ಸಂಸತ್ತಿನ ಎರಡೂ ಸದನಗಳಲ್ಲಿ ಅಂಗೀಕಾರವಾದ ನಂತರ ಮತ್ತು ರಾಷ್ಟ್ರಪತಿಗಳ ಒಪ್ಪಿಗೆ ಪಡೆದ ನಂತರ, ವಕ್ಫ್ (ತಿದ್ದುಪಡಿ) ಮಸೂದೆ ಈಗ ಕಾನೂನಾಗಿ ಮಾರ್ಪಟ್ಟಿದೆ. ಈ ಸಂದರ್ಭದಲ್ಲಿ, ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಮಸೂದೆಗಾಗಿ ರಚಿಸಲಾದ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಅಧ್ಯಕ್ಷರು ಮತ್ತು ಸದಸ್ಯರು ಚಹಾ ಸೇವಿಸುತ್ತಾ ನಗುವುದು ಮತ್ತು ತಮಾಷೆ ಮಾಡುವುದನ್ನು ನೋಡಬಹುದಾದ ಮತ್ತು ಕೇಳಬಹುದಾದ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಳ್ಳುತ್ತಿದ್ದಾರೆ. ಇದರಲ್ಲಿ ವಕ್ಫ್ (ತಿದ್ದುಪಡಿ) ಮಸೂದೆಯ ಬಗ್ಗೆ ಧ್ವನಿ ಎತ್ತಿರುವ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಕೂಡ ಇದ್ದಾರೆ. ಇದರಿಂದ ವಿಡಿಯೋ ಕೂಡ ವೈರಲ್ ಆಗಿದೆ.

ಇದನ್ನು ನೋಡಿದ ಹಲವು ಮಂದಿ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಮುಸಲ್ಮಾನರಿಗೆ ದ್ರೋಹ ಬಗೆದಿದ್ದಾರೆ, ಅವರು ಬಿಜೆಪಿಯೊಂದಿಗೆ ಇದ್ದಾರೆ. ರಹಸ್ಯವಾಗಿ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ ಎಂದೆಲ್ಲ ಬರೆದುಕೊಂಡು ಪೋಸ್ಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಇವರು ಮೇಲ್ನೋಟದಲ್ಲಿ ಹೊಡೆದಾಡಿಕೊಳ್ಳುತ್ತಾರೆ, ಆದರೆ ಅಂತರಂಗದಿಂದ ಗೆಳೆಯರಾಗಿರುತ್ತಾರೆ ಎಂದು ಬರೆದುಕೊಂಡಿದ್ದಾರೆ. ಹೀಗೆ ವಿವಿಧ ರೀತಿಯಲ್ಲಿ ಅಭಿಪ್ರಾಯ ಹುಟ್ಟು ಹಾಕಿರುವ ವೈರಲ್ ವಿಡಿಯೋ ಕುರಿತು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
https://twitter.com/Vaibhavforaap/status/1908483735143461046
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಜನವರಿ 29 ರಂದು ಸುದ್ದಿ ಸಂಸ್ಥೆ ಪಿಟಿಐನ ಅಧಿಕೃತ ಎಕ್ಸ್ ಹ್ಯಾಂಡಲ್ನಲ್ಲಿ ವೈರಲ್ ವಿಡಿಯೋ ಕಂಡು ಬಂದಿದೆ. ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಈ ವೀಡಿಯೊವು ಜಂಟಿ ಸಂಸದೀಯ ಸಮಿತಿಯ ಸದಸ್ಯರು ಕರಡು ವರದಿಯನ್ನು ಅಂಗೀಕರಿಸಿದ ನಂತರ ಚಹಾ ಕುಡಿಯುತ್ತಾ ವಕ್ಫ್ (ತಿದ್ದುಪಡಿ) ಮಸೂದೆಯ ಸಭೆಯನ್ನು ಪರಿಶೀಲಿಸುತ್ತಿರುವ ವೀಡಿಯೊವಾಗಿದೆ ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.
VIDEO | Members of the Joint Parliamentary Committee scrutinising the Waqf (Amendment) Bill, meet over tea after it adopted the draft report.#WaqfAmendmentBill2024
(Full video available on PTI Videos – https://t.co/n147TvrpG7) pic.twitter.com/wLbjBOXZoA
— Press Trust of India (@PTI_News) January 29, 2025
ಏಪ್ರಿಲ್ 2 ರಂದು, ಕಿರಣ್ ರಿಜಿಜು ಅವರು ಮುಸ್ಲಿಂ ವಕ್ಫ್ (ತಿದ್ದುಪಡಿ) ಮಸೂದೆ, 2024 ಅನ್ನು ಮಂಡಿಸಿದರು , ಇದು ಮುಸ್ಲಿಂ ವಕ್ಫ್ ಕಾಯಿದೆ, 1923 ರ ತಿದ್ದುಪಡಿ ಮಸೂದೆಯಾಗಿದೆ. ಸುದ್ದಿ ವರದಿಗಳ ಪ್ರಕಾರ , ಈ ಮಸೂದೆಯನ್ನು ಲೋಕಸಭೆಯಲ್ಲಿ 12 ಗಂಟೆಗಳಿಗೂ ಹೆಚ್ಚು ಕಾಲ ಚರ್ಚಿಸಲಾಯಿತು ಮತ್ತು ನಂತರ ಅದನ್ನು ಸದನವು ಅಂಗೀಕರಿಸಿತು. ಈ ಮಸೂದೆಯ ಪರವಾಗಿ 288 ಸದಸ್ಯರು ಮತ ಚಲಾಯಿಸಿದರೆ, ವಿರುದ್ಧವಾಗಿ 232 ಮತಗಳು ಚಲಾವಣೆಯಾದವು. ರಾಷ್ಟ್ರಪತಿಗಳು ಏಪ್ರಿಲ್ 6 ರಂದು ಅದನ್ನು ಅನುಮೋದಿಸಿದರು.
#BREAKING | President Draupadi Murmu signs Waqf (Amendment) bill 2025 into lawhttps://t.co/cn1IKWBa8n pic.twitter.com/Fuxm620ETE
— Hindustan Times (@htTweets) April 5, 2025
ಆದರೆ ವೈರಲ್ ವಿಡಿಯೋ 29 ಜನವರಿ 2025ರದ್ದಾಗಿದೆ. ಹಾಗೆ ನೋಡುವುದಾದರೆ 2 ಏಪ್ರಿಲ್ 2025ರಂದು ಲೋಕಸಭೆಯಲ್ಲಿ ಮಸೂದೆಯ ಕುರಿತು ಮಾತನಾಡಿದ್ದ ಅಸಾದುದ್ದೀನ್ ಓವೈಸಿ ಮಸೂದೆಯ ಪ್ರತಿಯನ್ನು ಹರಿದು ಅದರ ವಿರುದ್ಧ ಮಾತನಾಡಿದ್ದಾರೆ. ಇದು ವೈರಲ್ ವಿಡಿಯೋ ಹಳೆಯದು ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಸಂಸತ್ತಿನಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ ಅಂಗೀಕಾರವಾದಾಗ ಬಿಜೆಪಿ ಸಂಸದರೊಂದಿಗೆ ಅಸಾದುದ್ದೀನ್ ಓವೈಸಿ ಸಂಭ್ರಮಾಚರಣೆ ಮಾಡಿದ್ದಾರೆ ಎಂಬ ವಿಡಿಯೋ ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋ ಜನವರಿಯಲ್ಲಿ ಚಿತ್ರೀಕರಿಸಲಾಗಿದೆ. ಈ ಕಾರಣದಿಂದ ವೈರಲ್ ವಿಡಿಯೋವನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ವಕ್ಫ್ ತಿದ್ದುಪಡಿ ಮಸೂದೆಯಿಂದ ಮುಸ್ಲಿಂ ವ್ಯಕ್ತಿಯ ಶವವನ್ನು ಅಂತ್ಯಕ್ರಿಯೆ ಮಾಡಲು ನಿರಾಕರಿಸಲಾಯಿತು ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

