Fact Check: 2017 ರ ವೀಡಿಯೊವನ್ನು ಪಶ್ಚಿಮ ಬಂಗಾಳದಲ್ಲಿ ರೋಹಿಂಗ್ಯಾಗಳು ಹಿಂದೂಗಳನ್ನು ಥಳಿಸಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಪರಿಸ್ಥಿತಿ ಹೇಗಿದೆ ನೊಡಿ ಎನ್ನಲಾದ ವೀಡಿಯೊ ಒಂದು (ಇಲ್ಲಿ ಮತ್ತು ಇಲ್ಲಿ) ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಗುಂಪೊಂದು ಕೆಲವು ಪುರುಷರನ್ನು ಹಿಂಬಾಲಿಸಿ ಥಳಿಸುವುದನ್ನು ನಾವು ನೋಡಬಹುದು. ಕೆಲವು ರೋಹಿಂಗ್ಯಾ ಪುರುಷರು ಹಿಂದೂಗಳಿಗೆ ಒದೆಯುವುದು ಮತ್ತು ಗುದ್ದುವುದನ್ನು ವೀಡಿಯೊ ತೋರಿಸುತ್ತದೆ ಎಂದು ಹೇಳಲಾಗಿದೆ. ಈ ಲೇಖನದ ಮೂಲದ ಇದು ನಿಜವೇ, ನಿಜಕ್ಕೂ ಪಶ್ಚಿಮ ಬಂಗಾಳದಲ್ಲಿ ಹಿಂದುಗಳ ಪರಿಸ್ಥಿತಿ ಕಷ್ಟಕರವಾಗಿದೆಯೇ ತಿಳಿಯೋಣ ಬನ್ನಿ.

ಫ್ಯಾಕ್ಟ್‌ಚೆಕ್: ವೈರಲ್ ವಿಡಿಯೋವಿನ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು ಅದರ ಕೆಲವು ಕೀಫ್ರೇಮ್‌ಗಳಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ಅದೇ ದೃಶ್ಯಗಳನ್ನು ಒಳಗೊಂಡಿರುವ ‘NMF ನ್ಯೂಸ್‘ ಹೆಸರಿನ ಪರಿಶೀಲಿಸಿದ YouTube ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊ ಸುದ್ದಿ ವರದಿ (ಆರ್ಕೈವ್ ಲಿಂಕ್)ಯೊಂದು ಲಭ್ಯವಾಗಿದೆ. ಈ ವೀಡಿಯೊವನ್ನು 6 ಅಕ್ಟೋಬರ್ 2017 ರಂದು ಅಪ್‌ಲೋಡ್ ಮಾಡಲಾಗಿದೆ, ಇದು ಇತ್ತೀಚಿನ ಘಟನೆ ಎಂಬ ಪ್ರತಿಪಾದನೆ ಸುಳ್ಳಾಗಿದೆ.

ಸುದ್ದಿ ವರದಿಗಳ ಪ್ರಕಾರ (ಇಲ್ಲಿ, ಇಲ್ಲಿ ಮತ್ತು ಇಲ್ಲಿ), ಈ ಘಟನೆ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ನಡೆದಿದೆ. 2017 ರಲ್ಲಿ, ಆಗಿನ ಬಿಜೆಪಿ ಬಂಗಾಳದ ಅಧ್ಯಕ್ಷ ದಿಲೀಪ್ ಘೋಷ್ ಅವರು ಸಾರ್ವಜನಿಕ ಸಭೆಗಾಗಿ ಡಾರ್ಜಿಲಿಂಗ್‌ಗೆ ಭೇಟಿ ನೀಡಿದಾಗ “ಗೂರ್ಖಾ ಜನಮುಕ್ತಿ ಮೋರ್ಚಾದ (ಜಿಜೆಎಂ) ಬೆನೊಯ್ ತಮಾಂಗ್ ಬಣದ ಜನರು ಘೋಷ್ ಅವರನ್ನು ಸಾರ್ವಜನಿಕ ಸಭೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ ಕೆಲವು ನಿಮಿಷಗಳ ನಂತರ ಮೋರ್ಚಾದ ಕಾರ್ಯಕರ್ತರನ್ನು ಸಿಟ್ಟಿಗೆದ್ದರು ಎಂದಿದೆ. ಸುದ್ದಿ ವರದಿಗಳ ಪ್ರಕಾರ, ಇಲ್ಲಿ ಸಂಘರ್ಷ ನಡೆದಿರುವುದು ಬಿಜೆಪಿ ಕಾರ್ಯಕರ್ತರು ಮತ್ತು ಗೂರ್ಖಾ ಜನಮುಕ್ತಿ ಮೋರ್ಚಾಕ್ಕೆ ಸೇರಿದವರ ನಡುವೆಯೇ ಹೊರತು ರೋಹಿಂಗ್ಯಾಗಳಲ್ಲ.

ಇತ್ತೀಚೆಗಷ್ಟೆ ಇದೇ ವಿಡಿಯೋವನ್ನು ಬಿಜೆಪಿ ನಾಯಕರು ಮಣಿಪುರಕ್ಕೆ ಪ್ರಚಾರಕ್ಕೆ ತೆರಳಿದ ವೇಳೆ ಅಲ್ಲಿನ ಜನರು ಸಿಟ್ಟಿಗೆದ್ದು ಬಿಜೆಪಿ ನಾಯಕರ ಮೇಲೆ ದಾಳಿ ನಡೆಸಿ ಪ್ರಚಾರದ ಸ್ಥಳದಿಂದ ಹೊಡೆದೋಡಿಸಿದ್ದಾರೆ ಎಂದು ಹಂಚಿಕೊಳ್ಳಲಾಗಿತ್ತು. ಇದನ್ನು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಸತ್ಯಶೋದನೆಯನ್ನು ನಡೆಸಿ ಲೇಖನವನ್ನು ಪ್ರಕಟಿಸಿತ್ತು ನೀವದನ್ನು ಇಲ್ಲಿ ಓದಬಹುದು.

ಇದಲ್ಲದೆ, ಪಶ್ಚಿಮ ಬಂಗಾಳದಲ್ಲಿ ರೋಹಿಂಗ್ಯಾಗಳು ಹಿಂದೂಗಳು ಅಥವಾ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ಮಾಡಿರುವ ಯಾವುದೇ ಘಟನೆಯನ್ನು ತಿಳಿಯಲು ನಾವು ಇಂಟರ್ನೆಟ್‌ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಈ ಹುಡುಕಾಟವು ವೈರಲ್ ಹೇಳಿಕೆಯನ್ನು ಬೆಂಬಲಿಸುವ ಯಾವುದೇ ವರದಿಗಳು ಲಭ್ಯವಾಗಿಲ್ಲ, ಪಶ್ಚಿಮ ಬಂಗಾಳದಲ್ಲಿ ರೊಹಿಂಗ್ಯಾಗಳು ಹಿಂದೂಗಳ ಮೇಲೆ ದಾಳಿ ಮಾಡಿದ ಇತ್ತೀಚಿನ ಘಟನೆಯಂತೆ ಎಂಬಂತೆ ಹಳೆಯ ವೀಡಿಯೊವನ್ನು ಈಗ ಹಂಚಿಕೊಳ್ಳಲಾಗುತ್ತಿದೆ ಎಂದು ಇದರಿಂದ ಸ್ಪಷ್ಟವಾಗುತ್ತದೆ.


ಇದನ್ನು ಓದಿ: ರಾಹುಲ್ ಗಾಂಧಿ ಚೀನಾದ ಸಂವಿಧಾನ ಪ್ರತಿ ತೋರಿಸಿಲ್ಲ: ಅಸ್ಸಾಂ ಸಿಎಂ ಹಿಮಂತ ಶರ್ಮಾ ಪ್ರತಿಪಾದನೆ ಸುಳ್ಳು


ವಿಡಿಯೋ ನೋಡಿ: 20 ನಗರಗಳಲ್ಲಿ ಮೆಟ್ರೋ ಸೇವೆಗಳು ಎಂದು ಬಿಜೆಪಿ ಮೋದಿ ಪೋಸ್ಟರ್‌ನಲ್ಲಿ ಸಿಂಗಾಪುರದ ಮೆಟ್ರೋ ರೈಲಿನ ಫೋಟೋವನ್ನು ಬಳಸಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *