ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಮಗುವಿನ ಮುಂದೆಯೇ ಮಹಿಳೆಯ ಮೇಲೆ ಕ್ರೂರವಾಗಿ ಹಲ್ಲೆ ಮಾಡಿ, ಆಕೆಯ ಕೂದಲನ್ನು ಎಳೆಯುವುದು ಹಾಗೂ ಚಿತ್ರಹಿಂಸೆ ನೀಡುವ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದನ್ನು ಭಾರತದಲ್ಲಿ ನಡೆದಿರುವ ಘಟನೆ ಎಂದು ಪೋಸ್ಟ್ ಮಾಡಿ ಹಲವರು ವಿವಿಧ ಬರಹಗಳನ್ನು ಪ್ರಕಟಿಸುತ್ತಿದ್ದಾರೆ.

ಭಾರತದಲ್ಲಿ ಹಲವು ವರ್ಷಗಳಿಂದ ವಿವಿಧ ರೀತಿಯ ಸ್ತ್ರೀಯರ ಮೇಲಿನ ಹಲ್ಲೆಗೆ ಸಂಬಂಧಪಟ್ಟ ಪ್ರಕರಣಗಳು ಕಂಡು ಬಂದಿರುವುದರಿಂದ, ವೈರಲ್ ವಿಡಿಯೋವನ್ನು ನೋಡಿದ ಹಲವು ಮಂದಿ ಇದು ಭಾರತದಲ್ಲಿ ನಡೆದಿರುವ ಘಟನೆ ಎಂದು ಭಾವಿಸಿ, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
अब तो ऐसा लगता है भारत में ये मारने मराने का ट्रैंड चल रहा है ताकि ये क्रिमिनल न्यूज पेपर के हेड लाइन बन सकें
वैसे सावधान इंडिया तो टीवी पर बैन हो गया है अब सावधान इंडिया का लाइव शो रियल में देखने को मिलता है हर रोज😄
सबसे बड़ा रोल ये कैमरामैन का है,इसे तो अवॉर्ड मिलना चाहिए🩴 pic.twitter.com/39u1SWLhNp
— Imranzeemi (@imranzeemi) March 26, 2025
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಚಿತ್ರಗಳನ್ನು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟ ನಡೆಸಿದೆವು. ಈ ವೇಳೆ ನಮಗೆ ಮಲೇಷ್ಯಾ ಮೂಲದ ಸುದ್ದಿ ಪೋರ್ಟಲ್ ಅಲ್ಹಿಜ್ರಾ ಪ್ರಕಟಿಸಿದ ವರದಿಕಂಡುಬರಿದೆ. ಇದರಲ್ಲಿ ವೈರಲ್ ವಿಡಿಯೋವಿನ ಫೋಟೋವನ್ನು ಪ್ರಕಟಿಸಲಾಗಿದ್ದು, ಈ ಘಟನೆಯು 19 ನವೆಂಬರ್ 2022 ರಂದು ಮಲೇಷ್ಯಾದ ಬಾಟು 9 ಚೆರಾಸ್ನಲ್ಲಿ ಸಂಭವಿಸಿದೆ ಎಂದು ಉಲ್ಲೇಖಿಸಲಾಗಿದೆ

ಈ ಘಟನೆಯನ್ನು ವರದಿ ಮಾಡಿರುವ ಹಲವಾರು ಮಲೇಷ್ಯಾದ ಮಾಧ್ಯಮ ವರದಿಗಳು ನಮಗೆ ಕಂಡುಬಂದಿವೆ. ಈ ವರದಿಗಳು ವಿಡಿಯೋದಲ್ಲಿರುವ ವ್ಯಕ್ತಿಯನ್ನು ರೆಡುವಾನ್ ಮಹಮೂದ್ ಎಂದು ಉಲ್ಲೇಖಿಸಲಾಗಿದೆ. 2022ರ ನವಂಬರ್ 14ರಂದು ಚೆರಾಸ್ನ ಬಟು 9 ನಲ್ಲಿರುವ ಅವರ ಮನೆಯಲ್ಲಿ ಅಡ್ರಿನಾ ಮೊಹಮ್ಮದ್ ಆರಿಫ್ ಅವರನ್ನು ಸ್ವಯಂ ಪ್ರೇರಣೆಯಿಂದ ಹೊಡೆದು, ಚಿತ್ರಹಿಂಸೆ ನೀಡಿ, ಗಾಯಗೊಳಿಸಿದ್ದಕ್ಕಾಗಿ ಅವರಿಗೆ ಮಲೇಷ್ಯಾದ ಕಾನೂನಿನ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಈ ಮೂಲಕ ಈ ವಿಡಿಯೋಗೂ, ಭಾರತಕ್ಕೂ ಯಾವುದೇ ರೀತಿಯಾದಂತಹ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ

ಒಟ್ಟಾರೆಯಾಗಿ ಹೇಳುವುದಾದರೆ ನವಂಬರ್ 2022 ರಲ್ಲಿ ಮಲೇಷ್ಯಾದಲ್ಲಿ ಮಹಿಳೆಯ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ ಘಟನೆಯ ವಿಡಿಯೋವನ್ನು ಭಾರತದ ಘಟನೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹೀಗಾಗಿ ಈ ಸುಳ್ಳು ನಿರೂಪಣೆಯಿಂದ ಕೂಡಿರುವ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಕೇಂದ್ರ ಸರ್ಕಾರ ‘ಒಂದು ಕುಟುಂಬ ಒಂದು ಉದ್ಯೋಗ’ ಯೋಜನೆ ಜಾರಿಗೆ ತಂದಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

