ಸಾಮಾಜಿಕ ಜಾಲತಾಣದಲ್ಲಿ ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ ಅವರು ರೋಬೋಟ್ನಿಂದ ಕ್ಷೌರ ಮಾಡಿಸಿಕೊಂಡಿದ್ದಾರೆ ಎಂದು ಫೋಟೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಹಲವರು ಈ ಕುರಿತು ವಿಡಿಯೋವನ್ನು ಕೂಡ ಹಂಚಿಕೊಂಡಿದ್ದು ಎಲಾನ್ ಮಸ್ಕ್ ಹೊಸ ಪ್ರಪಂಚವನ್ನು ನಿರ್ಮಿಸಲು ಹೊರಟಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ಕಾರಣದಿಂದ ವಿಡಿಯೋ ಕೂಡ ವೈರಲ್ ಆಗಿದೆ
तकनीक में बड़े बदलाव का कालखंड
आर्टिफिशियल इंटेलिजेंस (AI) आधारित डोमेस्टिक रोबोट ऑप्टिमस ने एलोन मस्क की हेयर कटिंग की। वो भी एकदम परफेक्ट और समय से। हेयरकटिंग के बाद फीडबैक एक्सचेंज भी हुआ।
आर्टिफिशियल इंटेलिजेंस और रोबोटिक्स की नई दुनिया में आपका स्वागत है.#Technology… pic.twitter.com/pUBSgo4iX1
— भारत समाचार | Bharat Samachar (@bstvlive) December 20, 2024
ಈ ವಿಡಿಯೋದಲ್ಲಿ ಕೂಡ ರೋಬೋಟ್ವೊಂದು ಎಲಾನ್ ಮಸ್ಕ್ ಅವರಿಗೆ ಕ್ಷೌರ ಮಾಡುವುದನ್ನು ಕಾಣಬಹುದಾಗಿದೆ, ಹೀಗಾಗಿ ಹಲವರು ವೈರಲ್ ವಿಡಿಯೋ ನಿಜವೆಂದು ಭಾವಿಸಿದ್ದಾರೆ. ಈ ಹಿಂದೆ ಮನುಷ್ಯನ ತಲೆಗೆ ಚಿಪ್ ಅಳವಡಿಸುವ ಪ್ರಕ್ರಿಯೆ ಯಶಸ್ವಿಯಾಗಿದೆ ಎಂದು ಹೇಳಿದ ನಂತರದಲ್ಲಿ ಹಲವರು ಎಲಾನ್ ಮಾಸ್ಕ್ ಈ ರೀತಿ ಕ್ಷೌರ ಮಾಡಿಸಿರುವ ಸಾಧ್ಯತೆಯೂ ಇದೆ ಎಂದು ಬರೆದುಕೊಂಡಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ಕುರಿತು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ.
சிரைக்கிறவன் ஒழுங்கா சிரைக்கணும்கிற பழமொழிய இனி யாரும் சொல்ல முடியாது!!
By getting his hair cut by a robot, Elon Musk has given this message to the world… that in the coming times, the businesses of many professionals are going to be in danger due to this technology…!! pic.twitter.com/Bs6d7DZSBP
— பரமசிவம் ராமசாமி (@ParamasivamRam7) December 26, 2024
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ವಿವಿಧ ಕೀವರ್ಡ್ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಲಾಯಿತು. ಆದರೆ ಈ ಕುರಿತು ಯಾವುದೇ ರೀತಿಯ ವರದಿಗಳು ಕಂಡುಬಂದಿಲ್ಲ. ಎಲಾನ್ ಮಸ್ಕ್ ಅವರ ಎಕ್ಸ್ ಪ್ರೊಫೈಲ್ ಅನ್ನು ಕೂಡ ಪರಿಶೀಲನೆ ನಡೆಸಲಾಯಿತು. ಆದರೆ ಈ ಬಗ್ಗೆ ಯಾವುದೇ ಪೋಸ್ಟ್ಗಳು ಕೂಡ ಕಂಡು ಬಂದಿಲ್ಲ.

ಹೀಗಾಗಿ ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ಮೂಲ ವಿಡಿಯೋ ಹೊಂದಿರುವ aismartzone ಎಂಬ ಇನ್ಸ್ಟಾಗ್ರಾಂ ಖಾತೆಯೊಂದು ಕಂಡುಬಂದಿದೆ. ಇದನ್ನು 17 ಡಿಸೆಂಬರ್ 2024 ರಂದು ಹಂಚಿಕೊಳ್ಳಲಾಗಿದ್ದು, ಈ ವಿಡಿಯೋ ನಿಜವಲ್ಲ ಮತ್ತು ಇದು AI ಪರಿಕರಗಳ ಸಹಾಯದಿಂದ ರಚಿಸಲಾದ CGI ವಿಡಿಯೋ ಎಂದು ಪೋಸ್ಟ್ನ ವಿವರಣೆಯಲ್ಲಿ ನೀಡಲಾಗಿರುವುದು ಕಂಡುಬಂದಿದೆ.


ಹೆಚ್ಚುವರಿಯಾಗಿ ಈ ಇನ್ಸ್ಟಾಗ್ರಾಂ ಖಾತೆಯನ್ನು ಪರಿಶೀಲಿಸಿದಾಗ AI ನಿಂದ ರಚಿಸಲಾದ ಹಲವು ವಿಡಿಯೋಗಳು ಕಂಡುಬಂದಿದೆ. ಇದು ಸಾಮಾಜಿಕ ಜಾಲತಾಣದ ಬಳಕೆದಾರರಿಗೆ AI ನಿಂದ ನಿರ್ಮಿಸಲಾದ ವಿಡಿಯೋಗಳು ಮತ್ತು ಫೋಟೋಗಳು ಹೇಗಿರಲಿವೆ ಎಂಬುದನ್ನು ಪರಿಚಯಿಸುವ ಕೆಲಸವನ್ನು ಮಾಡಲಾಗುತ್ತಿದೆ. ಇದರಿಂದ ವಿಡಿಯೋವನ್ನು ತೆಗೆದುಕೊಂಡಿರುವ ಹಲವು ಮಂದಿ ಸುಳ್ಳು ಸುದ್ದಿಯನ್ನು ಹರಿಬಿಟ್ಟಿದ್ದಾರೆ.

ಒಟ್ಟರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಎಲಾನ್ ಮಸ್ಕ್ ಅವರು ರೋಬೋಟ್ನಿಂದ ಕ್ಷೌರ ಮಾಡಿಸಿಕೊಂಡಿದ್ದಾರೆ ಎಂಬ ವಿಡಿಯೋ AI ನಿಂದ ರಚಿಸಲಾಗಿದ್ದು, ನಿಜವಾದ ವಿಡಿಯೋ ಅಲ್ಲ. ಹಾಗಾಗಿ ವೈರಲ್ ಪೋಸ್ಟನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

