ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಪೂರಿ ಜಗನ್ನಾಥನ ರಥಯಾತ್ರೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ‘ನಾಟಕ’ ಎಂದು ಕರೆದಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಆ ಮೂಲಕ ಸಂಸತ್ತಿನ ವಿಪಕ್ಷ ನಾಯಕನನ್ನು ಹಿಂದೂ ವಿರೋಧಿ ಎಂದು ಕರೆದಿರುವ ಹಲವರು, ರಾಹುಲ್ ಗಾಂಧಿ ವಿರುದ್ಧ ವ್ಯಾಪಕವಾಗಿ ಟೀಕೆ ಮಾಡುತ್ತಿದ್ದಾರೆ.

ವೈರಲ್ ವಿಡಿಯೋವನ್ನು ಕೂಡ ಪರಿಶೀಲನೆ ನಡೆಸಿದಾಗ ಅದರಲ್ಲಿ ರಾಹುಲ್ ಗಾಂಧಿ ಅವರು “ ಊಹಿಸಿಕೊಳ್ಳಿ ಒಡಿಶಾದಲ್ಲಿ ಜಗನ್ನಾಥ ಯಾತ್ರೆ ನಡೆದಾಗ, ರಥ ಹೊರಬರುತ್ತದೆ, ಲಕ್ಷಾಂತರ ಜನರು ಅದನ್ನು ವೀಕ್ಷಿಸುತ್ತಾರೆ, ಅದರ ಹಿಂದೆ ಸಾಗುತ್ತಾರೆ. ಮತ್ತು ನಂತರ ಒಂದು ನಾಟಕ ನಡೆಯುತ್ತದೆ.” ಎಂದು ಹೇಳುವುದು ಕಂಡು ಬಂದಿದೆ. ಹೀಗಾಗಿ ವೈರಲ್ ವಿಡಿಯೋವನ್ನು ಸಾಕಷ್ಟು ಮಂದಿ ನಿಜವೆಂದು ಬಾವಿಸಿ ವಿಡಿಯೋವನ್ನು ಹಂಚಿಕೊಂಡು ರಾಹುಲ್ ಗಾಂಧಿ ಅವರು ವಿರುದ್ಧ ವ್ಯಾಪಕವಾಗಿ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪತ್ತೆ ಹಚ್ಚೋಣ
ओडिशा की धरती पर खड़े राहुल गांधी ने भगवान जगन्नाथ की रथ यात्रा को बताया "नाटक" !
कांग्रेस ने आखिर वोट बैंक के लिए महाप्रभु का अपमान किया है, कांग्रेस ने ओडिशा के अनगिनत भक्तों और लोगों की भावनाओं को आहत किया है।
😡😰🤔
*आखिर वो कौन हिन्दू हैँ जो कांग्रेस को वोट देते हैँ* pic.twitter.com/on3dWmQzi4— R.K.Sahu (मोदी का परिवार) (@RKSahu15) July 13, 2025
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೊ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ವಿಡಿಯೋವಿನ ಮೂಲ ವಿಡಿಯೋ ಕಂಡು ಬಂದಿದ್ದು, ಇದನ್ನು ಜುಲೈ 11 ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗಿದೆ. ಈ ವಿಡಿಯೋವಿನ 25 ನಿಮಿಷಗಳಲ್ಲಿ ರಾಹುಲ್ ಗಾಂಧಿ ಅವರು ವೈರಲ್ ಹೇಳಿಕೆಗೆ ಸಂಬಂಧಿಸಿದ ಪೂರ್ಣ ಆವೃತ್ತಿಯ ವಿಡಿಯೋ ಆರಂಭವಾಗುತ್ತದೆ.
ಅದರಲ್ಲಿ ರಾಹುಲ್ ಗಾಂಧಿ ಅವರು “ನಾವು ಎಲ್ಲಿ ನೋಡಿದರೂ, ಅದು ಒಡಿಶಾ, ಛತ್ತೀಸ್ಘಢವಾಗಿರಲಿ, ನಾವು ಎಲ್ಲಿ ನೋಡಿದರೂ, ಒಂದೇ ಹೆಸರು ಇದೆ – ಅದಾನಿ, ಅದಾನಿ, ಅದಾನಿ. ಇದರರ್ಥ ಅದಾನಿ ಒಡಿಶಾ ಸರ್ಕಾರವನ್ನು ನಡೆಸುತ್ತಿದ್ದಾರೆ, ಅದಾನಿ ನರೇಂದ್ರ ಮೋದಿಯವರನ್ನು ನಡೆಸುತ್ತಿದ್ದಾರೆ. ಒಡಿಶಾದಲ್ಲಿ ಜಗನ್ನಾಥ ಯಾತ್ರೆ ನಡೆದಾಗ. ಸ್ವಲ್ಪ ಊಹಿಸಿ, ಒಂದು ರಥ ಹೊರಬರುತ್ತದೆ. ಲಕ್ಷಾಂತರ ಜನರು, ಲಕ್ಷಾಂತರ ಜನರು ಅವನನ್ನು ನೋಡುತ್ತಾರೆ, ಅವನನ್ನು ಅನುಸರಿಸುತ್ತಾರೆ. ತದನಂತರ ಒಂದು ನಾಟಕವಿದೆ. ಅದಾನಿ ಜಿ ಮತ್ತು ಅವರ ಕುಟುಂಬಕ್ಕಾಗಿ ರಥವನ್ನು ನಿಲ್ಲಿಸಲಾಗುತ್ತದೆ. ಇದು ಒಡಿಶಾ ಸರ್ಕಾರದ ಬಗ್ಗೆ ಎಲ್ಲದರ ಬಗ್ಗೆ ನಿಮಗೆ ತಿಳುವಳಿಕೆಯನ್ನು ನೀಡುತ್ತದೆ. ಇದು ಒಡಿಶಾ ಸರ್ಕಾರವಲ್ಲ, ಇದು ನಿಮ್ಮ ಸರ್ಕಾರವಲ್ಲ, ಇದು ಅದಾನಿಯಂತಹ 5-6 ಶತಕೋಟ್ಯಾಧಿಪತಿಗಳ ಸರ್ಕಾರ” ಎಂದು ರಾಹುಲ್ ಗಾಂಧಿ ಅದಾನಿ ಅವರನ್ನು ಟೀಕಿಸಿರುವುದು ಕಂಡು ಬಂದಿದೆ. ಈ ಕುರಿತು ಹಲವು ಮಾಧ್ಯಮಗಳು ಕೂಡ ವರದಿ ಮಾಡಿರುವುದು ಕಂಡು ಬಂದಿದೆ.

ಅದಾನಿ ಮತ್ತು ಅವರ ಕುಟುಂಬಕ್ಕಾಗಿ ನಾಟಕೀಯವಾಗಿ ಜಗನ್ನಾಥ ರಥವನ್ನು ನಿಲ್ಲಿಸಲಾಗಿದೆ ಎಂದು ರಾಹುಲ್ ಗಾಂಧಿ ವೀಡಿಯೋದಲ್ಲಿ ಆರೋಪಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆದರೆ ವೈರಲ್ ವೀಡಿಯೋದಲ್ಲಿ, ಗೊಂದಲ ಸೃಷ್ಟಿಸಲು ಅದಾನಿ ಭಾಗವನ್ನು ಕತ್ತರಿಸಲಾಗಿದೆ.ರಾಹುಲ್ ಗಾಂಧಿ ಅವರ ಈ ಹೇಳಿಕೆಗೆ ಸಂಬಂಧಿಸಿದ ಹಲವಾರು ಮಾಧ್ಯಮ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ. ಜುಲೈ 11 ರಂದು ಪ್ರಕಟವಾದ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿಯಲ್ಲಿ, ಒಡಿಶಾದಲ್ಲಿ ಬಿಜೆಪಿ ಸರ್ಕಾರವನ್ನು 5-6 ದೊಡ್ಡ ಕೈಗಾರಿಕೋದ್ಯಮಿಗಳು ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ ಮತ್ತು ಅದರ ಪರಿಣಾಮವು ಪುರಿಯಲ್ಲಿನ ರಥಯಾತ್ರೆಯ ಸಮಯದಲ್ಲಿ ಕಂಡುಬಂದಿದೆ ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಸಂಸತ್ತಿನ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಪುರಿ ಜಗನ್ನಾಥ ರಥಯಾತ್ರೆಯನ್ನು ನಾಟಕ ಎಂದು ಕೆರೆದಿದ್ದಾರೆ ಎಂಬುದು ಸುಳ್ಳಾಗಿದೆ. ಮೂಲ ವಿಡಿಯೋದಲ್ಲಿ ರಾಹುಲ್ ಗಾಂಧಿ ಅವರು ಪುರಿ ಜಗನ್ನಾಥ ರಥಯಾತ್ರೆಯನ್ನು ಅದಾನಿ ಕುಟುಂಬಕ್ಕಾಗಿ ಸ್ವಲ್ಪ ಕಾಲ ನಿಲ್ಲಿಸಲಾಗುತ್ತದೆ ಎಂದು ಹೇಳಿರುವುದು ಕಂಡು ಬಂದಿದೆ. ವೈರಲ್ ವಿಡಿಯೋವನ್ನು ಎಡಿಟ್ ಮಾಡಿ ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಈ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ರಾಹುಲ್ ಗಾಂಧಿ ಜೊತೆಗೆ ನ್ಯಾಯಾಧೀಶರು ಸೆಲ್ಫಿ ತೆಗೆದುಕೊಂಡಿದ್ದಾರೆ ಎಂಬುದು ಸುಳ್ಳು

