ಸಾರ್ವಜನಿಕ ಜಿಮ್ನಲ್ಲಿ ಜಿಮ್ ತರಬೇತುದಾರ ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಈ ವಿಡಿಯೋವನ್ನು ದೆಹಲಿಯಲ್ಲಿ ಸೆರೆ ಹಿಡಿಯಲಾಗಿದೆ ಎಂದು ಹೇಳಿಕೊಳ್ಳಲಾಗಿದೆ. ವೀಡಿಯೊದಲ್ಲಿರುವ ವ್ಯಕ್ತಿಯನ್ನು ಅಹ್ಮದ್ ಬಿಲಾಲ್ ಖಾನ್ ಎಂದು ಗುರುತಿಸಲಾಗಿದೆ ಎಂದು ಪೋಸ್ಟ್ಗಳು ಪ್ರತಿಪಾದಿಸುತ್ತವೆ. ಹೀಗಾಗಿ ಮುಸಲ್ಮಾನ ಜಿಮ್ ಟ್ರೈನರ್ ಇರುವ ಕಡೆಗಳಲ್ಲಿ ಹೆಣ್ಣು ಮಕ್ಕಳನ್ನು ಕಳುಹಿಸಿಬೇಡಿ ಎಂದು ವಿಡಿಯೊವೊಂದನ್ನು ಪೋಸ್ಟ್ ಹೆಚ್ಚಾಗಿ ಪೋಸ್ಟ್ ಮಾಡಲಾಗುತ್ತಿದೆ.
https://twitter.com/Sudhir_mish/status/1858380077643260376
ಹೀಗೆ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಕೂಡ ಜಿಮ್ ಟ್ರೈನರ್ನ ವರ್ತನೆ ಅನುಚಿತ ಎನ್ನುವ ರೀತಿಯಲ್ಲಿಯೇ ಕಂಡು ಬಂದಿದೆ. ಹೀಗಾಗಿ ವೈರಲ್ ವಿಡಿಯೋವನ್ನು ನಿಜವೆಂದು ಭಾವಿಸಿ ಹಲವು ಮಂದಿ ಸಾಮಾಜಿಕ ಜಾಲತಾಣದ ಬಳಕೆದಾರರು ತಮ್ಮ ವೈಯಕ್ತಿಕ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ನಲ್ಲಿನ ನಿಜಾಂಶ ಏನು ಎಂಬುದನ್ನು ನಾವು ಈ ಫ್ಯಾಕ್ಟ್ಚೆಕ್ನಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ.
जिम में "जिस्म" से खेलता “विलाल अहमद”
हिन्दुओं तुम मूत-कर सो जाओ-
आप ये महिला जिम की Video देख रहे हो ये है
बिलाल अहमद खान का जिम है ,, इसका कृष्णा नगर में ये दूसरा जिम है
ओर पूरी दिल्ली की हिन्दू बहुल पॉश कालोनियों में ऐसे महिला जिम स्पीड से खोले जा रहे है ।#कृष्णानगर pic.twitter.com/Fq0rbMQhsn— Pradeepp Tiwarii || Tv Journalist | (@Pradeepp_Tiwari) November 18, 2024
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವನ್ನು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದೆವು. ಆದರೆ ವೈರಲ್ ಪೋಸ್ಟ್ಗೆ ಸಂಬಂಧಿಸಿದಂತೆ ಯಾವುದೇ ರೀತಿಯಾದ ಅಧಿಕೃತ ವರದಿಗಳಾಗಲಿ, ಪೊಲೀಸ್ ದೂರು ದಾಖಲಾದ ಬಗೆಗಿನ ಮಾಹಿತಿಯಾಗಲಿ ನಮಗೆ ಲಭ್ಯವಾಗಿಲ್ಲ. ಹಾಗಾಗಿ ವೈರಲ್ ವಿಡಿಯೋ ಸುಳ್ಳು ನಿರೂಪಣೆಯಿಂದ ಕೂಡಿದೆ ಎಂಬುದಕ್ಕೆ ನಮಗೆ ಬಲವಾದ ಆಧಾರ ಲಭ್ಯವಾಯಿತು.

ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ Body by Imran ಎಂಬ ಖಾತೆಯಿಂದ 22 ಜೂನ್ 2017ರಂದು ಹಂಚಿಕೊಳ್ಳಲಾದ ಪೋಸ್ಟ್ವೊಂದು ಕಂಡು ಬಂದಿದ್ದು, ಇದು ಡ್ಯುಯಲ್ ಐಲ್ಯಾಂಡ್ ಕೆರಿಬಿಯನ್ ರಾಷ್ಟ್ರವಾದ ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ತೆಗೆದ ಫೋಟೋವಾಗಿದೆ ಎಂಬುದು ತಿಳಿದುಬಂದಿದೆ. ವೈರಲ್ ವಿಡಿಯೋದಲ್ಲಿರುವ ಮಹಿಳೆ ರೇಷ್ಮಾ ಇಮ್ರಾನ್ ಎಂಬುದು ತಿಳಿದು ಬಂದಿದ್ದು, ಇವರಿಬ್ಬರೂ ಕೂಡ ಒಂದೇ ಮತದ ಮೂಲದಿಂದ ಬಂದಿದ್ದಾರೆ ಎಂಬುದು ತಿಳಿದು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿಯಲ್ಲಿ ಮುಸ್ಲಿಂ ಜಿಮ್ ಟ್ರೈನರ್ ಹಿಂದೂ ಯುವತಿಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ ಎಂಬುದು ಸುಳ್ಳು, ಆ ಯುವತಿಯೂ ಮುಸ್ಲಿಂ ಸಮುದಾಯದವಳಾಗಿದ್ದು, ಆಕೆ ಜಿಮ್ ಟ್ರೈನರ್ನ ಪತ್ನಿಯಾಗಿದ್ದಾಳೆ ಎಂಬುದು ಕಂಡು ಬಂದಿದೆ. ಈ ಅಂಶಗಳಿಂದ ವೈರಲ್ ವಿಡಿಯೋ ಸಂಪೂರ್ಣವಾಗಿ ಸುಳ್ಳು ನಿರೂಪಣೆಯಿಂದ ಕೂಡಿದೆ. ಹಾಗಾಗಿ ಯಾವುದೇ ಕಾರಣಕ್ಕೂ ವೈರಲ್ ವಿಡಿಯೋವನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check: ಪ್ರಖ್ಯಾತ ಬಾಕ್ಸರ್ ಮೈಕ್ ಟೈಸನ್ ಅವರು ಜೇಕ್ ಪಾಲ್ ನಡುವಿನ ಪಂದ್ಯದ ನಂತರ ನಿಧನರಾಗಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

