ಪ್ರಧಾನಿ ನರೇಂದ್ರ ಮೋದಿ, ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಮತ್ತು ಸಚಿನ್ ತೆಂಡೂಲ್ಕರ್ ಅವರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ಚಿತ್ರವನ್ನು ಶೇರ್ ಮಾಡಲಾಗುತ್ತಿದ್ದು, ಜನವರಿ 26ರಂದು ಕೆಂಪುಕೋಟೆಯಲ್ಲಿ ನಡೆದ ಮೆರವಣಿಗೆಯಲ್ಲಿ ತೆಗೆದ ಚಿತ್ರ ಎಂದು ಹೇಳಲಾಗುತ್ತಿದೆ. ಹೀಗಾಗಿ ಸಾಕಷ್ಟು ಮಂದಿ ಈ ಫೋಟೋವನ್ನು ಹಂಚಿಕೊಳ್ಳುತ್ತಿದ್ದಾರೆ.

ವೈರಲ್ ಫೋಟೋದಲ್ಲಿ ಕೂಡ ಪ್ರಧಾನಿ ಮೋದಿ, ಸಚಿನ್ ತೆಂಡೂಲ್ಕರ್, ಎಂ.ಎಸ್ ಧೋನಿ ಅವರು ಒಂದೇ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ವೈರಲ್ ಫೋಟೋವನ್ನು ನಿಜವೆಂದು ಭಾವಿಸಿ ಹಲವು ಮಂದಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದು ಸಾರ್ವಜನಿಕರಲ್ಲಿ ರಾಜಕೀಯವಾಗಿ ಕೂಡ ಚರ್ಚೆಯನ್ನು ಹುಟ್ಟು ಹಾಕಿದೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಫೋಟೋಗೆ ಸಂಬಂಧಿಸಿದಂತೆ ಕೀವರ್ಡ್ಗಳ ಸಹಾಯದಿಂದ Google ನಲ್ಲಿ ಹುಡುಕಿದ್ದೇವೆ. ಆದರೆ ಹಕ್ಕುಗೆ ಸಂಬಂಧಿಸಿದ ಯಾವುದೇ ವಿಶ್ವಾಸಾರ್ಹ ಮಾಧ್ಯಮ ವರದಿಯನ್ನು ನಾವು ಕಂಡುಕೊಂಡಿಲ್ಲ. ನಾವು ಗೂಗಲ್ ರಿವರ್ಸ್ ಇಮೇಜ್ ಸಹಾಯದಿಂದ ಚಿತ್ರವನ್ನು ಹುಡುಕಿದೆವು. ಇದರಿಂದ ಯಾವುದೇ ಪ್ರಯೋಜನವಾಗಿಲ್ಲ.

ಬಳಿಕ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದ ನಂತರ, ಚಿತ್ರದಲ್ಲಿ ಅನೇಕ ದೋಷಗಳಿವೆ ಎಂದು ನಾವು ಕಂಡುಕೊಂಡಿದ್ದೇವೆ. ಮಹೇಂದ್ರ ಸಿಂಗ್ ಧೋನಿ ಮತ್ತು ಸಚಿನ್ ತೆಂಡೂಲ್ಕರ್ ಅವರ ಕಣ್ಣುಗಳು ವಿರೂಪಗೊಂಡಿರುವುದು ಕಂಡು ಬಂದಿದೆ. ಪ್ರಧಾನಿ ಮೋದಿ ಅವರ ಹೆಬ್ಬೆರಳಿನ ಆಕಾರ ಬದಲಾಗಿತ್ತು. ಹೀಗಾಗಿ ನಾವು AI-ಚಾಲಿತ ಮಲ್ಟಿಮೀಡಿಯಾ ಸ್ಕ್ಯಾನಿಂಗ್ ಪರಿಕರಗಳ ಸಹಾಯದಿಂದ ಫೋಟೋಗಳನ್ನು ಹುಡುಕಿದೆವು. ನಾವು ಹೈವ್ ಮಾಡರೇಶನ್ ಸಹಾಯದಿಂದ ಫೋಟೋಗಳನ್ನು ಹುಡುಕಿದೆವು. ಈ ಉಪಕರಣವು ಫೋಟೋವು AI ಆಗಿರುವ ಸಾಧ್ಯತೆಯನ್ನು 98 ಪ್ರತಿಶತದವರೆಗೆನ ಸಾಧ್ಯತೆ ಇದೆ ಎಂಬುದನ್ನು ನಮಗೆ ಖಚಿತ ಪಡಿಸಿತು.

ಇನ್ನೊಂದು ಉಪಕರಣದ ಸಹಾಯದಿಂದ ಮತ್ತೊಮ್ಮೆ ಚಿತ್ರವನ್ನು ಹುಡುಕಿದೆವು. ಡಿ ಕಾಪಿ ಸಹಾಯದಿಂದ ಚಿತ್ರವನ್ನು ಹುಡುಕಿದೆವು. ಈ ಉಪಕರಣವು ಫೋಟೋವು AI ರಚನಾತ್ಮಕವಾಗಿರಲು 92 ಪ್ರತಿಶತದಷ್ಟು ಸಾಧ್ಯತೆಯಿದೆ ಎಂದು ಅಂದಾಜಿಸಿದೆ. ಹೀಗಾಗಿ ವೈರಲ್ ಫೋಟೋವನ್ನು ಕೃತಕ ಬುದ್ದಿಮತ್ಥೆಯಿಂದ ನಿರ್ಮಿಸಲಾಗಿದೆ ಎಂಬುಸು ಖಚಿತವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಪ್ರಧಾನಿ ಮೋದಿ, ಧೋನಿ ಮತ್ತು ಸಚಿನ್ ತೆಂಡೂಲ್ಕರ್ ಜನವರಿ 26 ರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎಂಬುದು ಸುಳ್ಳು. ವೈರಲ್ ಫೋಟೋ AI ನಿಂದ ನಿರ್ಮಿಸಲಾಗಿದೆ. ಹೀಗಾಗಿ ವೈರಲ್ ಇಮೇಜ್ ಅನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ.
ಇದನ್ನೂ ಓದಿ : Fact Check: ದೆಹಲಿಯಲ್ಲಿ ಪೋಲಿಸರು ಸಾರ್ವಜನಿಕರ ಮೇಲೆ ಲಾಠಿ ಪ್ರಯೋಗ ನಡೆಸಿದ್ದಾರೆ ಎಂದು ಗುಜರಾತಿನ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

