Fact Check | ವಾಟ್ಸ್‌ಆಪ್‌ನಲ್ಲಿ ಕಳುಹಿಸುವ ಗುಡ್ ಮಾರ್ನಿಂಗ್ ಸಂದೇಶಗಳ ಮೇಲೆ 18 % GST ಎಂಬುದು ಸುಳ್ಳು
“ವಾಟ್ಸ್‌ಆಪ್‌ನಲ್ಲಿ ರವಾನಿಸುವ ಗುಡ್ ಮಾರ್ನಿಂಗ್ ( ಶುಭೋದಯ ) ಸಂದೇಶಗಳ ಮೇಲೆ ಕೇಂದ್ರ ಸರ್ಕಾರ 18% GST ವಿಧಿಸಲು ಮುಂದಾಗಿದೆ. ಈ ಕುರಿತು ಪ್ರಖ್ಯಾತ ABP ನ್ಯೂಸ್ ಚಾನಲ್ ವರದಿ ಮಾಡಿದೆ” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಸಾಕಷ್ಟು ಮಂದಿ ಇದನ್ನು ನಿಜವೆಂದು ನಂಬಿ ತಮ್ಮ ವೈಯಕ್ತಿಕ ಖಾತೆಗಳಲ್ಲೂ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಈ ಸುದ್ದಿ ಎಬಿಪಿ ಸುದ್ದಿ ಸಂಸ್ಥೆಯಲ್ಲಿ ಬಂದಿರುವುದರಿಂದ ಬಹುತೇಕರು ಇದು ನಿಜವಿರಬಹುದು ಎಂದು ನಂಬಿಕೊಂಡಿದ್ದಾರೆ. ವಿಪರ್ಯಾಸವೆಂದರೆ ಇದೇ ರೀತಿಯ ಸುಳ್ಳು ಸುದ್ದಿಯನ್ನು…