Fact Check | ಬಾಂಗ್ಲಾದೇಶದಲ್ಲಿ ಬುರ್ಖಾ ಧರಿಸದ ಹಿಂದೂ ಯುವತಿಗೆ ಕಿರುಕುಳ ಎಂಬ ವಿಡಿಯೋ ಕಿರುಚಿತ್ರದ್ದಾಗಿದೆ

“ಹಿಂದೂ ಯುವತಿಯೊಬ್ಬಳು ಬುರ್ಖಾ ಧರಿಸಿಲ್ಲವೆಂದು ಆಕೆಗೆ ಬಸ್‌ನಲ್ಲಿದ್ದ ಯುವಕರು ಕಿರುಕುಳ ನೀಡಿದ್ದಾರೆ. ಈಕೆ ಅದನ್ನು ಕಂಡಕ್ಟರ್ ಬಳಿ ಪ್ರಶ್ನಿಸಿದಾಗ, ಆತನು ಕೂಡ ಈಕೆ ಬುರ್ಖಾ ಹಾಕಿಲ್ಲವೆಂದು ಬಸ್‌ನಿಂದ ಇಳಿಸಿದ್ದಾನೆ..” ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ವಿಡಿಯೋವನ್ನು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ.

ಹೀಗೆ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕೋಮು ಬಣ್ಣವನ್ನು ಪಡೆದುಕೊಂಡಿದ್ದು ಸಾಕಷ್ಟು ಮಂದಿ ಇದು ನಿಜವಾದ ವಿಡಿಯೋವೆಂದು ಭಾವಿಸಿ ವ್ಯಾಪಕವಾಗಿ ಹಂಚಿಕೊಳ್ಳುವುದರ ಜೊತೆಗೆ, ತಪ್ಪು ಸಂದೇಶಗಳನ್ನು ಕೂಡ ಸಾರುತ್ತಿದ್ದಾರೆ. ಇನ್ನು ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಸಾಕಷ್ಟು ಮಂದಿ ಕೋಮುದ್ವೇಷವನ್ನು ಕೂಡ ಹೊರ ಹಾಕುತ್ತಿದ್ದಾರೆ. ಹಾಗಿದ್ದರೆ ಈ ವಿಡಿಯೋದಲ್ಲಿನ ವಾಸ್ತಾವ ಏನು ಎಂಬುದನ್ನು ಈ ಅಂಕಣದಲ್ಲಿ ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌  

ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಹುಡುಕಾಟ ನಡೆಸಿದಾಗ, ಬಾಂಗ್ಲಾದೇಶದ ಇದೇ ರೀತಿಯ ಹಲವು ವಿಡಿಯೋಗಳು ಕಂಡು ಬಂದಿದ್ದು, ಕೆಲವೊಂದು ವೈರಲ್‌ ಪೋಸ್ಟ್‌ನ ಹೇಳಿಕೆಯ ರೀತಿಯಲ್ಲೇ ವಿವಿಧ ಬರಹಗಳು ಕಾಣಿಸಿಕೊಂಡಿದೆ. ಇನ್ನು ಕೆಲವೊಂದು ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ನಾವು ‘V’ ಎಂಬ ಕೆಂಪು ಮತ್ತು ಹಳದಿ ಬಣ್ಣದ ಲೋಗೋವೊಂದನ್ನು ಕಂಡುಕೊಂಡಿದ್ದು ಇದನ್ನೇ ಕೀ ಫ್ರೇಮ್‌ ಆಗಿ ಬಳಸಿಕೊಂಡು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟ ನಡೆಸಿದ್ದೇವು.

ಈ ವೇಳೆಯಲ್ಲಿ Valvo 24 ಎಂಬ ಫೇಸ್‌ಬುಕ್‌ ಪೇಜ್‌ ಒಂದರ ಕಾರ್ಟೂನ್‌ ಶೋ ಎಂಬ ವಿಡಿಯೋವೊಂದು ಕಂಡು ಬಂದಿದೆ. ಈ ವಿಡಿಯೋದಲ್ಲಿ ವೈರಲ್‌ ವಿಡಿಯೋದಲ್ಲಿದ ಯವಕ ಯುವತಿ ಕಂಡು ಬಂದಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ Valvo 24 ಅನ್ನು ಗೂಗಲ್‌ನಲ್ಲಿ ಹುಡುಕಿದಾಗ ಇದೇ ಹೆಸರಿನ ಯೂಟ್ಯುಬ್‌ ಚಾನಲ್‌ ಕೂಡ ಇರುವುದು ಪತ್ತೆಯಾಗಿದೆ.

ಇನ್ನು ಈ ಚಾನಲ್‌ನಲ್ಲಿನ ವಿಡಿಯೋಗಳನ್ನು ಕೂಲಂಕುಶವಾಗಿ ಪರಿಶೀಲನೆ ನಡೆಸಿದಾಗ ಇದೊಂದು ಕಿರುಚಿತ್ರ ಅಥವಾ ರೀಲ್ಸ್‌ ನಂತಹ ವಿಡಿಯೋಗಳನ್ನು ಚಿತ್ರೀಕರಿಸುವ ತಂಡ ಎಂಬುದು ಪತ್ತೆಯಾಗಿದೆ. ಇನ್ನು ಈ ತಂಡವೂ ಕೂಡ ತಮ್ಮ ವಿಡಿಯೋಗೂ ಮುನ್ನ ಡಿಸ್ಕ್ಲೈಮರ್‌ ಅನ್ನು ಪ್ರಕಟಿಸುತ್ತಿದ್ದು, ಅದರಲ್ಲಿ ಈ ವಿಡಿಯೋಗಳು ಕಾಲ್ಪನಿಕ ಮತ್ತು ಮನೋರಂಜನೆಗಾಗಿ ಮಾಡಲಾಗಿದೆ ಎಂಬುದನ್ನು ಕೂಡ ಉಲ್ಲೇಖ ಮಾಡಿದೆ.

ಇನ್ನು ವೈರಲ್‌ ಆಗಿರುವ ಯುವತಿ ಮತ್ತು ಕಂಡಕ್ಟರ್‌ ನಡುವಿನ ಬುರ್ಖಾ ಜಗಳವು ಪೂರ್ವ ನಿಯೋಜಿತ ವಿಡಿಯೋವಾಗಿದ್ದು, ಈ ವಿಡಿಯೋ ಚಿತ್ರೀಕರಣಕ್ಕು ಮುನ್ನ ಅಂದರೆ 19 ಮಾರ್ಚ್‌ 2024 ರಂದು ವೈರಲ್‌ ವಿಡಿಯೋದಲ್ಲಿ ಕಾಣಿಸಿಕೊಂಡ ನಟ-ನಟಿ ಇಬ್ಬರೂ ಫೇಸ್‌ಬುಕ್‌ ಲೈವ್‌ನಲ್ಲಿ ಕಾಣಿಸಿಕೊಂಡಿದ್ದು ತಾವು ಯಾವ ರೀತಿಯಲ್ಲಿ ತಮ್ಮ ವಿಡಿಯೋವನ್ನು ಚಿತ್ರೀಕರಿಸಲಿದ್ದೇವೆ ಎಂಬುದನ್ನು ಚರ್ಚಿಸಿದ್ದಾರೆ

ಒಟ್ಟಾರೆಯಾಗಿ ಈ ಎಲ್ಲಾ ಮಾಹಿತಿಗಳ ಆಧಾರದಲ್ಲಿ ಇದೊಂದು ಪೂರ್ವ ನಿಯೋಜಿತ ವಿಡಿಯೋ ಎಂಬುದು ದೃಢಪಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋ ಸಂಪೂರ್ಣವಾಗಿ ಸುಳ್ಳಿನಿಂದ ಆವೃತವಾಗಿದೆ ಎಂಬುದು ದೃಢ ಪಟ್ಟಿದೆ.


ಇದನ್ನೂ ಓದಿ : ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್‌ ಅಕ್ಕಿ ಬೆರೆಸಲಾಗಿದೆ ಎಂಬುದು ಸುಳ್ಳು


ಈ ವಿಡಿಯೋ ನೋಡಿ : ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್‌ ಅಕ್ಕಿ ಬೆರೆಸಲಾಗಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *