Fact Check | ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಹೈರಾಬಾದ್ ಪೊಲೀಸರು 1,026 ಪಾಕಿಸ್ತಾನಿ ನಾಗರಿಕರನ್ನು ಬಂಧಿಸಿದ್ದಾರೆ ಎಂಬುದು ಸುಳ್ಳು

ಏಪ್ರಿಲ್ 22, 2025 ರಂದು 26 ಭಾರತೀಯ ನಾಗರಿಕರನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತ ಸರ್ಕಾರವು ಪಾಕಿಸ್ತಾನಿ ಪ್ರಜೆಗಳಿಗೆ ವೀಸಾಗಳನ್ನು ಸ್ಥಗಿತಗೊಳಿಸಿತು ಮತ್ತು ಏಪ್ರಿಲ್ 27, 2025 ರೊಳಗೆ ಭಾರತವನ್ನು ಬಿಟ್ಟು‌ ಹೊರಡುವಂತೆ ಆದೇಶವನ್ನು ಹೊರಡಿಸಿದೆ. ಇದರ ನಡುವೆ ಎಲ್ಲಾ ರಾಜ್ಯಗಳ ಪೊಲೀಸರು ಪಾಕಿಸ್ತಾನಿ ಪ್ರಜೆಗಳ ಮಾಹಿತಿಯನ್ನು ಸಂಗ್ರಹಿಸಿ, ಅವರನ್ನು ಗಡಿಪಾರು ಮಾಡುವ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. ಇದರ ಬೆನ್ನಲ್ಲೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೈದರಾಬಾದ್‌ನಲ್ಲಿ ಪೊಲೀಸರು ಸುಮಾರು 1,026 ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ‌.

ಏಪ್ರಿಲ್ 26, 2025 ರಂದು, @JspBVMNaresh ಎಂಬ X ಬಳಕೆದಾರ ಹೈದರಾಬಾದ್ ಪೊಲೀಸರು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಮಕ್ಕಳು ಸೇರಿದಂತೆ 1,026 ಪಾಕಿಸ್ತಾನಿ ನಾಗರಿಕರನ್ನು ಬಂಧಿಸಿದ್ದಾರೆ ಎಂದು ಹೇಳುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ ಇದನ್ನು ನಿಜವೆಂದು ನಂಬಿರುವ ಹಲವರು ವೈರಲ್ ಪೋಸ್ಟ್ ಅನ್ನು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ಪೋಸ್ಟ್ ವೈರಲ್ ಆಗಿದೆ. ಹೀಗೆ  ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್‌ನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಪೋಸ್ಟ್‌ನಲ್ಲಿ ಕಂಡು ಬಂದ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಏಪ್ರಿಲ್ 26, 2025 ರಂದು @ahmedabad_live ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಿರುವುದು ಕಂಡು ಬಂದಿದೆ ಇದು ಮೂಲ ವಿಡಿಯೋವಿನ ಭಾಗವಾಗಿದೆ.

ಈ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಕುರಿತು ” ಡಿಸಿಪಿ ಅಜಿತ್ ರಾಜಿಯಾನ್ ಮತ್ತು ಅಪರಾಧ ಶಾಖೆ, ಎಸ್‌ಒಜಿ, ಇಒಡಬ್ಲ್ಯೂ ಮತ್ತು ವಲಯ 6 ರ ತಂಡಗಳ ನೇತೃತ್ವದಲ್ಲಿ ಬೆಳಗಿನ ಜಾವ 3 ಗಂಟೆಗೆ ನಡೆದ ಕೂಂಬಿಂಗ್ ಕಾರ್ಯಾಚರಣೆಯಲ್ಲಿ 500 ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು – ಮುಖ್ಯವಾಗಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬಂದವರನ್ನು – ಅಹಮದಾಬಾದ್‌ನಲ್ಲಿ ಬಂಧಿಸಲಾಯಿತು. ಸೂರತ್, ವಡೋದರಾ ಮತ್ತು ಇತರ ನಗರಗಳಲ್ಲಿ ಇದೇ ರೀತಿಯ ಸಂಘಟಿತ ಡ್ರೈವ್‌ಗಳು ರಾಜ್ಯಾದ್ಯಂತ ಒಟ್ಟು 1,000 ಕ್ಕೆ ತಲುಪಿದವು. ಅಹಮದಾಬಾದ್‌ನಲ್ಲಿ, ಪರಿಶೀಲನೆಗಾಗಿ ಬಂಧಿತರನ್ನು ಕಂಕರಿಯಾ ಫುಟ್‌ಬಾಲ್ ಮೈದಾನಕ್ಕೆ ಕರೆದುಕೊಂಡು ಹೋಗಲಾಗಿದೆ” ಎಂದು ಉಲ್ಲೇಖಿಸಲಾಗಿದೆ‌. ಇನ್ನು ಏಪ್ರಿಲ್ 26, 2025 ರಂದು @PoliticalViewsO ನಿಂದ ಅದೇ ವೀಡಿಯೊವನ್ನು ಒಳಗೊಂಡ X ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದ್ದು, ಇದರಲ್ಲಿ ಕೂಡ ಗುಜರಾತ್‌ನಲ್ಲಿ ಬಾಂಗ್ಲಾದೇಶಿ ಮತ್ತು ಪಾಕಿಸ್ತಾನಿ ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸಾವಿರಕ್ಕೂ ಅಧಿಕ ಮಂದಿಯನ್ನುಬಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಏಪ್ರಿಲ್ 26, 2025 ರಂದು YouTube ಗೆ ಅಪ್‌ಲೋಡ್ ಮಾಡಲಾದ ದಿ ಎಕನಾಮಿಕ್ ಟೈಮ್ಸ್‌ನ ವೀಡಿಯೊ ವರದಿಯು ಸಹ ಏಪ್ರಿಲ್ 25 ರಂದು ಗುಜರಾತ್ ಪೊಲೀಸರ ಬಂಧನ ಕಾರ್ಯಾಚರಣೆ ಕುರಿತು ಮಾಹಿತಿಯುಳ್ಳ ವಿಡಿಯೋ ವರದಿಯನ್ನು ತನ್ನ. YouTube ವಿಡಿಯೋದಲ್ಲಿ ಅಪ್‌ಲೋಡ್ ಮಾಡಿದೆ.‌

ಒಟ್ಟಾರೆಯಾಗಿ ಹೇಳಿವುದಾದರೆ, ಸಾಮಾಜಿಕ ಜಾಲತಾಣಗಳಲ್ಲಿ‌ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ರೀತಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಹೈದರಾಬಾದ್‌ನಲ್ಲಿ 1,026 ಮಂದಿ ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂಬುದು ಸುಳ್ಳಾಗಿದೆ. ವೈರಲ್ ವಿಡಿಯೋ ಗುಜರಾತ್‌ಗೆ ಸಂಬಂಧಿಸಿದ್ದಾಗಿ. ವಿಡಿಯೋದಲ್ಲಿ ಇರುವವರು ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಪ್ರಜೆಗಳಾಗಿದ್ದು, ಅಕ್ರಮ ವಲಸೆಗಾರರಾಗಿದ್ದಾರೆ. ಹಾಗಾಗಿ ವೈರಲ್ ವಿಡಿಯೋ ಸುಳ್ಳು ನಿರೂಪಣೆಯಿಂದ ಕೂಡಿದೆ. ಹೀಗಾಗಿ ಸುಳ್ಳು ನಿರೂಪಣೆಯುಳ್ಳ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ‌ಓದಿ :Fact Check | ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಕಾರ್ಮಿಕ ಸಂಘದ ನಾಯಕರ ಬಂಧನದ ಹಳೆಯ ವೀಡಿಯೊ ವೈರಲ್


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *