Fact Check: ಮಣಿಪುರದಲ್ಲಿ ಬಿಜೆಪಿ ನಾಯಕರನ್ನು ಥಳಿಸಲಾಗಿದೆ ಎಂದು ಡಾರ್ಜಿಲಿಂಗ್‌ನ ಹಳೆಯ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

BJP

ಮಣಿಪುರದಲ್ಲಿ ಆಂತರಿಕ ಹಿಂಸಾಚಾರ ಪ್ರಾರಂಭವಾಗಿ ಅನೇಕ ತಿಂಗಳುಗಳೇ ಕಳೆಯುತ್ತಿವೆ. ಆದರೆ ನಮ್ಮ ದೇಶದ ಪ್ರಧಾನ ಮಂತ್ರಿಗಳು ಮತ್ತು ಗೃಹ ಸಚಿವರು ಈ ಕುರಿತು ಯಾವುದೇ ಹೇಳಿಕೆ ನೀಡಿಲ್ಲ. ಮಣಿಪುರದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಸಹ ರಾಜ್ಯದ ಅಂತರಿಕ ಕಲಹ ನಿಯಂತ್ರಿಸಲು ಸಾಧ್ಯವಾಗದೆ ಕೇಂದ್ರ ಸರ್ಕಾರ ಮಧ್ಯಸ್ತಿಕೆ ವಹಿಸುವಂತೆ ಕೇಳಿಕೊಂಡಿದ್ದರು. ಆದರೂ ರಾಷ್ಟ್ರಪತಿ ಆಡಳಿತವನ್ನು ಇನ್ನೂ ಸಹ ಜಾರಿಗೊಳಿಸಿಲ್ಲ. ಭಾರತದ ಯಾವ ಮಾಧ್ಯಮಗಳು ಸಹ ಮಣಿಪುರದ ಸುದ್ದಿಗಳನ್ನು ಬಿತ್ತರಿಸುತ್ತಿಲ್ಲ. ಆದರೆ ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದ ವಿಡಿಯೋಗಳು ಮಾತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ “ಮಣಿಪುರದಲ್ಲಿ ಬಿಜೆಪಿ ನಾಯಕರು ಪ್ರಚಾರಕ್ಕೆ ತೆರಳಿದ ವೇಳೆ ಅಲ್ಲಿನ ಜನರು ಅವರನ್ನು ಥಳಿಸಿ ಓಡಿಸಿದ್ದಾರೆ. ಮತ್ತು 400 ಸೀಟು ನೀಡಲು ಭರ್ಜರಿ ಸ್ವಾಗತ ನೀಡಿದ್ದಾರೆ” ಎಂಬ ಸಂದೇಶದ ವಿಡಿಯೋ ಎಕ್ಸ್‌ ನಲ್ಲಿ ವೈರಲ್ ಆಗಿದೆ. ಇದರಲ್ಲಿ ಸ್ಥಳೀಯ ಜನರು ಬಿಜೆಪಿ ನಾಯಕರನ್ನು ಥಳಿಸುವುದನ್ನು ನೋಡಬಹುದು.

ಕೆಲವು ಬಿಜೆಪಿ ಬೆಂಬಲಿಗರು ಕಾಂಗ್ರೆಸ್‌ ಕಾರ್ಯರ್ತರು ಬಿಜೆಪಿ ನಾಯಕರ ಮೇಲೆ ದಾಳಿ ನಡೆಸಿದ್ದಾರೆ. ಚುನಾವಣಾ ಆಯೋಗ ಈ ಪ್ರಕರಣದ ವಿರುದ್ದ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.ಫ್ಯಾಕ್ಟ್‌ಚೆಕ್: ಈ ಘಟನೆ ಅಕ್ಟೋಬರ್ 5, 2017 ರಂದು ಡಾರ್ಜಿಲಿಂಗ್‌ನಲ್ಲಿ ನಡೆದಿದೆ. ಡಾರ್ಜಿಲಿಂಗ್ ಪ್ರತ್ಯೇಕ ಗೂರ್ಖಾಲ್ಯಾಂಡ್‌‌ಗೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದ್ದ ಸಮಯದಲ್ಲಿ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲು ತೆರಳಿದ ವೇಳೆ ವಿವಿಧ ಸಂಘಟನೆಗಳ ಸ್ಥಳೀಯ ಗೂರ್ಖಾ ನಾಯಕರು ತೀವ್ರ ಪ್ರತಿಭಟನೆಗಳನ್ನು ನಡೆಸಿ, ದಾಳಿ ಮಾಡಿದ್ದರು. ಈ ಕುರಿತು ಹಿಂದುಸ್ತಾನ್ ಟೈಮ್ಸ್ ಅವರು ವರದಿ ಮಾಡಿದ್ದಾರೆ.

“ನಾವು ಸಭಾಂಗಣದಿಂದ ಹೊರಬಂದ ನಂತರ ಅವರು ನಮ್ಮ ಮೇಲೆ ಬೀದಿಯಲ್ಲಿ ದಾಳಿ ಮಾಡಿದರು. ಪೊಲೀಸರ ಅನುಪಸ್ಥಿತಿ ಹೆಚ್ಚು ಕಾಣುತ್ತಿತ್ತು. ಬೆಟ್ಟಗಳಿಗೆ ಶಾಂತಿ ಇನ್ನೂ ಮರಳಿಲ್ಲ ಎಂದು ಎಲ್ಲರೂ ನೋಡಬಹುದು ”ಎಂದು ಡಾರ್ಜಿಲಿಂಗ್ ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಘೋಷ್ ಹೇಳಿದರು. ಎಂದು ವರದಿಯಲ್ಲಿ ತಿಳಿಸಲಾಗಿದೆ.

ಆದ್ದರಿಂದ ಈ ವಿಡಿಯೋ ಇತ್ತೀಚಿನದಾಗಿರದೆ ಹಳೆಯ ವಿಡಿಯೋ ಆಗಿದೆ ಮತ್ತು ಮಣಿಪುರಕ್ಕೆ ಸಂಬಂದಿಸಿದ್ದಲ್ಲ.


ಇದನ್ನು ಓದಿ: Fact Check | AI- ರಚಿತವಾದ ಚಿತ್ರವನ್ನು BARC ಕಟ್ಟಡದ ಹೊಸ ವಿನ್ಯಾಸ ಎಂದು ಸುಳ್ಳು ಮಾಹಿತಿ ಹಂಚಿಕೆ


ವಿಡಿಯೋ ನೋಡಿ: ಯುಟ್ಯೂಬರ್ ಧ್ರುವ್ ರಾಠೀ ಪಾಕಿಸ್ತಾನ ಮೂಲದವರೆಂದು ಸುಳ್ಳು ಹರಡಲಾಗುತ್ತಿದೆ | Dhruv Rathee


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *