ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 10 ರಂದು ಫ್ರಾನ್ಸ್ಗೆ ಮೂರು ದಿನಗಳ ಭೇಟಿಯನ್ನು ಕೈಗೊಂಡರು. ಅವರ ಭೇಟಿಯ ಸಮಯದಲ್ಲಿ, ಅವರು ಪ್ಯಾರಿಸ್ನಲ್ಲಿ ನಡೆದ 14 ನೇ ಭಾರತ-ಫ್ರಾನ್ಸ್ ಸಿಇಒ ವೇದಿಕೆಯಾದ ಎಐ ಆಕ್ಷನ್ ಶೃಂಗಸಭೆಯಲ್ಲಿ ಭಾಗವಹಿಸಿದರು ಮತ್ತು ಫ್ರಾನ್ಸ್ನ ಮಾರ್ಸಿಲ್ಲೆಯಲ್ಲಿ ಎರಡನೇ ಭಾರತೀಯ ರಾಯಭಾರ ಕಚೇರಿಯನ್ನು ಉದ್ಘಾಟಿಸಿದರು. ಇದರ ನಡುವೆ, ಫೆಬ್ರವರಿ 11 ರಂದು ನಡೆದ ಪ್ಯಾರಿಸ್ AI ಶೃಂಗಸಭೆಯ ವೀಡಿಯೊವೊಂದು ವೈರಲ್ ಆಗಿದ್ದು ಸಾಕಷ್ಟು ಮಂದಿ ಪ್ರಧಾನಿ ನರೇಂದ್ರ ಮೋದಿಗೆ ಹಸ್ತಲಾಘವ ನೀಡಲು ಫ್ರಾನ್ಸ್ ಅಧ್ಯಕ್ಷ ನಿರಾಕರಿಸಿದ್ದಾರೆ ಎಂದು ವಿಡಿಯೋವೊಂದನ್ನು ಹಂಚಿಕೊಳ್ಳುತ್ತಿದ್ದಾರೆ.
Godi Media Told Not To Show
PM Modi tried multiple times to shake hands with French President Emmanuel Macron, but he was repeatedly ignored.
The world respects India and its people, but due to his publicity stunts and incompetence, Modi is losing respect globally. pic.twitter.com/10dl0qgJob
— Gaurav Pandhi (@GauravPandhi) February 11, 2025
ವೈರಲ್ ವಿಡಿಯೋದಲ್ಲಿ ಕೂಡ ಫ್ರಾನ್ಸ್ ಅಧ್ಯಕ್ಷ ಎಮನ್ಯುವೆಲ್ ಮ್ಯಾಕ್ರುನ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಲಾಘವ ಮಾಡದೆ, ನಿರ್ಲಕ್ಷ್ಯದಿಂದ ಬೇರೆ ಅತಿಥಿಗಳಿಗೆ ಹಸ್ತಲಾಘವ ಮಾಡುತ್ತಿರುವುದು ಕಂಡು ಬಂದಿದೆ. ಈ ವೈರಲ್ ವಿಡಿಯೋವನ್ನು ನೋಡಿದ ಹಲವು ಮಂದಿ ಇದನ್ನು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೋಂಡು ಆಕ್ರೋಶವನ್ನು ಕೂಡ ವ್ಯಕ್ತ ಪಡಿಸುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
🤣
French President Macron jukes Prime Minister modi at the Artificial Intelligence Summit in Paris.
Prime Minister Modi stretched out his hand twice to shake hands.
— Tugay Er (@TugayEr) February 11, 2025
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್ಗಳನ್ನು ಬಳಸಿ ಗೂಗಲ್ನಲ್ಲಿ ಹುಡುಕಾಟವನ್ನು ನಡೆಸಿದೆವು ಈ ವೇಳೆ ಫೆಬ್ರವರಿ 11 ರಂದು ಪ್ಯಾರಿಸ್ನಲ್ಲಿ ನಡೆದ AI ಕ್ರಿಯಾ ಶೃಂಗಸಭೆಯ ಸಹ-ಅಧ್ಯಕ್ಷತೆ ಪ್ರಧಾನಿ ನರೇಂದ್ರ ಮೋದಿ ಅವರದ್ದಾಗಿತ್ತು ಎಂಬ ಅಂಶ ಕಂಡು ಬಂದಿದೆ. ಒಂದು ದಿನ ಮುಂಚಿತವಾಗಿ ಅಂದತೆ ಫೆಬ್ರವರಿ 10 ರಂದು ಶೃಂಗಸಭೆಯಲ್ಲಿ ಭಾಗವಹಿಸುವ ಜಾಗತಿಕ ನಾಯಕರಿಗಾಗಿ ಅಧ್ಯಕ್ಷ ಮ್ಯಾಕ್ರನ್ ಆಯೋಜಿಸಿದ್ದ ಭೋಜನಕೂಟದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಫೆಬ್ರವರಿ 11 ರಂದು, AI ಶೃಂಗಸಭೆಯು ಪ್ರಧಾನಿ ಮೋದಿಯವರ ಭಾಷಣದೊಂದಿಗೆ ಪ್ರಾರಂಭವಾಯಿತು ಎಂಬುದು ತಿಳಿದು ಬಂದಿದೆ

ಪ್ಯಾರಿಸ್ನಲ್ಲಿ ನಡೆದ AI ಕ್ರಿಯಾ ಶೃಂಗಸಭೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವೀಟ್ ಮಾಡಿದ್ದು, ಅಧ್ಯಕ್ಷ ಮ್ಯಾಕ್ರನ್ ಅವರನ್ನು ಅಪ್ಪಿಕೊಂಡು ಕೈಕುಲುಕುತ್ತಿರುವ ಫೋಟೋಗಳನ್ನು ಹಂಚಿಕೊಂಡಿರುವುದು ಕೂಡ ಸ್ಪಷ್ಟವಾಗಿ ಕಂಡು ಬಂದಿದೆ. ನಂತರ ಫೆಬ್ರವರಿ 11 ರಂದು ಅಸೋಸಿಯೇಟೆಡ್ ಪ್ರೆಸ್ನ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾದ ಶೃಂಗಸಭೆಯ ನೇರ ಪ್ರಸಾರವನ್ನು ನಾವು ಕಂಡುಕೊಂಡೆವು. ವೀಡಿಯೊದ ಕೆಲವೇ ನಿಮಿಷಗಳ ನಂತರ, ಜಾಗತಿಕ ನಾಯಕರು ಕುಳಿತಿರುವಾಗ, ಪ್ರಧಾನಿ ಮೋದಿ ಮತ್ತು ಮ್ಯಾಕ್ರನ್ ಒಟ್ಟಿಗೆ ಕಾರ್ಯಕ್ರಮಕ್ಕೆ ಹೋಗುವುದನ್ನು ಕಾಣಬಹುದಾಗಿದೆ.
The AI Action Summit in Paris is a commendable effort to bring together world leaders, policy makers, thinkers, innovators and youngsters to have meaningful conversations around AI. pic.twitter.com/kSXy0FhuIT
— Narendra Modi (@narendramodi) February 11, 2025
ವೈರಲ್ ಆದ ವಿಡಿಯೋ ಭಾಗವನ್ನು 9:45 ಸೆಕೆಂಡುಗಳ ಟೈಮ್ ಸ್ಟಾಂಪ್ನಲ್ಲಿ ಕಾಣಬಹುದು . ಇದರಲ್ಲಿ, ಮ್ಯಾಕ್ರನ್ ಮೊದಲು ಜೆಡಿ ವ್ಯಾನ್ಸ್ ಅವರೊಂದಿಗೆ ಹಸ್ತಲಾಘವ ಮಾಡುತ್ತಾರೆ ಮತ್ತು ನಂತರ ಪ್ರಧಾನಿ ಮೋದಿಯವರ ಹಿಂದೆ ಕುಳಿತಿರುವ ಲಾಟ್ವಿಯನ್ ಅಧ್ಯಕ್ಷ ಎಡ್ಗರ್ಸ್ ರಿಂಕೆವಿಕ್ಸ್ ಅವರನ್ನು ಸ್ವಾಗತಿಸುತ್ತಾರೆ. ನಂತರ ಅವರು ಶೃಂಗಸಭೆಯಲ್ಲಿ ಹಾಜರಿದ್ದ ಇತರ ಅತಿಥಿಗಳನ್ನು ಸ್ವಾಗತಿಸಲು ಮುಂದುವರಿಯುತ್ತಾರೆ. ಜೊತೆಗೆ ನಡೆದುಕೊಂಡು ಬಂದ ಕಾರಣ ಮತ್ತೊಮ್ಮ ಹಸ್ತಲಾಘವ ಮಾಡುವುದು ಬೇಡ ಎಂದು ಮ್ಯಾಕ್ರಾನ್ ಮತ್ತೊಮ್ಮೆ ಹಸ್ತಲಾಘವ ಮಾಡುವುದನ್ನು ತಪ್ಪಿಸಿರುವಂತೆ ಕಂಡು ಬಂದಿದೆ. ಇದಾದ ನಂತರ, ಮ್ಯಾಕ್ರನ್ ಸಂಕ್ಷಿಪ್ತ ಭಾಷಣ ಮಾಡಿ , ಪ್ರಧಾನಿ ಮೋದಿಯವರನ್ನು ಹಸ್ತಲಾಘವ ಮತ್ತು ಅಪ್ಪುಗೆಯೊಂದಿಗೆ ವೇದಿಕೆಗೆ ಆಹ್ವಾನಿಸಿದರು. ನಂತರ ಮೋದಿ ಜನಸಮೂಹವನ್ನುದ್ದೇಶಿಸಿ ಮಾತನಾಡಿದರು.
ಒಟ್ಟಾರೆಯಾಗಿ ಹೇಳುವುದಾದರೆ ಸಣ್ಣ ವಿಡಿಯೋದ ತುಣುಕನ್ನು ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರನ್ನು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಕಡೆಗಣನೆ ಮಾಡಿದ್ದಾರೆ ಎಂದು ಸುಳ್ಳು ನಿರೂಪಣೆಯೊಂದಿಗೆ ವೈರಲ್ ವಿಡಿಯೋವನ್ನು ಹಂಚಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಈ ಕಾರಣದಿಂದಾಗಿ ವೈರಲ್ ವಿಡಿಯೋವನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಮಹಾ ಕುಂಭಮೇಳದಿಂದ ಭಕ್ತರು ಹಿಂತಿರುಗುತ್ತಿದ್ದ ರೈಲಿನ ಮೇಲೆ ಮುಸಲ್ಮಾನರು ದಾಳಿ ನಡೆಸಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

