ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಒಂದು ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಇದನ್ನು ಹಂಚಿಕೊಂಡಿರುವ ಹಲವು ಬಳಕೆದಾರರು ಫ್ಲಿಪ್ಕಾರ್ಟ್ ರಾಹುಲ್ ಗಾಂಧಿ ಅವರ ಫೋಟೋವನ್ನು ಬಳಸಿಕೊಂಡಿದೆ ಮತ್ತು ರಾಹುಲ್ ಗಾಂಧಿಯವರ ಬಿಳಿ ಬಣ್ಣದ ಟಿ-ಶರ್ಟ್ ಚಳುವಳಿಯ ಭಾಗವಾಗಿ ಕಾಂಗ್ರೆಸ್ನ ಟಿ-ಶರ್ಟ್ಗಳನ್ನು ಮಾರಾಟ ಮಾಡುತ್ತಿದೆ ಎಂದು ಬರೆದುಕೊಂಡಿದ್ದಾರೆ.
Flipkart is using Rahul Gandhi's picture to sell White t-shirts 🔥
This is insane. pic.twitter.com/YoRadMa48r
— Amock_ (@Amockx2022) September 20, 2024
ಹಲವರು ವೈರಲ್ ಫೋಟೋವನ್ನು ನೋಡಿ ನಿಜವೆಂದು ಭಾವಿಸಿ, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡು flipkart ಧೈರ್ಯವನ್ನು ತೋರಿಸಿದೆ ಮತ್ತು ರಾಹುಲ್ ಗಾಂಧಿಯವರ ಚಿತ್ರವನ್ನು ಬಳಸಿಕೊಂಡು ಕಾಂಗ್ರೆಸ್ನ ಬಿಳಿ ಬಣ್ಣದ ಟಿ-ಶರ್ಟ್ ಚಳುವಳಿಗೆ ಬೆಂಬಲವನ್ನು ಘೋಷಿಸಿದೆ ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ವೈರಲ್ ಫೋಟೋ ವ್ಯಾಪಕವಾಗಿ ಹಂಚಿಕೆ ಆಗುತ್ತಿದೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ
I was searching t-shirts for my husband and look what is there at Flipkart😀😀 pic.twitter.com/ZJfVarmMZj
— Kavita Purushottam Gupta (@kavitagupta21) June 25, 2025
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ flipkart ರಾಹುಲ್ ಗಾಂಧಿಯವರ ಚಿತ್ರದೊಂದಿಗೆ ಬಿಳಿ ಬಣ್ಣದ ಟಿ ಶರ್ಟ್ ಮಾರಾಟ ಮಾಡುತ್ತಿರುವುದಕ್ಕೆ ಸಂಬಂಧಿಸಿದಂತೆ ಯಾವುದಾದರೂ ವರದಿಗಳು ಪ್ರಕಟವಾಗಿವೆ ಎಂಬುದನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದೆವು. ಆದರೆ ನಮಗೆ ಈ ಕುರಿತು ಯಾವುದೇ ಅಧಿಕೃತ ವರದಿಗಳು ಕಂಡುಬಂದಿಲ್ಲ. ಒಂದು ವೇಳೆ ಇದು ನಿಜವಾಗಿದ್ದರೆ ರಾಷ್ಟ್ರೀಯ ಮತ್ತು ಸ್ಥಳೀಯ ಮಾಧ್ಯಮಗಳು ಸಾಕಷ್ಟು ವರದಿಗಳನ್ನು ಮಾಡುತ್ತಿದ್ದವು. ಹಾಗಾಗಿ ವೈರಲ್ ಫೋಟೋ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತು.

ಈ ಕಾರಣದಿಂದಾಗಿ ನಾವು flipkart ನ ಅಧಿಕೃತ ವೆಬ್ಸೈಟ್ನಲ್ಲಿ ಪರಿಶೀಲನೆ ನಡೆಸಿದವು ಇದಕ್ಕಾಗಿ ಕೆಲವೊಂದು ಕೀ ವರ್ಡ್ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದೆವು. ಆದರೆ ಎಲ್ಲಿಯೂ ಕೂಡ ರಾಹುಲ್ ಗಾಂಧಿಯವರ ಚಿತ್ರ ದೊಂದಿಗೆ ಕಾಂಗ್ರೆಸ್ ಟಿ-ಶರ್ಟ್ ಅನ್ನು flipkart ಮಾರಾಟ ಮಾಡುತ್ತಿರುವುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಒಂದು ವೇಳೆ ಅದು ನಿಜವಾಗಿದ್ದರೆ ಫ್ಲಿಪ್ಕಾರ್ಟ್ನ ಪ್ರಾಡಕ್ಟ್ ವಿಭಾಗದಲ್ಲಿ ಲಭ್ಯವಾಗಬೇಕಿತ್ತು. ಹೀಗಾಗಿ ವೈರಲ್ ಪೋಸ್ಟ್ ಸಂಪೂರ್ಣವಾಗಿ ಸುಳ್ಳಾಗಿದೆ ಎಂಬುದು ನಮಗೆ ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ, ರಾಹುಲ್ ಗಾಂಧಿ ಅವರ ಚಿತ್ರದೊಂದಿಗೆ ಕಾಂಗ್ರೆಸ್ನ ಟೀ-ಶರ್ಟ್ ಅನ್ನು flipkart ಮಾರಾಟ ಮಾಡಲು ಆರಂಭಿಸಿದೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ. ಈ ಕುರಿತು ನಾವು flipkart ನ ಅಧಿಕೃತ ವೆಬ್ತಾಣದಲ್ಲೂ ಹುಡುಕಾಟವನ್ನು ನಡೆಸಿದ್ದು, ಈ ಬಗ್ಗೆ ಯಾವುದೇ ರೀತಿಯ ಅಧಿಕೃತ ಮಾಹಿತಿಗಳು ಕಂಡುಬಂದಿಲ್ಲ. ಹಾಗಾಗಿ ವೈರಲ್ ಪೋಸ್ಟ್ ಸಂಪೂರ್ಣವಾಗಿ ಸುಳ್ಳು ಮಾಹಿತಿಯೊಂದಿಗೆ ಕೂಡಿದೆ. ಈ ಕಾರಣದಿಂದ ವೈರಲ್ ಫೋಟೋವನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಇರಾನ್ ಮೇಲೆ ದಾಳಿ ಮಾಡಲು ಅಮೆರಿಕ ಭಾರತೀಯ ವಾಯು ಪ್ರದೇಶವನ್ನು ಬಳಸಿಕೊಂಡಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

