ಯೋಗ ತರಬೇತುದಾರ ಸುಹೇಲ್ ಅನ್ಸಾರಿ 5 ಹಿಂದೂ ಮಹಿಳೆಯರುನ್ನು ಇಸ್ಲಾಂಗೆ ಮದುವೆ ಮಾಡಿಸಿದ್ದಾನೆ ಎಂಬುದಕ್ಕೆ ಆಧಾರಗಳಿಲ್ಲ

Yoga

ಇತ್ತೀಚೆಗೆ ಮುಸ್ಲೀಮರಿಗೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ಕೋಮುದ್ವೇಷ ಹರಡುವ ಸಲುವಾಗಿ ತಿರುಚಿ ಹಂಚಿಕೊಳ್ಳಲಾಗುತ್ತಿದೆ. ಹಾಗೆಯೇ ಮುಸ್ಲಿಂ ಪ್ರತಿಭೆಗಳನ್ನು ಕೇಂದ್ರವಾಗಿರಿಸಿಕೊಂಡು ಸುಳ್ಳು ಆರೋಪಗಳೊಂದಿಗೆ ಅಪಪ್ರಚಾರ ಮಾಡಲಾಗುತ್ತಿದೆ.

ಇದಕ್ಕೆ ಉದಾಹರಣೆ ಎಂಬಂತೆ,”ಇವನ ಹೆಸರು ಸುಹೇಲ್ ಅನ್ಸಾರಿ.. ಇವನು ಯೋಗ ತರಬೇತುದಾರ. ಯೋಗ ಕಲಿಸುವ ರೀತಿ ನೋಡಿ, ಅಷ್ಟೇ ಅಲ್ಲ ಇವನು ಐದು ಹಿಂದೂ ಮಹಿಳೆಯರುನ್ನು ಇಸ್ಲಾಂಗೆ ಮದುವೆ ಮಾಡಿಸಿದ್ದಾನೆ.” ಎಂಬ ಯೋಗ ತರಬೇತಿದಾರರೊಬ್ಬರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಫ್ಯಾಕ್ಟ್‌ಚೆಕ್‌: ಸುಹೇಲ್ ಅನ್ಸಾರಿ ಅಡ್ವಾನ್ಸ್ಡ್‌ ಯೋಗ ತರಬೇತಿ ಪಟು ಆಗಿದ್ದು, ಮೂಲತಃ ದೆಹಲಿಯವರಾಗಿದ್ದಾರೆ. ತಾನು ಕಾಮನ್ವೆಲ್ತ್ ಕ್ರಿಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದೆ ಎಂದು ಹೇಳಿಕೊಂಡಿದ್ದಾರೆ. ಇವರು ಯೋಗಕ್ಕೆ ಸಂಬಂಧಿಸಿದಂತೆ ಉತ್ತರಖಾಂಡದ ಋಷಿಕೇಶದ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷದ ಡಿಪ್ಲಮೋ ಮತ್ತು ಎರಡು ವರ್ಷದ ಸ್ನಾತಕೊತ್ತರ ಪದವಿಯನ್ನು ಯೋಗದಲ್ಲಿ ಪಡೆದುಕೊಂಡಿದ್ದಾರೆ.

ತಮ್ಮ ಕುರಿತ ಅಪಪ್ರಚಾರಕ್ಕೆ ಪ್ರತಿಕ್ರಿಯಿಸಿರುವ ಅವರು ವಿಡಿಯೋ ಒಂದನ್ನು ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು “ಇದೆಲ್ಲ ಸುಳ್ಳು. ನಾವು ಯೋಗ ಕಲಿಸಿಕೊಡುವಾಗ ಯಾವುದೇ ಜಾತಿ ಮತ್ತು ಧರ್ಮವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕಲಿಸಿಕೊಡುವುದಿಲ್ಲ, ನಾನೊಬ್ಬ ಯೋಗ ತರಬೇತಿದಾರನಾಗಿ ಎಲ್ಲರನ್ನೂ ಸಮಾನವಾಗಿ ನೋಡುತ್ತೇನೆ. ಎಲ್ಲಾ ಧರ್ಮದವರು ಮತ್ತು ಗಂಡು-ಹೆಣ್ಣು ಎಂದು ಸಹ ಬೇದ ಭಾವ ಮಾಡುವುದಿಲ್ಲ. ನನ್ನ ಬಳಿ ಯೋಗ ಕಲಿಯಲು ಬರುವವರು ಬಹುತೇಕ ಯೋಗ ಟೀಚರ್‌ಗಳೇ ಆಗಿರುತ್ತಾರೆ. ನಾನು ಅವರಿಗೆ ಅಡ್ವಾನ್ಸ್ಡ್‌ ಯೋಗ ಕಳಿಸಿಕೊಡುತ್ತೇನೆ.” ಎಂದು ಸ್ಪಷ್ಟನೆ ನೀಡಿದ್ದಾರೆ.

ಸುಹೇಲ್ ಅನ್ಸಾರಿ ಅವರು ಹಿಂದು ಯುವತಿಯರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿರುವ ಕುರಿತು ಹುಡುಕಿದಾಗ ಯಾವುದೇ ದಾಖಲೆಗಳು ಮತ್ತು ಸುದ್ದಿ ಕಂಡು ಬಂದಿಲ್ಲ.

ಆದ್ದರಿಂದ ಯೋಗ ತರಬೇತುದಾರ ಸುಹೇಲ್ ಅನ್ಸಾರಿ 5 ಹಿಂದೂ ಮಹಿಳೆಯರುನ್ನು ಇಸ್ಲಾಂಗೆ ಮದುವೆ ಮಾಡಿಸಿದ್ದಾನೆ  ಎಂಬುದು ಸುಳ್ಳು ಆರೋಪವಾಗಿದೆ.


ಇದನ್ನು ಓದಿ: Fact Check | ಬಾಂಗ್ಲಾದೇಶದಲ್ಲಿ ಬುರ್ಖಾ ಧರಿಸದ ಹಿಂದೂ ಯುವತಿಗೆ ಕಿರುಕುಳ ಎಂಬ ವಿಡಿಯೋ ಕಿರುಚಿತ್ರದ್ದಾಗಿದೆ


ವಿಡಿಯೋ ನೋಡಿ: ಪಾಕಿಸ್ತಾನದಲ್ಲಿ ಹಿಂದುಗಳ ಜನಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *