ಆಂಧ್ರಪ್ರದೇಶದಲ್ಲಿ ಅಲ್ಲಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ವಕ್ಫ್ ಬೋರ್ಡ್ ಅನ್ನು ರದ್ದುಗೊಳಿಸಿದ್ದಾರೆ. ಆ ಮೂಲಕ ದೇಶದ ಇತಿಹಾಸದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಮಹತ್ತರವಾದ ನಿರ್ಧಾರವನ್ನು ಆಂಧ್ರದ ಬಿಜೆಪಿ ಬೆಂಬಲಿತ ಟಿಡಿಪಿ ಸರ್ಕಾರ ತೆಗೆದುಕೊಂಡಿದೆ. ಈ ಮೂಲಕ ದೇಶದಲ್ಲಿ ಒಂದೇ ಕಾನೂನು ಜಾರಿಗೆ ತರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಮಹತ್ತರ ಹೆಜ್ಜೆಯನ್ನು ಇಟ್ಟಿದೆ ಎಂದು ಹಂಚಿಕೊಳ್ಳಲಾಗುತ್ತಿದೆ.
ಆಂಧ್ರದಲ್ಲಿ ವಕ್ಫ್ ಬೋರ್ಡ್ ರದ್ದು.. 🤗🤗 pic.twitter.com/VFI51abO6V
— Amu (Modi Ka Parivar) (@umarao78612741) December 1, 2024
ಇನ್ನು ಇದೇ ಸುದ್ದಿಯನ್ನು ಹಲವು ಮಾಧ್ಯಮಗಳು ತಮ್ಮ ವೆಬ್ತಾಣಗಳಲ್ಲಿ ಹಂಚಿಕೊಂಡಿರುವುದರಿಂದ ಸಾಕಷ್ಟು ಮಂದಿ ಸಾರ್ವಜನಿಕರು ಇದನ್ನು ನಿಜವೆಂದು ಭಾವಿಸಿ, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
ಧರ್ಮ, ಸಮಾಜ ಹಾಗೂ ರಾಷ್ಟ್ರ ರಕ್ಷಣೆಯ ವಿಚಾರದಲ್ಲಿ ಆಂಧ್ರ ಪ್ರದೇಶದ ಶ್ರೀ @ncbn ಸರ್ಕಾರ ಯಾವಾಗಲೂ ಮಾದರಿ ನಡೆಯನ್ನಿರಿಸಿದೆ. ಅಸಂವಿಧಾನಿಕ ವಕ್ಫ್ ಬೋರ್ಡ್ ಅನ್ನೇ ವಜಾಗೊಳಿಸಿ ಆದೇಶ ಹೊರಡಿಸಿದೆ. ತನ್ನ ರಾಜ್ಯದ ಜನತೆಯ ಹಿತರಕ್ಷಣೆಗೆ ಮುಂದಾಗಿದೆ. ಇದು ಕರ್ನಾಟಕದ @INCKarnataka ಸರ್ಕಾರಕ್ಕೆ ಸಾಧ್ಯವೇ?#WaqfHataoDeshBachao pic.twitter.com/zWU7zDEW73
— Vinod K Gowda (@vinodkspeaks) December 1, 2024
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಪೋಸ್ಟ್ಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ದಿ ನ್ಯೂಸ್ ಮಿನಿಟ್ನ ವರದಿಯೊಂದು ಕಂಡು ಬಂದಿದೆ. ಇದರಲ್ಲಿ “ಆಂಧ್ರ ಸರ್ಕಾರವು ವೈಎಸ್ಆರ್ಸಿಪಿ ಸ್ಥಾಪಿಸಿದ ವಕ್ಫ್ ಬೋರ್ಡ್ ಅನ್ನು ಹೊಸದನ್ನು ರಚಿಸಲು ವಿಸರ್ಜಿಸಿದೆ.” ಎಂದು ಶೀರ್ಷಿಕೆಯನ್ನು ನೀಡಿದೆ.

ಈ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ಆಂಧ್ರಪ್ರದೇಶ ಸರ್ಕಾರದ ಫ್ಯಾಕ್ಟ್ಚೆಕ್ ವಿಂಗ್ ಡಿಸೆಂಬರ್ 1, 2024 ರಂದು X ಪೋಸ್ಟ್ ಮೂಲಕ ಸ್ಪಷ್ಟೀಕರಣವನ್ನು ನೀಡಿದೆ. ಇದರಲ್ಲಿ ವಕ್ಫ್ ಬೋರ್ಡ್ ಮಾರ್ಚ್ 2023 ರಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂದು ಉಲ್ಲೇಖಿಸಲಾಗಿದ್ದು, ಆಡಳಿತಾತ್ಮಕ ನಿಶ್ಚಲತೆ ಮತ್ತು ಕಾನೂನು ಸವಾಲುಗಳನ್ನು ಪರಿಹರಿಸಲು ಅದರ ವಿಸರ್ಜನೆಯ ಅಗತ್ಯವಿದೆ. ಹುದ್ದೆಯಲ್ಲಿ ಶೀಘ್ರವೇ ಹೊಸ ಮಂಡಳಿ ರಚನೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ ಎಂದು ತಿಳಿಸಿದೆ.
The Andhra Pradesh Waqf Board has remained non-functional since March 2023, leading to a period of administrative stagnation. The withdrawal of G.O. Ms. No. 47 became imperative due to several substantive concerns. These include 13 writ petitions challenging its validity, the… https://t.co/0yXCvIdK4q
— FactCheck.AP.Gov.in (@FactCheckAPGov) December 1, 2024
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಆಂಧ್ರಪ್ರದೇಶ ಸರ್ಕಾರ ಒಗ್ಬೂಡನ್ನು ರದ್ದು ಪಡಿಸಿದೆ ಎಂಬುದು ಸುಳ್ಳಾಗಿದೆ ಬದಲಾಗಿ ಈಗಿರುವ ಭಗ್ವಡನ್ನು ವಿಸರ್ಜನೆ ಮಾಡಿದ್ದು ಹೊಸ ಬಗ್ಗೋಡಲು ರಚಿಸಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ ಹೀಗಾಗಿ ವೈರಲ್ ಪೋಸ್ಟ್ ಸುಳ್ಳು ನಿರೂಪಣೆಯಿಂದ ಕೂಡಿದೆ

