ಇಂದು ಮಹಾರಾಷ್ಟ್ರದಾದ್ಯಂತ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಗೆ ಸಂಬಂಧ ಪಟ್ಟಂತೆ ಕಳೆದ ಹಲವು ದಿನಗಳಿಂದ ವಿವಿಧ ರೀತಿಯಾದ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ಕೆಲವೊಂದು ಸುದ್ದಿಗಳು ನಿಜವಾಗಿದ್ದರೆ, ಇನ್ನೂ ಕೆಲವೊಂದು ಸುದ್ದಿಗಳು ಸುಳ್ಳು ಮಾಹಿತಿಯಿಂದ, ಸುಳ್ಳು ನಿರೂಪಣೆಯಿಂದ ಕೂಡಿರುತ್ತಿದ್ದವು. ಇದು ಮತದಾರರು ಸೇರಿದಂತೆ ಬೇರೆ ಬೇರೆ ರಾಜ್ಯಗಳ ಜನರಲ್ಲೂ ಕೂಡ ಗೊಂದಲವವನ್ನು ಮೂಡಿಸುತ್ತಿದ್ದವು. ಇದೀಗ ಅದೇ ರೀತಿಯ ವಿಡಿಯೋವೊಂದು ಮಹಾ ವಿಕಾಸ್ ಅಘಾಡಿಗೆ ಸಂಬಂಧ ಪಟ್ಟಂತೆ ಮಹಾರಾಷ್ಟ್ರದ ಮತದಾರರಲ್ಲಿ ಗೊಂದಲವನ್ನು ಮೂಡಿಸುತ್ತಿದೆ.
𝐂𝐫𝐨𝐰𝐝 𝐭𝐡𝐫𝐨𝐧𝐠 𝐌𝐕𝐀 𝐫𝐚𝐥𝐥𝐲 𝐚𝐭 𝐁𝐊𝐂 𝐢𝐧 𝐌𝐮𝐦𝐛𝐚𝐢 | Overview of the meeting recorded by drone. OMG what a crowd🔥🥳
Good morning Mumbai good bye mahayuti 😜😜 pic.twitter.com/XHUe3SlGrf— revolutionary human (@ssharmas2013) November 18, 2024
ವೈರಲ್ ಆಗಿರುವ ವಿಡಿಯೋದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿರುವುದು ಕಂಡು ಬಂದಿದ್ದು, ಇವು ಮಹಾ ವಿಕಾಸ್ ಅಘಾಡಿಯ ಚುನಾವಣ ರ್ಯಾಲಿಯಲ್ಲಿ ಭಾಗವಹಿಸಲು ಬಂದಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈ ವಿಡಿಯೋ ನೋಡಿದ ಹಲವು ಮಂದಿ ಮಹಾರಾಷ್ಟ್ರದಲ್ಲಿ ಈಗ ಮಹಾ ವಿಕಾಸ್ ಅಘಾಡಿಗೆ ಬಹುದೊಡ್ಡ ಬೆಂಬಲ ಸಿಕ್ಕಿದೆ ಎಂದು ಹಂಚಿಕೊಳ್ಳುತ್ತಿದ್ದಾರೆ. ಇದು ರಾಜಕೀಯ ವಲಯದಲ್ಲಿ ಕೂಡ ಚರ್ಚೆಯನ್ನು ಹುಟ್ಟು ಹಾಕಿದೆ. ಹಲವು ಮಂದಿ ಇದು ನಿಜವಾದ ವಿಡಿಯೋ ಕೂಡ ಅಲ್ಲ ಎಂದು ಪ್ರತಿಪಾದಿಸಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ಹಿನ್ನೆಲೆ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
https://twitter.com/Mumbaikhabar9/status/1858217072075153414
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ವೈರಲ್ ವೀಡಿಯೊವನ್ನು ಒಳಗೊಂಡ ಪೋಸ್ಟ್ ಅನ್ನು ಹಂಚಿಕೊಂಡಿರುವುದು ಕಂಡು ಬಂದಿದೆ. ಈ ಪೋಸ್ಟ್ನ ಪ್ರಕಾರ , ಗಾಂಧಿ ಮೈದಾನವು ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ನೋಡಲು ಬಂದ ಅಭಿಮಾನಿಗಳಿಂದ ತುಂಬಿತ್ತು. ಪೋಸ್ಟ್ನಲ್ಲಿ, ವೀಡಿಯೊ “ಪುಷ್ಪಾ 2: ದಿ ರೂಲ್” ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಸಂಬಂಧಿಸಿದೆ ಎಂದು ಸಹ ಉಲ್ಲೇಖವಾಗಿರುವುದು ಕಂಡು ಬಂದಿದೆ.
बिहार वालों ने तो एकदम गर्दा उड़ा दिया, अल्लू अर्जुन और रश्मिका मंदाना को देखने के लिए गांधी मैदान हाउस फुल हो गया 😍❤️@alluarjun @iamRashmika #Pushpa2 pic.twitter.com/tFQb8n7G4E
— छपरा जिला 🇮🇳 (@ChapraZila) November 17, 2024
ನಂತರದ ಹುಡುಕಾಟವು “ಪುಷ್ಪ 2: ದಿ ರೂಲ್” ನ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿದ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯಾದ ಯೂಟ್ಯೂಬ್ ಚಾನೆಲ್ ಯೂವೀ ಮೀಡಿಯಾಕ್ಕೆ ಅಪ್ಲೋಡ್ ಮಾಡಿದ 86 ನಿಮಿಷಗಳ ಅವಧಿಯ ವೀಡಿಯೊ ನಮಗೆ ಕಂಡು ಬಂದಿದೆ. ಈ ವೀಡಿಯೊದ ಹಲವಾರು ಕೀಫ್ರೇಮ್ಗಳು ವೈರಲ್ ವೀಡಿಯೊದೊಂದಿಗೆ ಹೊಂದಾಣಿಕೆಯಾಗುತ್ತವೆ. ವೈರಲ್ ವೀಡಿಯೊದಂತೆಯೇ ವೇದಿಕೆಯ ಕ್ಲೋಸ್-ಅಪ್ ಶಾಟ್ ಸುಮಾರು 6:50 ಮಾರ್ಕ್ನಲ್ಲಿ ಕಾಣಿಸಿಕೊಳ್ಳುತ್ತದೆ. ಅಂತೆಯೇ, 9:15 ಮಾರ್ಕ್ನಲ್ಲಿ, ಜನರು ಗೋಪುರದಂತಹ ರಚನೆಯ ಮೇಲೆ ಕುಳಿತಿರುವುದನ್ನು ಕಾಣಬಹುದು. ವೈರಲ್ ವೀಡಿಯೊ ಮತ್ತು YouWe Media ನ YouTube ಚಾನಲ್ಗೆ ಪೋಸ್ಟ್ ಮಾಡಿದ ವೀಡಿಯೊದ ನಡುವಿನ ಹೋಲಿಕೆಗಳು ಕೂಡ ಸ್ಪಷ್ಟವಾಗಿ ಕಂಡು ಬಂದಿದೆ.
ಸುದ್ದಿ ವರದಿಗಳ ಪ್ರಕಾರ , ನವೆಂಬರ್ 17 ರಂದು ಬಿಹಾರದ ಪಾಟ್ನಾದ ಗಾಂಧಿ ಮೈದಾನದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ನೋಡಲು ಪುಷ್ಪ 2: ದಿ ರೂಲ್ ನ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾರಿ ಜನಸ್ತೋಮ ನೆರೆದಿತ್ತು. ಅಗಾಧವಾದ ಜನ ಸಂದಣಿಯಿಂದಾಗಿ ಈವೆಂಟ್ನಲ್ಲಿ ಕೆಲವು ಗೊಂದಲಗಳು ಉಂಟಾಗಿರುವ ಕುರಿತು ಕೂಡ ವರದಿಯಲ್ಲಿ ಉಲ್ಲೇಖವಾಗಿರುವುದು ಕಂಡು ಬಂದಿದೆ. ಬಹುತೇಖ ವರದಿಗಳಲ್ಲಿ ಕೂಡ ಇದೇ ರೀತಿಯ ಮಾಹಿತಿಗಳು ಕೂಡ ಲಭ್ಯವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ.. ವೈರಲ್ ವಿಡಿಯೋ ಮಹಾ ವಿಕಾಸ್ ಅಘಾಡಿಯ ಚುನಾವಣೆ ರ್ಯಾಲಿಗೆ ಸಂಬಂಧಿಸಿದ್ದಲ್ಲ, ಬದಲಾಗಿ ಇದು ಪುಷ್ಟ 2 ದಿ ರೂಲ್ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದ್ದಾಗಿದೆ. ಹಾಗಾಗಿ ವೈರಲ್ ವಿಡಿಯೋವನ್ನು ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂಬುದು ಸಾಬೀತಾಗಿದೆ. ಈ ಕಾರಣದಿಂದ ಯಾವುದೇ ಕಾರಣಕ್ಕೂ ವೈರಲ್ ವಿಡಿಯೋವನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check : ರಷ್ಯಾ ಯುರೇನಿಯಂ ಉತ್ಪನ್ನಗಳನ್ನು ಭಾರತಕ್ಕೆ ತಾತ್ಕಾಲಿತವಾಗಿ ನಿರ್ಬಂಧ ವಿಧಿಸಿದೆ ಎಂಬುದು ನಿಜವಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

