Fact Check: ತಮಿಳುನಾಡಿನ ಸರ್ಕಾರ ದೇವಸ್ಥಾನವೊಂದನ್ನು ಮಸೀದಿಯನ್ನಾಗಿ ಪರಿವರ್ತಿಸಿದೆ ಎಂದು 17ನೇ ಶತಮಾನದ ದರ್ಗಾದ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ
ಇತ್ತೀಚೆಗೆ ಹಿಂದೂ ದೇವಾಲಯವೊಂದನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆ ಎಂದು ಪ್ರತಿಪಾದಿಸಿ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ವಿಡಿಯೋದಲ್ಲಿ ದೇವಸ್ಥಾನವನ್ನು ಹೋಲುವ ಆದರೆ ಹಸಿರು ಬಣ್ಣದ ಕಲ್ಲು ಕಂಬಗಳನ್ನು ಒಳಗೊಂಡ ಪ್ರಾಚೀನ ಕಟ್ಟವೊಂದನ್ನು ತೋರಿಸಲಾಗುತ್ತಿದೆ. ಈ ವಿಡಿಯೋವನ್ನು ಹಂಚಿಕೊಂಡಿರುವವರು, ” ಹಿಂದೂಗಳೇ ಇನ್ನೂ ಮಲಗಿಯೇ ಇರಿ. ತಮಿಳುನಾಡಿನ ತೆಂಕಶಿಯಲ್ಲಿರುವ ಪುರಾತನ ಹಿಂದೂ ದೇವಾಲಯವನ್ನು ಇತ್ತೀಚೆಗೆ ಸರ್ಕಾರದ ಸಹಾಯದಿಂದ ಮಸೀದಿಯಾಗಿ ಪರಿವರ್ತಿಸಿದ್ದಾರೆ.” ಎಂದು ಪ್ರತಿಪಾದಿಸಲಾಗುತ್ತಿದೆ. ಮತ್ತು ಈ ಮೂಲಕ ಆಡಳಿತಾರೂಢ ಡಿಎಂಕೆ ಪಕ್ಷವನ್ನು ಟೀಕಿಸಲಾಗುತ್ತಿದೆ. *An ancient Hindu temple in Tenkasi,…
