ಸಾಮಾಜಿಕ ಜಾಲತಾಣದಲ್ಲಿ ಚಿತ್ರವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ದೊಡ್ಡ ಕ್ರೀಡಾಂಗಣವನ್ನು ಕಾಣಬಹುದು. ಕೆಲವರು ಈ ಪೋಸ್ಟ್ ಅನ್ನು ಶೇರ್ ಮಾಡುತ್ತಿದ್ದು, ಇದು ರುದ್ರಪ್ರಯಾಗದಲ್ಲಿ ನಿರ್ಮಿಸಲಾದ ಕ್ರೀಡಾಂಗಣದ ಫೋಟೋ ಎಂದು ಹೇಳುತ್ತಿದ್ದಾರೆ. ಈ ಫೋಟೋದಲ್ಲಿ ಕೂಡ ಕ್ಲಿಷ್ಟಕರವಾದ ಭೂಪ್ರದೇಶದಲ್ಲಿ ಬಹುದೊಡ್ಡ ಸುಸಜ್ಜಿತ ಕ್ರೀಡಾಂಗಣವನ್ನು ನಿರ್ಮಿಸಲಾಗಿರುವುದು ಕಂಡು ಬಂದಿದ್ದು, ಹಲವರು ಈ ಫೋಟೋವನ್ನು ಮೆಚ್ಚಿಕೊಂಡಿದ್ದು, ಇದು ದೇಶದ ಕ್ರೀಡಾ ಕ್ಷೇತ್ರದಲ್ಲಿ ಬಹುದೊಡ್ಡ ಹೆಜ್ಜೆ ಎಂದು ಬಣ್ಣಿಸುತ್ತಿದ್ದಾರೆ.

ವೈರಲ್ ಫೋಟೋ ಕೂಡ ನಿಜವಾದ ಫೋಟೋದಂತೆ ಕಂಡುಬಂದಿರುವುದರಿಂದ ಹಲವು ಇದು ನಿಜವಾದ ಫೋಟೋ ಎಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ಸಾಕಷ್ಟು ಮಂದಿ ಈ ರೀತಿಯ ಕ್ರೀಡಾಂಗಣ ಕೂಡ ಭಾರತದಲ್ಲಿ ನಿರ್ಮಾಣವಾಗಿದೆಯೇ ಎಂದು ಅಚ್ಚರಿಯನ್ನು ವ್ಯಕ್ತ ಪಡಿಸಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋವನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಫೋಟೋ ಕುರಿತು ಗೂಗಲ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ದೇವಭೂಮಿ ಉತ್ತರಾಖಂಡ್ ಎಂಬ ಹೆಸರಿನ ಫೇಸ್ಬುಕ್ ಪುಟದಲ್ಲಿ ನಾವು ಈ ಫೋಟೋವನ್ನು ಕಂಡುಕೊಂಡಿದ್ದೇವೆ . ಡಿಸೆಂಬರ್ 17, 2024 ರಂದು ಹಂಚಿಕೊಂಡ ಪೋಸ್ಟ್ನ ಶೀರ್ಷಿಕೆ ಹೀಗಿದೆ, “ಈ ಫೋಟೋ ಉತ್ತರಾಖಂಡದಲ್ಲಿ ವೈರಲ್ ಆಗಿದೆ! ಈ ಕ್ರಿಕೆಟ್ ಸ್ಟೇಡಿಯಂ ರುದ್ರಪ್ರಯಾಗದಲ್ಲಿದೆ ಎಂದು ಹೇಳಲಾಗುತ್ತಿದೆ. ಆದರೆ ಇದು ಸುಳ್ಳು, ಇಂತಹ ಕ್ರೀಡಾಂಗಣ ಉತ್ತರಾಖಂಡದಲ್ಲಿ ಎಲ್ಲಿಯೂ ಇಲ್ಲ. ಈ ಸುಳ್ಳು ಚಿತ್ರವನ್ನು AI ಸಹಾಯದಿಂದ ರಚಿಸಲಾಗಿದೆ ಮತ್ತು ಇದು ಉತ್ತರಾಖಂಡದ # ರುದ್ರಪ್ರಯಾಗ್ #ಕ್ರಿಕೆಟ್ಸ್ಟೇಡಿಯಮ್ #ಉತ್ತರಾಖಂಡ್ ಎಂದು ವೈರಲ್ ಆಗಿದೆ” ಎಂದು ಬರೆಯಲಾಗಿದೆ

ಹಿಮಾಲಯನ್ ಹಿಂದೂ ಹೆಸರಿನ ಪರಿಶೀಲಿಸಿದ X ಹ್ಯಾಂಡಲ್ನಲ್ಲಿ ವೈರಲ್ ಫೋಟೋವನ್ನು ಸಹ ನಾವು ಕಂಡುಕೊಂಡಿದ್ದೇವೆ. ಡಿಸೆಂಬರ್ 15, 2024 ರಂದು ಮಾಡಿದ ಪೋಸ್ಟ್ನಲ್ಲಿ, “ಈ ಫೋಟೋ ಉತ್ತರಾಖಂಡದಲ್ಲಿ ವೈರಲ್ ಆಗಿದೆ! ಈ ಕ್ರಿಕೆಟ್ ಸ್ಟೇಡಿಯಂ ರುದ್ರಪ್ರಯಾಗದಲ್ಲಿದೆ ಎಂದು ಹೇಳಲಾಗುತ್ತಿದೆ. ಆದರೆ ಇದು ಸುಳ್ಳು, ಇಂತಹ ಕ್ರೀಡಾಂಗಣ ಉತ್ತರಾಖಂಡದಲ್ಲಿ ಎಲ್ಲಿಯೂ ಇಲ್ಲ. ಈ ಸುಳ್ಳು ಚಿತ್ರವನ್ನು AI ಸಹಾಯದಿಂದ ರಚಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ನಾವು AI ಸಹಾಯದಿಂದ ಮಾಡಿದ ಮಲ್ಟಿಮೀಡಿಯಾ ಸ್ಕ್ಯಾನಿಂಗ್ ಉಪಕರಣಗಳ ಸಹಾಯದಿಂದ ಫೋಟೋಗಳನ್ನು ಹುಡುಕಿದೆವು. ನಾವು ಫೋಟೋವನ್ನು decopy.ai ಉಪಕರಣಕ್ಕೆ ಅಪ್ಲೋಡ್ ಮಾಡಿದ್ದೇವೆ. ಈ ಉಪಕರಣವು ಫೋಟೋವು AI ರಚಿತವಾಗಿರುವ ಸಾಧ್ಯತೆಯ ಶೇಕಡಾ 99.9 ಎಂದು ಫಲಿತಾಂಶವನ್ನು ನೀಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಪ್ರಯಾಗ್ರಾಜ್ನಲ್ಲಿ ಅತ್ಯಾಧುನಿಕ ಸ್ಟೇಡಿಯಂ ಅನ್ನು ನಿರ್ಮಾಣ ಮಾಡಲಾಗಿದೆ ಎಂಬುದು ಸುಳ್ಳಾಗಿದೆ. ವೈರಲ್ ಫೋಟೋವನ್ನು AI ಬಳಸಿ ನಿರ್ಮಾಣ ಮಾಡಲಾಗಿದೆ. ಹಾಗಾಗಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ ಅನ್ನು ಶೇರ್ ಮಾಡಬೇಡಿ. ಸುಳ್ಳು ಸುದ್ದಿಗಳನ್ನು ಶೇರ್ ಮಾಡುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check : ಮುಸ್ಲಿಮರ ಮನೆಯಿಂದ ಹಿಂದೂ ಹುಡುಗಿಯರನ್ನು ರಕ್ಷಿಸಲಾಗಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

