
Fact Check: ಶಾರುಖ್ ಖಾನ್ ಅವರ ಪತ್ನಿ ಗೌರಿ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂದು ಎಐ ಸೃಷ್ಟಿಸಿದ ಪೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ
ಇತ್ತೀಚೆಗೆ “ಬಾಲಿವುಡ್ ನಟ ಶಾರುಖ್ ಖಾನ್ ಅವರು ತಮ್ಮ ಕುಟುಂಬದ ಸಮೇತ ಹೊಸ ವರ್ಷದ ದಿನದಂದು ಮೆಕ್ಕಾಗೆ ಭೇಟಿ ನೀಡಿದ್ದಾರೆ. ಗೌರಿ ಖಾನ್ ಅವರು ತಾವು ಮದುವೆಯಾಗಿ 33 ವರ್ಷಗಳ ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದಾರೆ ಮತ್ತು ಮೆಕ್ಕಾದಲ್ಲಿ ಉಮ್ರಾ ಆಚರಿಸಿದ್ದಾರೆ” ಎಂದು ಶಾರುಖ್ ಅವರ ಕುಟುಂಬದ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವೈರಲ್ ಆಗಿರುವ ಪೋಟೋಗಳಲ್ಲಿ ಮುಸ್ಲಿಂ ಉಡುಗೆಯಲ್ಲಿ ನಟ ಶಾರುಖ್ ಖಾನ್, ಅವರ ಪತ್ನಿ ಇಂಟೀರಿಯರ್ ಡಿಸೈನರ್ ಗೌರಿ, ಮಗ ಹಾಗೂ…