ಸಾಮಾಜಿಕ ಜಾಲತಾಣದಲ್ಲಿ ಬರಹವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಬರಹ ಹೀಗಿದೆ “ಜರ್ಮನಿಯ ಭಾರತೀಯ ದೂತವಾಸದಲ್ಲಿ ಕೆಲಸ ಮಾಡುವ ಓರ್ವ ಮಹಿಳೆ ಮೋದಿಜಿಯ ಬಗ್ಗೆ ಹೀಗೆ ಬರೆಯುತ್ತಾರೆ.. ಹಿಂದಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ರವರು ಜರ್ಮನಿಗೆ ಭೇಟಿ ನೀಡುವಾಗ ಅವರೊಂದಿಗೆ ಅವರ 40 ಜನ ಸಂಭಂದಿಕರನ್ನು ಕರೆದುಕೊಂಡು ಬರುತ್ತಿದ್ದರು!, ಐದು ಫೈವ್ ಸ್ಟಾರ್ ಹೋಟೆಲ್ ಗಳನ್ನು ಅವರಿಗಾಗಿಯೇ ಕಾಯ್ದಿರಿಸಲಾಗುತ್ತಿತ್ತು!, ಅವರ ಸಂಬಂಧಿಕರು ದೊಡ್ಡ ದೊಡ್ಡ ಮಾಲ್ ಗಳಲ್ಲಿ ಲಕ್ಷ ಲಕ್ಷ ರೂಪಾಯಿಗಳ ಶಾಪಿಂಗ್ ಮಾಡುತ್ತಿದ್ದರು!!! ಅವರ ಖರೀದಿಯ ಬಿಲ್ಲನ್ನು ಸರ್ಕಾರದ ಲೆಕ್ಕಕ್ಕೆ ಬರೆಯಲಾಗುತ್ತಿತ್ತು!, ಮನಮೋಹನ್ ಸಿಂಗ್ ರವರು ಯಾವಗೆಲ್ಲ ಜರ್ಮನಿಗೆ ಬರುತ್ತಿದ್ದರೋ ಅವಾಗೆಲ್ಲ ಇದು ಪುನಾರಾವರ್ತನೆ ಅಗುತ್ತಿತ್ತು!,” ಎಂದು ಹಂಚಿಕೊಳ್ಳಲಾಗುತ್ತಿದೆ.

ಇದೇ ಬರಹದಲ್ಲಿ ಇನ್ನೂ ಮುಂದುವರೆದು “ಎಂಬೆಸಿಯ ಭಾರತೀಯ ಕೆಲಸಗಾರರಾದ ನಾವು ದಿನಾ ಅವರ ಮುಂದೆ ಕುಣಿಯಬೇಕಾಗುತ್ತಿತ್ತು!!, ಆದರೆ ಕಾಟಾಚಾರಕ್ಕಾದರೂ ಮನಮೋಹನ್ ಸಿಂಗ್ ರವರು ಒಂದು ಸಾರಿಯೂ ಎಂಬೆಸಿಗೆ ಭೇಟಿ ಕೊಟ್ಟಿರಲಿಲ್ಲ! ನಮ್ಮನ್ನು ಮಾತನಾಡಿಸಿರಲಿಲ್ಲ!, ಈಗ, ಮೋದಿಜಿ ಪ್ರದಾನಿಯಾದ ಮೇಲೆ ಎರಡು ಬಾರಿ ಜರ್ಮನಿಗೆ ಭೇಟಿ ಕೊಟ್ಟರು, ನಾವು ಹಿಂದಿನ ವರಸೆಯನ್ನೇ ಎದುರು ನೋಡುತ್ತಿದ್ದೆವು… ಆದರೆ ಹಾಗಾಗಲಿಲ್ಲ!!!, ನಮಗೆ ಆಶ್ಚರ್ಯ ಕಾದಿತ್ತು!! ಮೋದಿಜಿ ಒಬ್ಬರೇ ಬಂದಿದ್ದರು! ಅವರ ಸಂಬಂಧಿಕರ ಪಟಾಲಂ ಇರಲೇ ಇಲ್ಲ! ಕೇವಲ ಒಂದೇ ಫ್ಲೋರ್ ಕಾಯ್ದಿರಿಸಲಾಯಿತು! ಅದು ಕೂಡ ಸೆಕ್ಯೂರಿಟಿಯ ಕಾರಣಕ್ಕೆ, ಇಲ್ಲದಿದ್ದರೆ ಒಂದೇ ರೂಮ್ ಸಾಕು ಅನ್ನುತ್ತಿದ್ದರೋ ಏನೋ!!! ಮಾಲ್ ಗಳಲ್ಲಿ ಶಾಪಿಂಗ್ ಇಲ್ಲ! ಅವರು ಅವರ ಕೆಲಸದಲ್ಲಿ ಬ್ಯುಸಿ ನಾವು ಕೂಡ ಬ್ರೇಕ್ ಇಲ್ಲದೇ ಕೆಲಸ ಮಾಡುತ್ತಿದ್ದೆವು! ಎಂಬೆಸಿಯ ಕೆಲಸಗಾರರು ಚಮ್ಚಾಗಿರಿ ಮಾಡಬೇಕಾಗಿಲ್ಲ!, ಬದಲಿಗೆ ಎಂಬೆಸಿಯ ಪ್ರತಿಯೊಬ್ಬ ಸ್ಟಾಫ್ ಕೂಡ ಅವರವರ ಕೆಲಸಗಳಲ್ಲಿ ಎಷ್ಟು ಬ್ಯುಸಿಯಾಗಿದ್ದಾರೆ ಅಂದರೆ ನಮಗೆ ಸತತ ಮೂರು ದಿನಗಳ ವರೆಗೆ ಮನೆಗೆ ಹೋಗಲು ಕೂಡ ಅವಕಾಶ ಸಿಗಲಿಲ್ಲ!, ಈ ನಮ್ಮ ಕೆಲಸವನ್ನು ನೋಡಿ ಖುದ್ದು ಮೋಡಿಜಿಯವರೇ ಎಂಬೆಸಿಗೆ ಭೇಟಿ ಕೊಟ್ಟು ನಮ್ಮೊಂದಿಗೆ ಚಾ ಕುಡಿದು ಕುಶಲೋಪರಿ ವಿಚಾರಿಸಿ ನಮಗೆ ಧನ್ಯವಾದಗಳನ್ನು ಕೂಡ ಹೇಳಿದರು!!!!, ಇದು ಒಬ್ಬ ಮಹಾನ್ ವ್ಯಕ್ತಿಯ ಪರಿಚಯ!!!, ಭಾರತೀಯ ಸ್ನೇಹಿತರೇ… ಎಷ್ಟೋ ವರ್ಷಗಳ ನಂತರ ನಿಮಗೊಬ್ಬ ಮಹಾನ್ ನಾಯಕ ಸಿಕ್ಕಿದ್ದಾರೆ, ಅವರನ್ನು ಗೌರವಿಸಿ, ಬೆಂಬಲಿಸಿ!!!!,ದಿನವಿಡೀ ದೇಶದ ವಿರುದ್ಧ ಮಾತನಾಡುವ, ಕಾರ್ಯಚರಿಸುವ ವಿರೋಧ ಪಕ್ಷಗಳಿಗೆ ಸರಿಯಾಗಿ ಬುದ್ದಿ ಕಲಿಸಿ… ಆ ಮೂಲಕ ದೇಶದ ರಕ್ಷಣೆ ಮಾಡಿ!!!ಯಾರಿಗೆ ಸತ್ಯವನ್ನು ಅರಗಿಸಿಕ್ಕೊಳ್ಳುವ ಮನಸ್ಸಿರುತ್ತದೋ ಅವರು ಈ ಪೋಸ್ಟನ್ನು ಶೇರ್ ಮಾಡಿಯೇ ಮಾಡುತ್ತಾರೆ! ದೇಶಕ್ಕಾಗಿ ಮೋದಿಜಿ!, ಮೋದಿಜಿಗಾಗಿ ನಾವು!” ಎಂದು ಬರಹವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಹೀಗೆ ವ್ಯಾಪಕಚಾಗಿ ಶೇರ್ ಮಾಡಲಾಗುತ್ತಿರುವ ಪೋಸ್ಟ್ನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಬರಹದ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ಈ ಬರಹಗಳಲ್ಲಿ ಉಲ್ಲೇಖಿಸಿರುವ ಅಂಶಗಳೊಂದಿಗೆ ಯಾವುದಾದರೂ ವರದಿಗಳು ಪ್ರಕಟವಾಗಿವೆಯೇ ಎಂದು ನಾವೂ ಪರಿಶೀಲನೆ ನಡೆಸಿದೆವು. ಆದರೆ ವೈರಲ್ ಬರಹಕ್ಕೆ ಸಂಬಂಧಿಸಿದಂತೆ ಯಾವುದೇ ಒಂದು ಅಧಿಕೃತ ವರದಿಗಳು ನಮಗೆ ಕಂಡು ಬಂದಿಲ್ಲ. ಇನ್ನೂ ಮನಮೋಹನ್ ಸಿಂಗ್ ಅವರು ಜರ್ಮನಿಗೆ ಭೇಟಿ ನೀಡಿದ್ದಾರೆಯೇ ಎಂದು ನಾವು ಪರಿಶೀಲನೆಯನ್ನು ನಡೆಸಿದೆವು. ಈ ವೇಳೆ ನಮಗೆ ಸರ್ಕಾರದ ಅಧಿಕೃತ ವೆಬ್ಸೈಟ್ನಲ್ಲಿ ಪ್ರಧಾನಿಯಾಗಿದ್ದ ವೇಳೆ ಡಾ. ಮನಮೋಹನ್ ಸಿಂಗ್ ಅವರು ಒಟ್ಟು ನಾಲ್ಕು ಭಾರಿ ಭೇಟಿ ನೀಡಿರುವ ಕುರಿತು ವಿಕಿಪೀಡಿಯದಲ್ಲಿ ವರದಿಗಳು ಕಂಡುಬಂದಿವೆ

ಇನ್ನು ಸರ್ಕಾರದ ಅಧಿಕೃತ ವೆಬ್ಸೈಟ್ನಲ್ಲಿ ಪ್ರಧಾನಿಯಾಗಿದ್ದ ವೇಳೆ ಡಾ. ಮನಮೋಹನ್ ಸಿಂಗ್ ಅವರು ಜರ್ಮನಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹಲವು ಒಪ್ಪಂದಗಳು ಮತ್ತು ಭಾರತ ಜರ್ಮನಿಯ ನಡುವಿನ ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂಬ ಅಂಶವು NDTV ಸೇರಿದಂತೆ ಹಲವು ಮಾಧ್ಯಮ ವರದಿಗಳಲ್ಲಿ ಉಲ್ಲೇಖವಾಗಿದೆ. ಅದೇ ರೀತಿಯಲ್ಲಿ ಅಂದಿನ ದಿನದ ವೇಳಾಪಟ್ಟಿಯನ್ನು ಕೂಡ ನಾವು ಸರ್ಕಾರದ ಅಧಿಕೃತ ವೆಬ್ಸೈಟ್ನಲ್ಲಿ ಕಂಡುಕೊಂಡಿದ್ದೇವೆ

ಇನ್ನು ಪ್ರಧಾನಿಯಾಗಿದ್ದ ಅವಧಿಯಲ್ಲಿ ಡಾ.ಮನಮೋಹನ್ ಸಿಂಗ್ ಅವರು ಜರ್ಮನಿಗೆ ಭೇಟಿ ನೀಡಿದ್ದ ಸಂದರ್ಭ ತಮ್ಮ ಕುಟುಂಬವನ್ನು ಜರ್ಮನಿಗೆ ಕರೆದುಕೊಂಡು ಹೋಗಿದ್ದರೆ ಅದು ಖಂಡಿತವಾಗಿಯೂ ಬಹಳ ದೊಡ್ಡ ವಿವಾದಕ್ಕೆ ಕಾರಣವಾಗಬೇಕಿತ್ತು ಮತ್ತು ಅಂದಿನ ದಿನಗಳಲ್ಲಿ ಅವರ ಕುಟುಂಬದ ಖರ್ಚುಗಳನ್ನು ಸರ್ಕಾರಿ ಲೆಕ್ಕದಲ್ಲಿ ಉಲ್ಲೇಖಿಸಿದ್ದರೆ ಈ ಕುರಿತು ಹಲವು ವರದಿಗಳು ಕೂಡ ಕಂಡು ಬರಬೇಕಿತ್ತು. ಆದರೆ ಇದು ಯಾವುದಕ್ಕೂ ಯಾವುದೇ ಸಾಕ್ಷಿಗಳು ಮತ್ತು ಆಧಾರಗಳಿಲ್ಲ ಇದರ ಜೊತೆಗೆ ಯಾವುದೇ ಅಧಿಕೃತ ಮಾಧ್ಯಮ ವರದಿಗಳು ಕೂಡ ಕಂಡುಬಂದಿಲ್ಲ. ಹಾಗಾಗಿ ವೈರಲ್ ಆಗುತ್ತಿರುವ ಬರಹ ಸುಳ್ಳು ನಿರೂಪಣೆಯಿಂದ, ರಾಜಕೀಯ ಪ್ರೇರಿತವಾಗಿ ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಹಂಚಿಕೊಳ್ಳುತ್ತಿರುವುದು ಸಾಬೀತಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿಯಾಗಿದ್ದ ಅವಧಿಯಲ್ಲಿ ಜರ್ಮನಿಗೆ ಕೇವಲ ಎರಡು ಬಾರಿ ಮಾತ್ರ ಭೇಟಿ ನೀಡಿದ್ದರು ಎಂಬುದು ಸುಳ್ಳು. ಅವರು ನಾಲ್ಕು ಬಾರಿ ಭೇಟಿ ನೀಡಿದ್ದರು ಮತ್ತು ತಮ್ಮ ಕುಟುಂಬ ಸದಸ್ಯರನ್ನು ಕರೆದುಕೊಂಡು ಹೋಗಿ ಲಕ್ಷಗಟ್ಟಲೆ ಶಾಪಿಂಗ್ ಮಾಡುತ್ತಿದ್ದರು ಎಂಬುದು ಕೂಡ ಸುಳ್ಳು, ಈ ಕುರಿತು ಯಾವುದೇ ವರದಿಗಳು ಕಂಡುಬಂದಿಲ್ಲ. ಇನ್ನು ಪ್ರಧಾನ ಮಂತ್ರಿಯಾಗಿದ್ದ ಅವಧಿಯಲ್ಲಿ ಒಂದು ಬಾರಿಯೂ ಕೂಡ ಭಾರತೀಯ ದೂತವಾಸಕ್ಕೆ ಅವರು ಭೇಟಿ ನೀಡಿಲ್ಲ ಎಂಬುದು ಕೂಡ ಸಂಪೂರ್ಣ ಸುಳ್ಳಾಗಿದೆ. ಹೀಗಾಗಿ ವೈರಲ್ ಆಗುತ್ತಿರುವ ಬರಹವನ್ನು ರಾಜಕೀಯ ಪ್ರೇರಿತವಾಗಿ ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳುತ್ತಿರುವುದು ಸಾಬೀತಾಗಿದೆ. ಈ ಕಾರಣದಿಂದ ವೈರಲ್ ಪೋಸ್ಟ್ ಅನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಪಾಕಿಸ್ತಾನದಲ್ಲಿ ನಡೆದ ಅಪಘಾತದ ವೀಡಿಯೊವನ್ನು ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ಎಂದು ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

