದ್ ರಾಥೋಡ್ ಎಂಬ ವ್ಯಕ್ತಿಯನ್ನು ಜಪಾನ್ನಲ್ಲೇ ಬಂಧಿಸಲಾಗಿದೆ. ಭಾರತೀಯರ ಬಗ್ಗೆ ತಪ್ಪು ಕಲ್ಪನೆಗಳು ಮತ್ತು ಕೆಟ್ಟ ಅಭಿಪ್ರಾಯ ಮೂಡಲು ಇಂತಹ ಕಿಡಿಗೇಡಿಗಳು ಮಾಡುವ ದುಷ್ಕ್ರತ್ಯಗಳೇ ಸಾಕಾಗಿದೆ. ಇವರಿಂದ ಭಾರತಕ್ಕೆ ಮತ್ತು ಭಾರತೀಯರಿಗೆ ಅಪಮಾನ ಉಂಟಾಗುತ್ತಿದೆ. ಇಂತಹವರು ಮನುಕುಲಕ್ಕೆ ಅಪಾಯಕಾರಿ ಎಂದು ಹಲವರು ಅಭಿಪ್ರಾಯವನ್ನು ವ್ಯಕ್ತ ಪಡಿಸಿ ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದ್ದಾರೆ.
https://twitter.com/SAChroniclesX/status/1881232251767460308
ಇನ್ನೂ ಕೆಲವರು ಭಾರತದ ವಿರುದ್ಧವೇ ಈ ಪೋಸ್ಟ್ ಅನ್ನು ಬಳಸಿಕೊಂಡು ವಿವಿಧ ರೀತಿಯಲ್ಲಿ ಬರೆದುಕೊಳ್ಳುತ್ತಿದ್ದಾರೆ. ಇದು ದೇಶದ ಸಾರ್ವಭೌಮತ್ವಕ್ಕೆ, ದೇಶದ ಘನತೆಗೆ ಧಕ್ಕೆ ತರುವಂತೆ ಹಲವು ವಿದೇಶಿಗರು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಈ ಪೋಸ್ಟ್ಗಳನ್ನು ನೋಡಿದ ಇನ್ನೀತರೆ ವಿದೇಶಿಗರು ವೈರಲ್ ಪೋಸ್ಟ್ ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ಹಿನ್ನೆಲೆ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
https://twitter.com/aboutmasjidilI/status/1881724522694582434
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಿಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 14 ಸೆಪ್ಟಂರ್ 2024ರಂದು ದಿ ನೋಟಿಸರ್ ಎಂಬ ಎಕ್ಸ್ ಹ್ಯಾಂಡಲ್ನಿಂದ ಹಂಚಿಕೊಳ್ಳಲಾದ ಪೋಸ್ಟ್ವೊಂದು ಕಂಡು ಬಂದಿದೆ. ಇದರಲ್ಲಿ ರೈಲಿನಲ್ಲಿ ಮಲಗಿದ್ದ ಪ್ರೌಢಶಾಲಾ ಬಾಲಕಿಯನ್ನು ಎಳೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಕಾಗಿ 31 ವರ್ಷದ ಪಾಕಿಸ್ತಾನಿ ಅಫೈಲ್ ಮುಹಮ್ಮದ್ನನ್ನು ಟೋಕಿಯೊದಲ್ಲಿ ಬಂಧಿಸಲಾಗಿದೆ ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.
Pakistani man Afzal Muhammad, 31, was arrested in Tokyo this week for allegedly groping a sleeping high school girl on a train before dragging her off and sexually assaulting her.https://t.co/UBlomFEoIu
— The Noticer (@NoticerNews) September 14, 2024
ಈ ಕುರಿತು ಇನ್ನಷ್ಟು ಮಾಹಿತಿಗಾಗಿ ಹುಡುಕಾಟವನ್ನು ನಡೆಸಿದಾಗ ನೋಟಿಸರ್ ನ್ಯೂಸ್ ಎಂಬ ಸುದ್ದಿ ಸಂಸ್ಥೆ 15 ಸೆಪ್ಟೆಂಬರ್ 2024ರಂದು ಪ್ರಕಟಿಸಿದ ಪೂರ್ಣ ಪ್ರಮಾಣದ ವರದಿಯೊಂದು ಕಂಡು ಬಂದಿದೆ. ಈ ವರದಿಯ ಪ್ರಕಾರ ಅಫೈಲ್ನನ್ನು ಅಕಿಶಿಮಾ ನಗರದ ನಕಾಗಾಮಿ-ಚೋ ಎಂಬಲ್ಲಿನ ವೃತ್ತಿಪರ ಶಾಲೆಯ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ, ಈತನನ್ನು ಸೆಪ್ಟೆಂಬರ್ 11 ರಂದು ಟೋಕಿಯೊ ಮೆಟ್ರೋಪಾಲಿಟನ್ ಪೋಲೀಸ್ನ ಟಕಾವೊ ಪೊಲೀಸ್ ಠಾಣೆಯ ಅಧಿಕಾರಿಗಳು ಬಂಧಿಸಿದ್ದಾರೆ. ಹೈಸ್ಕೂಲ್ ಬಾಲಕಿಯ ಮೇಲೆ ಹಲ್ಲೆ ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನ ನಡೆಸಿದ ಶಂಕೆಯ ಮೇಲೆ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಯಿತು. ಆಗಸ್ಟ್ 22 ರಂದು ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಜೆಆರ್ ಚುವೋ ಲೈನ್ ರೈಲಿನಲ್ಲಿ ಈತ ದುಷ್ಕೃತ್ಯಕ್ಕೆ ಯತ್ನಿಸಿದ್ದಾನೆ ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.

ಇನ್ನು ಈ ಘಟನೆ ಕುರಿತು ಕುರಿತು ಜಿಜಿ ಪ್ರೆಸ್, ಸ್ಯಾಂಕಿ ನ್ಯೂಸ್ ಮತ್ತು ಲೈವ್ ಡೋರ್ ನ್ಯೂಸ್ ಸೇರಿದಂತೆ ಹಲವಾರು ಜಪಾನೀ ಮಾಧ್ಯಮಗಳಿಂದ ವರದಿಗಳನ್ನು ಮಾಡಿರುವುದು ಕಂಡು ಬಂದಿವೆ. ಈ ವರದಿಗಳಲ್ಲಿ ಕೂಡ ಟೋಕಿಯೊ ಮೆಟ್ರೋಪಾಲಿಟನ್ ಪೋಲೀಸ್ ಇಲಾಖೆಯ ಟಕಾವೊ ಪೊಲೀಸ್ ಠಾಣೆಯು ರೈಲಿನಲ್ಲಿ ಹೈಸ್ಕೂಲ್ ಬಾಲಕಿಯನ್ನು ಲೈಂಗಿಕವಾಗಿ ನಿಂದಿಸಿದ ಮತ್ತು ನಂತರ ಅವಳ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ 31 ವರ್ಷದ ಪಾಕಿಸ್ತಾನಿ ವ್ಯಕ್ತಿಯನ್ನು ಸೆಪ್ಟೆಂಬರ್ 11 ರಂದು ಬಂಧಿಸಲಾಗಿದೆ ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ. ಹಾಗಾಗಿ ಬಂಧಿತ ವ್ಯಕ್ತಿ ಭಾರತೀಯನಲ್ಲ ಎಂಬುದು ಈ ವರದಿಗಳಿಂದ ಸ್ಪಷ್ಟವಾಗಿದೆ.
電車で胸触り、茂みで性的暴行か パキスタン人の男逮捕―警視庁
JR中央線内で女子高生にわいせつな行為をした上、登山道脇の茂みに連れ込み性的暴行を加えたとして、警視庁高尾署は11日、わいせつ略取と不同意性交容疑で、パキスタン国籍の専門学校生を逮捕しました。https://t.co/u3ZKOs4OZk
— 時事ドットコム(時事通信ニュース) (@jijicom) September 11, 2024
電車内で女子高生にわいせつ行為、下車して暴行 容疑でパキスタン国籍の31歳男を逮捕 https://t.co/IHEqCQOjIx
逮捕容疑は、走行中のJR中央線車内で女子生徒の胸を触り下着を脱がせるなどわいせつな行為をした後、生徒の腕を引いて高尾駅で下車し、暴行を加えたとしている。
— 産経ニュース (@Sankei_news) September 11, 2024
【否認】電車で女子高生の胸触り、茂みで性的暴行か パキスタン人の男逮捕https://t.co/u96eV89GUF
男は電車内で寝ていた女子生徒の隣に座り、わいせつな行為をした。生徒が抵抗できずにいると終点の高尾駅で腕をつかみ、茂みに連れ込んだ。生徒はかばんを奪われ、逃げられなかったという。
— ライブドアニュース (@livedoornews) September 11, 2024
ಒಟ್ಟಾರೆಯಾಗಿ ಈ ಎಲ್ಲಾ ವರದಿಗಳನ್ನು ಗಮನಿಸಿದಾಗ ಜಪಾನಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಘಟನೆ ನಿಜವಾಗಿದೆ. ಆದರೆ ಈ ಕುಕೃತ್ಯ ಎಸಗಿದ ವ್ಯಕ್ತ ಭಾರತೀಯನಲ್ಲ. ಪಾಕಿಸ್ತಾನ ಮೂಲದ 31 ವರ್ಷದ ಅಫೈಲ್ ಮುಹಮ್ಮದ್ ಆರೋಪಿ ಎಂದು ಹಲವು ವರದಿಗಳಿಂದ ಸಾಬೀತಾಗಿದೆ. ಹಾಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ತೇಜಸ್ವಿ ಸೂರ್ಯ ಮಹಾ ಕುಂಭಮೇಳದಲ್ಲಿ ಭಾಷಣ ಮಾಡಿದ್ದಾರೆ ಎಂಬುದು ಸುಳ್ಳು

