ಬುರ್ಖಾ ಧರಿಸಿದ ಮಹಿಳೆಯನ್ನು ಮೂವರು ಪುರುಷರು ಅಪಹರಿಸುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅಂಕಿತ್ ತಿವಾರಿ, ಅಭಿನವ್ ಮತ್ತು ರಾಜು ಎಂಬ ಮೂವರು ಹಿಂದೂ ಪುರುಷರು ರಾಜಸ್ಥಾನದಲ್ಲಿ ಗುಲ್ಫಿಶಾ ಎಂಬ ಮುಸ್ಲಿಂ ಮಹಿಳೆಯನ್ನು ಅಪಹರಿಸಿದ್ದಾರೆ ಎಂದು ಕೆಲವರು ಹಂಚಿಕೊಂಡರೆ, ಇನ್ನೂ ಕೆಲವರು ಮೂವರು ಹಿಂದೂ ಅಪಹರಣಕಾರರು ಮಹಿಳೆಯನ್ನು ಅತ್ಯಾಚಾರ ನಡೆಸಿ ಕೊಂಡಿದ್ದಾರೆ ಎಂದು ಬರೆದುಕೊಂಡು ಪೋಸ್ಟ್ ಮಾಡುತ್ತಿದ್ದಾರೆ.
मुस्लिम लड़की गुलफिशा अपने ब्वॉयफ्रेंड अंकित के साथ 2 साल से रिलेशनशिप में रह रही थी 2 साल से अंकित गुलफिशा को इस्तेमाल कर रहा था जब लड़की प्रेग्नेंट हो गई तो शादी के लिए दबाव बनाया तो अंकित ने लड़की को मिलने बुलाया हासपिटल में बहाने से बुलाकर अंकित और उसके 2 दोस्त अभिनव और राजू… pic.twitter.com/JCeWUQNpj7
— Azad parinda (@Agkc16) February 3, 2025
ವಿಡಿಯೋದಲ್ಲಿ ಕೂಡ ಮೂವರು ಪುರುಷರು ಮಹಿಳೆಯೊಬ್ಬರನ್ನು ಅಪಹರಿಸುತ್ತಿರುವುದು ಕಂಡು ಬಂದಿದ್ದು, ಹೀಗಾಗಿ ವಿಡಿಯೋ ನೋಡಿದ ಬಹುತೇಕರು ಹಿಂದೂ ಪುರುಷರಿಂದ ಮಹಿಳೆಯರ ಅಪಹರಣ ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ವೈೆರಲ್ ವಿಡಿಯೋ ಕೋಮುದ್ವೇಷಕ್ಕೆ ಕೂಡ ಕಾರಣವಾಗುವಂತೆ ಭಾಸವಾಗುತ್ತಿದೆ. ಹೀಗೆ ಕೋಮು ಆಯಾಮದಿಂದ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
वीडियो राजस्थान के बड़े कालेज के पीछे अंजाम दिया गया
दो साल से अंकित गुलफिशा को इस्तेमाल कर रहा था
जब प्रेग्नेंट हो गई तो शादी के लिए दबाव बनाया
तो अंकित ने लड़की को मिलने बुलाया
अंकित व उसके दोस्त अभिनव और राजू ने लड़की को
उठा लिया और तीनों ने रेप किया
लाश नग्न अवस्था मे मिली है pic.twitter.com/VZy3MxAT29— MAHFOOZURRAHMAN (@BHAI_BADRI_313) February 3, 2025
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ಬಾಂಗ್ಲಾದೇಶದ ಗಾಜಿಪುರದಲ್ಲಿರುವ ಲಾಫಿಂಗ್ ಚಾಟ್ 2 ಎಂಬ ಫೇಸ್ಬುಕ್ ಪುಟದಲ್ಲಿ ಮೂಲ ವಿಡಿಯೋ ಕಂಡು ಬಂದಿದೆ. ಇದನ್ನು 21 ಜನವರಿ 2025 ರಂದು ಅಪ್ಲೋಡ್ ಮಾಡಲಾಗಿರುವುದು ಕಂಡು ಬಂದಿದೆ. ಇನ್ನು ಇದೇ ಫೇಸ್ಬುಕ್ ಪುಟದಲ್ಲಿ ಮತ್ತೊಂದು ವೀಡಿಯೊವನ್ನು ಸಹ ನಾವು ಕಂಡುಕೊಂಡಿದ್ದೇವೆ, ಅದನ್ನು ಅವರ ಪುಟದಲ್ಲಿ 17 ಜನವರಿ 2025 ರಂದು ಅಪ್ಲೋಡ್ ಮಾಡಲಾಗಿದೆ.

ಹೆಚ್ಚುವರಿಯಾಗಿ, ಫೇಸ್ಬುಕ್ ಪುಟವನ್ನು ಪರಿಶೀಲನೆ ನಡೆಸಿದಾಗ ಇದರಲ್ಲಿ ವೀಡಿಯೊಗಳನ್ನು ಮನರಂಜನಾ ಉದ್ದೇಶಗಳಿಗಾಗಿ ರಚಿಸಲಾಗಿದೆ ಮತ್ತು ಅವುಗಳನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಹೇಳುತ್ತದೆ, ಇದು ಇವು ಸ್ಕ್ರಿಪ್ಟ್ ಮಾಡಿದ ವೀಡಿಯೊಗಳು ಎಂದು ಸೂಚಿಸಿರುವುದು ಕಂಡು ಬಂದಿದೆ. ನಂತರ ನಾವು ಪುಟದಲ್ಲಿರುವ ಇತರ ವೀಡಿಯೊಗಳನ್ನು ಪರಿಶೀಲಿಸಿದಾಗ ವೈರಲ್ ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿಗಳಲ್ಲಿ ಒಬ್ಬರು ಇತರ ಸ್ಕ್ರಿಪ್ಟ್ ಮಾಡಿದ ವೀಡಿಯೊಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವುದನ್ನು ಕಂಡುಕೊಂಡೆವು. ಹೀಗಾಗಿ ವೈರಲ್ ವಿಡಿಯೋ ನಿಜವಲ್ಲ ನಾಟಕೀಯ ಎಂಬುದು ಸಾಬೀತಾಗಿದೆ.


ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿಯಲ್ಲಿ ರಾಜಸ್ಥಾನದಲ್ಲಿ ಹಿಂದೂ ಪುರಷರು ಮುಸ್ಲಿಂ ಮಹಿಳೆಯನ್ನು ಅಪಹರಿಸಿದ್ದಾರೆ ಎಂಬುದು ಸುಳ್ಳು. ವೈರಲ್ ವಿಡಿಯೋ ಬಾಂಗ್ಲಾದೇಶದ್ದಾಗಿದ್ದು, ಇದು ಸ್ಕ್ರಿಪ್ಟೆಡ್ ವಿಡಿಯೋವಾಗಿದೆ. ಹಾಗಾಗಿ ಈ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

