ಡೊನಾಲ್ಡ್ ಟ್ರಂಪ್ ಅವರು ಜನವರಿ 20 ರಂದು US ನ 47 ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು. ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮತ್ತು ನೀತಾ ಮತ್ತು ಮುಖೇಶ್ ಅಂಬಾನಿ ಸೇರಿದಂತೆ ಹಲವಾರು ಪ್ರಮುಖ ಭಾರತೀಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಜೈಶಂಕರ್ ಸಮಾರಂಭದಲ್ಲಿ ಭಾರತ ಸರ್ಕಾರವನ್ನು ಪ್ರತಿನಿಧಿಸಿದರು ಮತ್ತು ಮುಂದಿನ ಸಾಲಿನಲ್ಲಿ ಕುಳಿತಿದ್ದರು. ಈ ವೇಳೆ ಅವರನ್ನು ಮಹಿಳೆಯೊಬ್ಬರು ಎಲ್ಲರ ಮುಂದೆ ಹಿಂದೆ ತೆರಳುವಂತೆ ಹೇಳಿ ಅವಮಾನಿಸಿದ್ದಾರೆಂದು ವಿಡಿಯೋವೊಂದು ವೈರಲ್ ಆಗುತ್ತಿದೆ.
#BREAKING Below is the example of one trying too hard to prove oneself overly capable has cost whatsoever respect was left. 🥴🥴
Here, you could see #india's MEA #Jaishankar was asked to be removed from the front row of #Trump's inauguration. #indiaout#Bangladesh#SheikhHasina… pic.twitter.com/SEHQ6cByUa— Ami Bangladesh 🇧🇩🇧🇩 (@TheGuyFromBklyn) January 21, 2025
ಈ ಪೋಸ್ಟ್ ಜೊತೆಗೆ, ಜನರು ಸಮಾರಂಭದ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಳ್ಳುತ್ತಿದ್ದು , ಇದರಲ್ಲಿ ಮಹಿಳೆಯೊಬ್ಬರು ಜೈಶಂಕರ್ ಅವರನ್ನು ಸಮೀಪಿಸುತ್ತಿರುವುದನ್ನು ಮತ್ತು ಹಿಂದೆ ತೆರಳುವಂತೆ ಸನ್ನೆ ಮಾಡುವುದು ಕಂಡು ಬಂದಿದೆ. ಹೀಗಾಗಿ ವೈರಲ್ ಪೋಸ್ಟ್ ಹಾಗೂ ವಿಡಿಯೋ ನಿಜವೆಂದು ಭಾವವಿಸಿ ಹಲವರು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶವೇನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
https://twitter.com/KhalsaVision/status/1881694413648470367
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ಸಂಪೂರ್ಣ ವಿಡಿಯೋವನ್ನು ಪರಿಶೀಲನೆ ನಡೆಸಿದೆವು. ಈ ವೇಳೆ ವೈರಲ್ ಕ್ಲಿಪ್ನ ಎಡ ಮೂಲೆಯಲ್ಲಿ “JICCC” ಎಂದು ಬರೆದಿರುವುದನ್ನು ನಾವು ನೋಡಿದ್ದೇವೆ. ಇದರಿಂದ ಸುಳಿವು ಪಡೆದು, ಟ್ರಂಪ್ರ ಉದ್ಘಾಟನಾ ಸಮಾರಂಭದ ಸಂಪೂರ್ಣ ವೀಡಿಯೋವನ್ನು ನಾವು ಉದ್ಘಾಟನಾ ಸಮಾರಂಭಗಳ ಯೂಟ್ಯೂಬ್ ಚಾನೆಲ್ನಲ್ಲಿ ಜಂಟಿ ಕಾಂಗ್ರೆಷನಲ್ ಕಮಿಟಿಯಲ್ಲಿ ಕಂಡುಕೊಂಡಿದ್ದೇವೆ, ಅಲ್ಲಿ ಸಂಪೂರ್ಣ ವಿಡಿಯೋವನ್ನು ಲೈವ್-ಸ್ಟ್ರೀಮ್ ಮಾಡಲಾಗಿದೆ.
ಈ ವೀಡಿಯೋದಲ್ಲಿ ಸಮಾರಂಭದ ಆರಂಭದಿಂದಲೂ ಜೈಶಂಕರ್ ಅವರನ್ನು ಮುಂದಿನ ಸಾಲಿನಲ್ಲಿ ಕಾಣಬಹುದು. ಮೂರು ಗಂಟೆ, ಎಂಟು ನಿಮಿಷ, 19 ಸೆಕೆಂಡ್ಗಳಲ್ಲಿ ಎಲ್ಲರೂ ನಿಂತಿದ್ದಾಗ ಒಬ್ಬ ಮಹಿಳಾ ಕ್ಯಾಮರಾಪರ್ಸನ್ ಸಚಿವರ ಪಕ್ಕದಲ್ಲಿ ಕುಳಿತಿರುವುದು ಕಾಣಿಸಿತು. ನಂತರ ಕ್ಯಾಮೆರಾಪರ್ಸನ್ ಜೈಶಂಕರ್ ಅವರ ಮುಂದೆ ಹೋಗಿ ಕುಳಿತು ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕದ ಮಾಜಿ ಅಧ್ಯಕ್ಷರು ಸೇರಿದಂತೆ ಎಲ್ಲರೂ ನಿಂತಿರುವ ವೇದಿಕೆಯ ಫೋಟೋಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು.
ನಂತರ, ಮೂರು ಗಂಟೆ, ಎಂಟು ನಿಮಿಷಗಳು ಮತ್ತು 53 ಸೆಕೆಂಡುಗಳಲ್ಲಿ , ಇನ್ನೊಂದು ಸಾಲಿನ ಮಹಿಳೆಯೊಬ್ಬರು ಕ್ಯಾಮೆರಾಪರ್ಸನ್ ಬಳಿ ನಡೆದುಕೊಂಡು ಹೋಗುವುದನ್ನು ಮತ್ತು ಕ್ಯಾಮೆರಾಪರ್ಸನ್ ಭುಜವನ್ನು ಸ್ಪರ್ಶಿಸಿ, ಅವಳನ್ನು ಹಿಂಭಾಗಕ್ಕೆ ಹೋಗಲು ಕೇಳಿಕೊಳ್ಳುವುದನ್ನು ಕಾಣಬಹುದು. ವೈರಲ್ ಕ್ಲಿಪ್ನಲ್ಲಿ ಹೇಳಿರುವಂತೆ ಮಹಿಳೆ ಜೈಶಂಕರ್ ಅವರ ಭುಜವನ್ನು ಮುಟ್ಟಿಲ್ಲ ಎಂದು ಇದು ಸ್ಪಷ್ಟಪಡಿಸಿದೆ. ಅದರ ನಂತರ, ಕ್ಯಾಮೆರಾಪರ್ಸನ್ ಕುಳಿತುಕೊಂಡರು.

ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಮುಂದಿನ ಸಾಲಿನಲ್ಲಿ ಕುಳಿತಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರನ್ನು ಮಹಿಳೆಯೊಬ್ಬರು ಎಲ್ಲರ ಮುಂದೆ ಹಿಂದೆ ಹೋಗಿ ಕುಳಿತುಕೊಳ್ಳುವಂತೆ ಹೇಳಿ ಅವಮಾನಿಸಿದ್ದಾರೆ ಎಂಬುದು ಸುಳ್ಳಾಗಿದೆ. ಮೂಲ ವಿಡಿಯೋದಲ್ಲಿ ಮಹಿಳೆ ಕ್ಯಾಮರಪರ್ಸನ್ ಅವರಿಗೆ ಹಿಂದೆ ತೆರಳಲು ಸೂಚಿಸುವುದು ಕಂಡು ಬಂದಿದೆ. ಹಾಗಾಗಿ ವೈರಲ್ ವಿಡಿಯೋವನ್ನು ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿರುವುದು ಸಾಬೀತಾಗಿದೆ. ಈ ಕಾರಣದಿಂದ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.

