ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಸಂಘರ್ಷದ ನಂತರ ವಿವಿಧ ರೀತಿಯ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅದರಲ್ಲೂ ಪ್ರಮುಖವಾಗಿ ಭಾರತದ ದಾಳಿಯಿಂದ ಪಾಕಿಸ್ತಾನದ ಪರಮಾಣು ಶಸ್ತ್ರಗಾರ ಹೊಂದಿದೆ ಎಂದು ಹೇಳಲಾದ ಕಿರಾನಾ ಬೆಟ್ಟಗಳ ನಡುವೆ ವಿಕಿರಣ ಸೋರಿಕೆಯಾಗಿದೆ ಎಂಬ ವದಂತಿಯೊಂದು ವ್ಯಾಪಕವಾಗಿ ಹಬ್ಬಿತು. ಇದೀಗ ಇದಕ್ಕೆ ಸಂಬಂಧ ಪಟ್ಟ ಫೋಟೋ ಎಂದು ವಿವಿಧ ಚಿತ್ರಗಳು ವೈರಲ್ ಆಗಿವೆ.

ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ನೋಡಿದ ಹಲವು ಮಂದಿ ಇದನ್ನು ನಿಜವೆಂದು ಭಾವಿಸಿ, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ವಿಕಿರಣ ಸೋರಿಕೆ ನಡೆದೆ ಇಲ್ಲ ಎಂದವರಿಗೆ ಇದು ಸಾಕ್ಷಿಯಾಗಿದೆ ಎಂದು ಬರೆದುಕೊಂಡಿದ್ದಾರೆ. ಹೀಗೆ ವಿವಿಧ ರೀತಿಯಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ನ ನಿಜಾಂಶ ಏನು ಎಂಬುದನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ
Members of the US Department of Energy were seen near Pakistan's #KiranaHills , which were hit by India on May 9.#NuclearLeak pic.twitter.com/hnOoHgygZ8
— A Kshetrapal (@kshetrapalbhati) May 13, 2025
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋಗಳ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋವಿನ ವಿವಿಧ ಕೀ ಪ್ರೇಮ್ಗಳನ್ನು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟ ನಡೆಸಿದೆವು. ಈ ವೇಳೆ ನಮಗೆ ವೈರಲ್ ಚಿತ್ರವು ಮೂಲತಃ ಕಾರ್ಲ್ ವಿಲ್ಲೀಸ್ ಅವರು 13 ಆಗಸ್ಟ್ 2012ರಂದು ಬರೆದ ಬ್ಲಾಗ್ ಪೋಸ್ಟ್ನಿಂದ ತೆಗೆದುಕೊಳ್ಳಲಾಗಿದೆ ಎಂಬುದು ಕಂಡು ಬಂದಿದೆ. 1949 ಮತ್ತು 1989ರ ನಡುವೆ ಸೋವಿಯತ್ ಯೂನಿಯನ್ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಗೆ ಪ್ರಾಥಮಿಕ ಸ್ಥಳವಾಗಿ ಕಾರ್ಯನಿರ್ವಹಿಸಿದ ಕಝಾಕಿಸ್ತಾನದ ಸೆಮಿಪಲಾಟಿನ್ಸ್ಕ್ ಪರಮಾಣು ಪರೀಕ್ಷಾ ತಾಣಕ್ಕೆ ಭೇಟಿ ನೀಡಿದ್ದರ ಚಿತ್ರ ಎಂದು ಬರೆದು ಕೊಂಡಿರುವುದು ಕಂಡುಬಂದಿದೆ.

ಗುಹೆಯಂತಹ ಪ್ರದೇಶದಿಂದ ಹೊರ ಬರುತ್ತಿರುವ ರಕ್ಷಣಾತ್ಮಕ ಬಿಳಿ ಸೂಟ್ಗಳು, ಮುಖವಾಡಗಳು ಮತ್ತು ಹೆಲ್ಮೆಟ್ಗಳನ್ನು ಧರಿಸಿ ಹಲವಾರು ವ್ಯಕ್ತಿಗಳು ಗುಹೆಯಂತಹ ಪ್ರದೇಶದಿಂದ ಹೊರ ಬರುತ್ತಿರುವುದು ಕಂಡುಬಂದಿದೆ. 27 ಆಗಸ್ಟ್ 2021 ರಂದು ಕಝಾಕಿಸ್ತಾನ್ ಸರ್ಕಾರಿ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿಯಲ್ಲಿ “ಸೆಮಿಪಲಾಟಿನ್ಸ್ಕ್ ಪರಮಾಣು ಪರೀಕ್ಷೆ ತಾಣವನ್ನು ಮುಚ್ಚಿದ 30ನೇ ವರ್ಷದ ನೆನಪಿಗಾಗಿ ಫೋಟೋ ಪ್ರದರ್ಶನ” ಎಂಬ ಶೀರ್ಷಿಕೆ ಇರುವುದು ಕಂಡುಬಂದಿದೆ. ಇದರಲ್ಲಿ ವೈರಲ್ ಫೋಟೋದ ಕೆಲವೊಂದು ಚಿತ್ರಗಳು ನಮಗೆ ಕಂಡುಬಂದಿದೆ, ಇನ್ನೂ ಹಲವು ಸುದ್ದಿ ತಾಣಗಳು ಇದೇ ಫೋಟೋವನ್ನು ಹಂಚಿಕೊಂಡು ಕಝಾಕಿಸ್ತಾನ್ನ ಪರಮಾಣು ಪರೀಕ್ಷಾ ಕೇಂದ್ರದ ಪರಿಶೀಲನೆ ಎಂದೇ ವರದಿಗಳನ್ನು ಪ್ರಕಟಿಸಿವೆ ಹಾಗಾಗಿ ವೈರಲ್ ಫೋಟೋವನ್ನು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿರುವುದು ಸ್ಪಷ್ಟವಾಗಿದೆ

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ರೀತಿ ಭಾರತದ ದಾಳಿಯಿಂದ ಪಾಕಿಸ್ತಾನದ ಕಿರಾನಾ ಬೆಟ್ಟಗಳ ನಡುವೆ ಪರಮಾಣು ವಿಕಿರಣಗಳ ಸೋರಿಕೆಯಾಗಿದೆ ಎಂದು ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕಝಾಕಿಸ್ತಾನದ್ದಾಗಿದೆ. ಈ ಫೋಟೋಗಳನ್ನು ಬಳಸಿಕೊಂಡು ಸುಳ್ಳು ಸುದ್ದಿಗಳನ್ನು ಹಡಲಾಗುತ್ತಿದೆ. ಹೀಗಾಗಿ ವೈರಲ್ ಫೋಟೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಮಾಹಿತಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಪಾಕಿಸ್ತಾನದ ನೂರ್ ಖಾನ್ ವಾಯುನೆಲೆ ಧ್ವಂಸಗೊಂಡ ವಿಡಿಯೋ ಎಂದು ಸುಡಾನ್ ವಿಮಾನ ನಿಲ್ದಾಣದ ದೃಶ್ಯಗಳ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

