ಪೆಟ್ರೋಲ್ ಬೆಲೆ ಏರಿಕೆಯಲ್ಲಿ, ರಾಜ್ಯ ತೆರಿಗೆಗಳು ಮತ್ತು ಸುಂಕಗಳು ಕೇಂದ್ರ ತೆರಿಗೆಗಳಿಗಿಂತ ಹೆಚ್ಚಾಗಿದೆ ಮತ್ತು ಆದ್ದರಿಂದ ಚಿಲ್ಲರೆ ಬೆಲೆಗಳ ಇತ್ತೀಚಿನ ಏರಿಕೆಗೆ ರಾಜ್ಯ ಸರ್ಕಾರಗಳು ದೂಷಣೆಯನ್ನು ತೆಗೆದುಕೊಳ್ಳಬೇಕು ಎಂಬ ಪೋಸ್ಟ್ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
“ಎಲ್ಲಾ ಪೆಟ್ರೋಲ್ ಪಂಪ್ಗಳು ಈ ರೀತಿಯ ಬೋರ್ಡ್ಗಳನ್ನು ಹೊಂದಿರಬೇಕು: ಮೂಲ ದರ: 35.50, ಕೇಂದ್ರ ಸರ್ಕಾರದ ತೆರಿಗೆ: 19.50, ರಾಜ್ಯ ಸರ್ಕಾರದ ತೆರಿಗೆ: 41.55 ವಿತರಕ: 6.50, ಒಟ್ಟು: 103.05 ಆಗ ಯಾರು ಹೊಣೆ ಎಂದು ಸಾರ್ವಜನಿಕರಿಗೆ ಅರ್ಥವಾಗುತ್ತದೆ. ದಯವಿಟ್ಟು ಇದನ್ನು ನಿಮ್ಮ ಗುಂಪುಗಳು ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ.” ಎಂಬ ಪೋಸ್ಟ್ ಒಂದನ್ನು ಸಾಕಷ್ಟು ಜನರು ಸಾಮಾಜಿಕ ಮಾದ್ಯಮಗಳಲ್ಲಿ ಹಲವಾರು ದಿನಗಳಿಂದ ಹಂಚಿಕೊಂಡಿರುವುದು ಕಂಡು ಬಂದಿದೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ये बात तो समझने वाली है आखिर ⛽ दाम काम करेगा कौन 😇 pic.twitter.com/sMj56UUbIj
— Navneet Sharma (@navneetforyou) July 16, 2021
ಅಷ್ಟೇ ಅಲ್ಲದೇ ಈ ಪೋಸ್ಟರ್ ಅನ್ನು ಕಳೆದ ಅನೇಕ ವರ್ಷಗಳಿಂದ ಹಂಚಿಕೊಳ್ಳಲಾಗುತ್ತಿದ್ದು ದೆಹಲಿ ಮತ್ತು ಪಶ್ಚಿಮ ಬಂಗಾಳದ ಸರ್ಕಾರಗಳನ್ನು ಟೀಕಿಸಲು ಸಹ ಬಳಸಿಕೊಳ್ಳಲಾಗುತ್ತಿತ್ತು. ಮಮತಾ ಬ್ಯಾನರ್ಜಿಯವರು ಪೆಟ್ರೋಲ್ ಮೇಲೆ ರಾಜ್ಯ ತೆರಿಗೆಯನ್ನು ಹೆಚ್ಚಿಸಿದ್ದಾರೆ ಎಂದು ಪೋಸ್ಟರ್ ಮಾಡಿ ಹಂಚಿಕೊಳ್ಳಲಾಗಿದೆ.
— Tathagata Roy (@tathagata2) July 11, 2021
ಫ್ಯಾಕ್ಟ್ಚೆಕ್: ಈ ಕುರಿತು ಹುಡುಕಿದಾಗ ಪೋಸ್ಟರ್ನಲ್ಲಿರುವ ಮಾಹಿತಿ ಸುಳ್ಳು ಎಂದು ತಿಳಿದು ಬಂದಿದೆ. ClearTaxನ ಮಾಹಿತಿ ಪ್ರಕಾರ “ಭಾರತದಲ್ಲಿ ಪೆಟ್ರೋಲ್ ತೆರಿಗೆಯು ಪೆಟ್ರೋಲ್ನ ಚಿಲ್ಲರೆ ಬೆಲೆಯ 55% ಅನ್ನು ಒಳಗೊಂಡಿರುತ್ತದೆ ಆದರೆ ಡೀಸೆಲ್ ತೆರಿಗೆಯು ಇಂಧನದ ಚಿಲ್ಲರೆ ಮೌಲ್ಯದ 50% ಆಗಿದೆ. ಇದರ ಹೊರತಾಗಿ, ಮಾರಾಟ ತೆರಿಗೆ ಮತ್ತು ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಅನ್ನು ರಾಜ್ಯ ಸರ್ಕಾರಗಳು ವಿವಿಧ ದರಗಳಲ್ಲಿ ವಿಧಿಸುತ್ತವೆ.
ಭಾರತದ ಇಂಧನ ಬೆಲೆ ರಚನೆಯಲ್ಲಿ ಇರುವ ಪ್ರಮುಖ ಶುಲ್ಕಗಳು ಇಲ್ಲಿವೆ: ಕಚ್ಚಾ ತೈಲದ ಮೂಲ ಬೆಲೆ, ಅಬಕಾರಿ ತೆರಿಗೆ, ವಿತರಕರ ಕಮಿಷನ್ ಮತ್ತು ಶುಲ್ಕಗಳು ಮೌಲ್ಯವರ್ಧಿತ ತೆರಿಗೆ (ವ್ಯಾಟ್). ಈಗ, ಕಚ್ಚಾ ತೈಲ ಬೆಲೆಗಳು, ಡೀಲರ್ ಶುಲ್ಕಗಳು ಮತ್ತು ಅಬಕಾರಿ ಸುಂಕವು ಭಾರತದಾದ್ಯಂತ ಒಂದೇ ಆಗಿರುತ್ತದೆ. ಆದಾಗ್ಯೂ, ವ್ಯಾಟ್ ಮತ್ತು ಮಾರಾಟ ತೆರಿಗೆಯು ರಾಜ್ಯಗಳಾದ್ಯಂತ ಭಿನ್ನವಾಗಿರುತ್ತದೆ, ಇದು ಇಂಧನ ಬೆಲೆಗಳಲ್ಲಿ ವ್ಯತ್ಯಾಸಕ್ಕೆ ಕಾರಣವಾಗುತ್ತದೆ.
ಭಾರತದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತೆರಿಗೆ ವಿಧಿಸುತ್ತವೆ. ಕೇಂದ್ರ ಅಧಿಕಾರಿಗಳು ಕ್ರಮವಾಗಿ ರೂ.19.90/ಲೀಟರ್ ಮತ್ತು ರೂ.15.80/ಲೀಟರ್ ದರದಲ್ಲಿ ಅಬಕಾರಿ ಸುಂಕವನ್ನು ಅನ್ವಯಿಸುತ್ತಾರೆ. ದೇಶದಾದ್ಯಂತ ಈ ದರ ಒಂದೇ ಆಗಿರುತ್ತದೆ. ಇದರ ಮೇಲೆ, ರಾಜ್ಯ ಸರ್ಕಾರಗಳು ವ್ಯಾಟ್, ಮಾರಾಟ ತೆರಿಗೆ ಮತ್ತು ಇತರ ಹೆಚ್ಚುವರಿ ಶುಲ್ಕಗಳನ್ನು ವಿಧಿಸುತ್ತವೆ. ಈ ತೆರಿಗೆಗಳ ದರಗಳು ಬದಲಾಗುತ್ತವೆ, ಇದು ಭಾರತದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ವ್ಯತ್ಯಾಸಕ್ಕೆ ಕಾರಣವಾಗುತ್ತದೆ.
ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ರಾಜ್ಯವಾರು ತೆರಿಗೆ ಪಟ್ಟಿ.
ಇತ್ತೀಚೆಗಷ್ಟೆ ಕರ್ನಾಟಕ ಸರ್ಕಾರ ಪೆಟ್ರೋಲ್ ದರಗಳ ಮೇಲೆ 3 ರೂಪಾಯಿಗಳಷ್ಟು ಹೆಚ್ಚು ಮಾಡಿದೆ. ಇದರಿಂದ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಶೇಕಡಾ 25.92 ರಿಂದ ಶೇಕಡಾ 29.84 ಕ್ಕೆ ಮತ್ತು ಡೀಸೆಲ್ ಮೇಲೆ ಶೇಕಡಾ 14.3 ರಿಂದ 18.4 ಕ್ಕೆ ಹೆಚ್ಚಿಸಲಾಗಿದೆ ಎಂದು ರಾಜ್ಯ ಸರ್ಕಾರ ಅಧಿಸೂಚನೆಯಲ್ಲಿ ಪ್ರಕಟಿಸಿದೆ. ಇದರೊಂದಿಗೆ ಪೆಟ್ರೋಲ್ ಪ್ರತಿ ಲೀಟರ್ಗೆ 99.83 ರೂ.ಗಳಿಂದ 102.85 ರೂ.ಗೆ ಮತ್ತು ಡೀಸೆಲ್ 85.93 ರೂ.ಗಳಿಂದ 88.93 ರೂ.ಗೆ ಏರಿದೆ. ಎಂದು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಈ ಕುರಿತು ಎಎನ್ಐ ಕೂಡ ವರದಿ ಮಾಡಿರುವುದನ್ನು ನಾವಿಲ್ಲಿ ನೋಡಬಹುದು.
Petrol and diesel prices are likely to go up in Karnataka as the state govt revises sales tax by 29.84% and 18.44%.
According to the Petroleum Dealers Association, petrol and diesel prices are likely to go up by Rs 3 and Rs 3.05 approximately in Karnataka pic.twitter.com/rJDinVT6SK
— ANI (@ANI) June 15, 2024
ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್ ಬೆಲೆ ಲೀಟರ್ಗೆ ₹102.86 ಆಗಿದೆ. ನಿನ್ನೆಗೆ ಹೋಲಿಸಿದರೆ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅದನ್ನು ಈ ಕೆಳಗಿನಂತೆ ವಿಂಗಡಿಸಬಹುದು.
ಮೂಲ ಬೆಲೆ: ₹57.35
ಡೀಲರ್ ಕಮಿಷನ್: ₹3.87
ಕೇಂದ್ರ ಸರ್ಕಾರದ ಅಬಕಾರಿ ಶುಂಕ: ₹19.90
ರಾಜ್ಯ ಸರ್ಕಾರದ ಸೇಲ್ಸ್ ಟ್ಯಾಕ್ಸ್: ₹21.74
ಒಟ್ಟು: ₹102.86
ಕಳೆದ 1 ತಿಂಗಳಲ್ಲಿ, ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ₹102.92 ಮತ್ತು ₹102.86 ರ ನಡುವೆ ಏರಿಳಿತವಾಗಿದೆ .ನೀವು ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ಬೆಲೆಗಳನ್ನು ವೀಕ್ಷಿಸಬಹುದು ಮತ್ತು ಹಿಂದಿನ ದಿನದ ದರಗಳೊಂದಿಗೆ ಹೋಲಿಕೆ ಮಾಡಬಹುದು, ಇದರಲ್ಲಿ ಈಗಾಗಲೇ ರಾಜ್ಯದ ತೆರಿಗೆಗಳು ಸೇರಿವೆ.
ಆದ್ದರಿಂದ ಪೆಟ್ರೋಲ್ ದರದ ಮೇಲೆ ಕೇಂದ್ರ ಸರ್ಕಾರದ 19.50 ತೆರಿಗೆ ವಿಧಿಸಿದರೆ ರಾಜ್ಯ ಸರ್ಕಾರದ 41.55 ತೆರಿಗೆ ವಿಧಿಸಿಸುತ್ತಿದೆ ಎಂಬುದು ಸುಳ್ಳು.
ಇದನ್ನು ಓದಿ: ಆಂಧ್ರಪ್ರದೇಶದ ಗುಂಟೂರಿನ ಹಳೆಯ ವೀಡಿಯೊವನ್ನು ಕೇರಳದಲ್ಲಿ ದೇವಾಲಯವನ್ನು ಹೊಡೆದುಹಾಕಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ
ವೀಡಿಯೋ ನೋಡಿ: ಕುಕ್ಕೆ ದೇವಸ್ಥಾನಕ್ಕೆ ರಾಜ್ಯ ಸರ್ಕಾರ ಕ್ರಿಶ್ಚಿಯನ್ ಅಧಿಕಾರಿ ನೇಮಿಸಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ