‘ದುಬೈ ರಾಜನ ಪತ್ನಿ’ ಚೆನ್ನೈನಲ್ಲಿ ವ್ಯಾಪಾರ ಪ್ರವಾಸದಲ್ಲಿದ್ದಾಗ ತಮಿಳುನಾಡಿನ ಶ್ರೀಪುರಂನಲ್ಲಿರುವ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿದ್ದಾರೆ ಎಂಬ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. “ದುಬೈ ಶೇಖ್ ಅವರ ಹೆಂಡತಿ.. ಕೆಲಸದ ನಿಮಿತ್ತ ಭಾರತಕ್ಕೆ ಬಂದಿದ್ದರು.. ಆಗ ತಮಿಳುನಾಡಿನ ಗೋಲ್ಡನ್ ಟೆಂಪಲ್ ದರ್ಶನ ಮಾಡಿದ್ದಾರೆ.. ಹಿಜಾಬ್ ಇಲ್ಲ ,ಬುರ್ಖಾ ಇಲ್ಲ.. ಸನಾತನ ಧರ್ಮಕ್ಕನುಗುಣವಾಗಿ ಶಿಸ್ತಿನ ವಸ್ತ್ರ ಧರಿಸಿ ಪ್ರಸಾದವನ್ನು ಸ್ವೀಕರಿಸಿಕೊಂಡಿದ್ದಾರೆ.. ಇಲ್ಲಿ ನೂರಾರು ಕಟ್ಟುಪಾಡುಗಳು, ಎಂತಹ ವಿಚಿತ್ರ ವಿಪರ್ಯಾಸ.” ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಸಾಕಷ್ಟು ಹಂಚಿಕೊಳ್ಳಲಾಗುತ್ತಿದೆ.
ದುಬೈ ಶೇಖ್ ಅವರ ಹೆಂಡತಿ… ಕೆಲಸದ ನಿಮಿತ್ತ ಭಾರತಕ್ಕೆ ಬಂದಿದ್ದರು…. ಆಗ ತಮಿಳುನಾಡಿನ golden temple ದರ್ಶನ ಮಾಡಿದ್ದಾರೆ…. ಹಿಜಾಬ್ ಇಲ್ಲ ,ಬುರ್ಖಾ ಇಲ್ಲ…. ಸನಾತನ ಧರ್ಮಕ್ಕನುಗುಣವಾಗಿ ಶಿಸ್ತಿನ ವಸ್ತ್ರ ಧರಿಸಿ ಪ್ರಸಾದವನ್ನು ಸ್ವೀಕರಿಸಿಕೊಂಡಿದ್ದಾರೆ…
ಇಲ್ಲಿ ಮಾತ್ರ ನೂರಾರು ಕಟ್ಟುಪಾಡುಗಳು
ಎಂತಹ ವಿಚಿತ್ರ ವಿಪರ್ಯಾಸ pic.twitter.com/eHrZoqKh4U— ಶ್ರೀಹಸ್ತಿನಿ🇮🇳(Modi ka Parivar) (@Shobha_Music) May 17, 2024
ಫ್ಯಾಕ್ಟ್‌ಚೆಕ್: ಈ ಕುರಿತು ಹುಡುಕಿದಾಗ, ಯುನೈಟೆಡ್ ಅರಬ್ ಎಮಿರೇಟ್ಸ್ (UAE)ಯ ರಾಜಮನೆತನದ ರಾಜಕುಮಾರಿ ಹೆಂಡ್ ಅಲ್ ಖಾಸಿಮಿ ಅವರು ತಮಿಳುನಾಡಿನ ವೆಲ್ಲೂರು ಬಳಿಯ ಶ್ರೀಪುರಂ ಗೋಲ್ಡನ್ ಟೆಂಪಲ್ ಎಂದೂ ಕರೆಯಲ್ಪಡುವ ಶ್ರೀ ಲಕ್ಷ್ಮಿ ನಾರಾಯಣಿ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿದ ವೀಡಿಯೊ 2019 ರ ವೀಡಿಯೊ ಎಂದು ತಿಳಿದು ಬಂದಿದೆ.
ಈ ಸುಳಿವಿನಿಂದ ನಾವು ಗೂಗಲ್‌ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದಾಗ 3 ಜೂನ್ 2019 ರಂದು ಪ್ರಕಟಿಸಲಾದ ವೆಲ್ಲೂರು ದೇವಸ್ಥಾನದ ಅಧಿಕೃತ ಚಾನೆಲ್ ‘ಶ್ರೀಪುರಂ ಟಿವಿ’ ಹೆಸರಿನ YouTube ಚಾನಲ್‌ನಲ್ಲಿ ವೀಡಿಯೊ ಒಂದು ದೊರಕಿತು. ಶೀರ್ಷಿಕೆಯಲ್ಲಿ, “ಹರ್ ಹೈನೆಸ್ ಶೇಖಾ ಹೆಂಡ್ ಫೈಸಲ್ ಅಲ್ ಖಾಸ್ಸೆಮಿ 22-02-2019 ರಂದು ಶ್ರೀಪುರಂಗೆ ಭೇಟಿ ನೀಡಿದ್ದಾರೆ” ಎಂದು ಬರೆಯಲಾಗಿದೆ.
ನಂತರ ನಾವು ಕೀವರ್ಡ್‌ಗಳೊಂದಿಗೆ ಹುಡುಕಾಡಿದಾಗ ನವಭಾರತ್ ಟೈಮ್ಸ್, ಪಂಜಾಬ್ ಕೇಸರಿ ಮತ್ತು ಅಮರ್ ಉಜಾಲಾದಲ್ಲಿ 2020 ರ ಸುದ್ದಿ ವರದಿಗಳು ಲಭ್ಯವಾಗಿದ್ದು, ರಾಜಕುಮಾರಿಯು ತಮಿಳುನಾಡು ದೇವಸ್ಥಾನಕ್ಕೆ ಭೇಟಿ ನೀಡಿದ ಹಳೆಯ ವೀಡಿಯೊವನ್ನು ಎಕ್ಸ್(ಟ್ವೀಟರ್) ನಲ್ಲಿ ಪೋಸ್ಟ್ ಮಾಡಿದಾಗ ಅವರು, ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್‌ಗೆ ಒಳಗಾದರು ಎಂದು ವರದಿಗಳಲ್ಲಿ ತಿಳಿಸಲಾಗಿದೆ.
ಅವರು ವೀಡಿಯೊಗೆ ನೀಡಿರುವ ಶೀರ್ಷಿಕೆಯಲ್ಲಿ “ಭಾರತದಲ್ಲಿ, ನಾನು ಪಾಂಡಿಚೇರಿಯ ಬೆಟ್ಟಗಳನ್ನು ಅನ್ವೇಷಿಸಿದ್ದೇನೆ, ಅಲ್ಲಿ ನಾನು ಹೊಲಗಳಲ್ಲಿ ನಡೆಯುವಾಗ ಸೂರ್ಯನು ನನ್ನ ಕೆನ್ನೆಗೆ ಮುತ್ತಿಡುತ್ತಿದ್ದ, ನನ್ನ ಚಹದೊಂದಿಗೆ ನಾನ್ ಬ್ರೆಡ್ ತಿನ್ನುವಾಗ ಸೀರೆ ಬಟ್ಟೆಗಳು ಮತ್ತು ಬಿಂದಿಗಳನ್ನು ಖರೀದಿಸಿದೆ. ನಾನು ವೆಲ್ಲೂರಿನ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿದ್ದೇನೆ. ಮತ್ತು ಶ್ರೀ ಶಕ್ತಿ ಅಮ್ಮನವರೊಂದಿಗೆ ರೊಟ್ಟಿಯನ್ನು ಮುರಿದು ಬಾಳೆ ಎಲೆ ಊಟವನ್ನು ಸವಿದೆವು” ಎಂದಿದ್ದಾರೆ.
ಆದ್ದರಿಂದ, ಶೇಖ್ ಹೆಂಡ್ ಅಲ್ ಖಾಸಿಮಿ ಇತ್ತೀಚೆಗೆ ವೆಲ್ಲೂರ್ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿದ್ದರು ಮತ್ತು ಅವರು “ದುಬೈ ರಾಜನ ಪತ್ನಿ” ಎಂಬ ಸುಳ್ಳು ಹೇಳಿಕೆಯೊಂದಿಗೆ ಯುಎಇ ರಾಜಕುಮಾರಿಯ ಹಳೆಯ ವೀಡಿಯೊವನ್ನು ಈಗ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿ: 2017 ರ ವೀಡಿಯೊವನ್ನು ಪಶ್ಚಿಮ ಬಂಗಾಳದಲ್ಲಿ ರೋಹಿಂಗ್ಯಾಗಳು ಹಿಂದೂಗಳನ್ನು ಥಳಿಸಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ
ವಿಡಿಯೋ ನೋಡಿ: 20 ನಗರಗಳಲ್ಲಿ ಮೆಟ್ರೋ ಸೇವೆಗಳು ಎಂದು ಬಿಜೆಪಿ ಮೋದಿ ಪೋಸ್ಟರ್‌ನಲ್ಲಿ ಸಿಂಗಾಪುರದ ಮೆಟ್ರೋ ರೈಲಿನ ಫೋಟೋವನ್ನು ಬಳಸಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.