Fact Check | AI- ರಚಿತವಾದ ಚಿತ್ರವನ್ನು BARC ಕಟ್ಟಡದ ಹೊಸ ವಿನ್ಯಾಸ ಎಂದು ಸುಳ್ಳು ಮಾಹಿತಿ ಹಂಚಿಕೆ

“ಈ ಚಿತ್ರವು ಬಾಬಾ ಪರಮಾಣು ಸಂಶೋಧನಾ ಕೇಂದ್ರ (BARC) ಕಟ್ಟಡದ ಹೊಸ ವಿನ್ಯಾಸವಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿಯಲ್ಲಿ ಈ ಕಟ್ಟಡ ನಿರ್ಮಾಣವಾಗಲಿದೆ.” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇನ್ನು ಇದನ್ನೇ ನಿಜವೆಂದು ನಂಬಿ ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದು, ಇದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಬರೆದುಕೊಳ್ಳುತ್ತಿದ್ದಾರೆ.

ಇನ್ನು ಈ ವಿನ್ಯಾಸವನ್ನು ನೋಡಿದಾಗ ಅದ್ಭುತವಾಗಿದೆ ಎನಿಸುವಂತಿದ್ದರು, ಈ ರೀತಿಯ ವಿನ್ಯಾಸಕ್ಕೆ ನಿಜಕ್ಕೂ ಕೇಂದ್ರ ಸರ್ಕಾರ ಅನುಮತಿಯನ್ನು ನೀಡಿದೆಯ ಎಂಬ ಪ್ರಶ್ನೆಗಳನ್ನು ಕೂಡ ಹುಟ್ಟು ಹಾಕುತ್ತಿದೆ. ಹಾಗಾಗಿ ಈ ವಿನ್ಯಾಸ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಈ ಕುರಿತು ಸತ್ಯಾಸತ್ಯತೆಯನ್ನು ಈ ಅಂಕಣದಲ್ಲಿ ಕುಲಾಂಕುಶವಾಗಿ ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಲು ಮೊದಲು ಈ ಕುರಿತು ರಾಷ್ಟ್ರೀಯ ಮತ್ತು ರಾಜ್ಯ ಸುದ್ದಿ ಮಾಧ್ಯಮಗಳಲ್ಲಿ ಯಾವುದಾದರು ವರದಿ ಆಗಿದೆಯೇ ಎಂದು ಪರಿಶೀಲನೆ ನಡೆಸಿತು. ಆದರೆ ಈ ಕುರಿತು ಯಾವುದೇ ವರದಿಗಳು ಇದುವರೆಗೂ ಪತ್ತೆಯಾಗಿಲ್ಲ. ಇನ್ನು ಈ ಕುರಿತು ಕೇಂದ್ರ ಸರ್ಕಾರದಿಂದಲೂ ಕೂಡ ಯಾವುದೇ ಅಧಿಕೃತ ಮಾಹಿತಿಯೂ ಲಭ್ಯವಾಗಿಲ್ಲ.

ಈ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ BARC ನ  ಅಧಿಕೃತ ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಹುಡುಕಲಾಯಿತು. ಆದರೆ ಅಲ್ಲಿಯೂ ಕೂಡ ಇಂತಹ ಯಾವುದೇ ವಿನ್ಯಾಸವನ್ನು ಬಿಡುಗಡೆ ಮಾಡಿಲ್ಲ. ಇನ್ನು, ಹೈವ್ AI ಪತ್ತೆ ಸಾಧನದ ಪ್ರಕಾರ, ವೈರಲ್ ಚಿತ್ರವು 100% AI-ರಚಿಸಿದ ಚಿತ್ರ ಎಂಬುದನ್ನು ಉಲ್ಲೇಖ ಮಾಡಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ವೈರಲ್‌ ಆಗುತ್ತಿರುವ ವಿನ್ಯಾಸಕ್ಕೂ ಬಾಬಾ ಪರಮಾಣು ಸಂಶೋಧನಾ ಕೇಂದ್ರಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದ್ದು, ವೈರಲ್‌ ಪ್ರತಿಪಾದನೆ ಸಂಪೂರ್ಣ ಸುಳ್ಳಿನಿಂದ ಕೂಡಿದೆ.


ಇದನ್ನೂ ಓದಿ : ಯುಟ್ಯೂಬರ್ ಧ್ರುವ್ ರಾಠೀ ಪಾಕಿಸ್ತಾನ ಮೂಲದವರೆಂದು ಸುಳ್ಳು ಹರಡಲಾಗುತ್ತಿದೆ | Dhruv Rathee


ಈ ವಿಡಿಯೋ ನೋಡಿ : ಯುಟ್ಯೂಬರ್ ಧ್ರುವ್ ರಾಠೀ ಪಾಕಿಸ್ತಾನ ಮೂಲದವರೆಂದು ಸುಳ್ಳು ಹರಡಲಾಗುತ್ತಿದೆ | Dhruv Rathee


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *