Fact Check: ಪ್ರಧಾನಿ ಮೋದಿಯವರು ಗಣೇಶನ ವಿಗ್ರಹವನ್ನು ತೆಗೆದುಕೊಳ್ಳಲು ನಿರಾಕರಿಸಿಲ್ಲ

Narendra Modi

ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ವಾರಗಳು ಬಾಕಿ ಇರುವುದರಿಂದ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮ ವಿರೋಧಿ ನಾಯಕರ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಹಿಂದು ವಿರೋಧಿ ಎಂದು ಬಿಂಬಿಸಲು ನಾಯಕರ ಹಳೆಯ ವಿಡಿಯೋಗಳನ್ನು ಬಳಸಿ ತಪ್ಪಾಗಿ ಪ್ರತಿಪಾದಿಸಲಾಗುತ್ತಿದೆ.

ಅಂತೆಯೇ ಈಗ, “ನರೇಂದ್ರ ಮೋದಿಯವರು ಕಾರ್ಯಕ್ರಮವೊಂದರಲ್ಲಿ ಗಣೇಶನ ಮೂರ್ತಿಯನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಇದೇ ಕೆಲಸವನ್ನು ರಾಹುಲ್ ಗಾಂಧಿಯವರು ಮಾಡಿದ್ದರೆ ಬಿಜೆಪಿ ಮತ್ತು ಅವರ ಬೆಂಬಲಿತ ಮಾಧ್ಯಮಗಳು ಹೇಗೆ ವರ್ತಿಸುತ್ತಿದ್ದವು ಎಂದು ಊಹಿಸಿ.” ಎಂಬ ಸಂದೇಶದ ರೀಲ್ಸ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅವುಗಳನ್ನು ನೀವು ಇಲ್ಲಿ,ಮತ್ತು ಇಲ್ಲಿ ನೋಡಬಹುದು. ಅದರಲ್ಲಿ ನರೇಂದ್ರ ಮೊದಿಯವರು  ಕಾರ್ಯಕರ್ತರೊಬ್ಬರು ನೀಡಲು ಬಂದ ಗಣೇಶನ ವಿಗ್ರಹವನ್ನು ನಿರಾಕರಿಸಿದ್ದಾರೆ. ಈ ಆರೋಪ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್: ಈ ವೀಡಿಯೋ 03 ಮೇ 2023 ರಂದು ಕರ್ನಾಟಕ ವಿಧಾನಸಭೆ ಚುನಾವಣೆಯ ಪ್ರಚಾರದ ಸಮಯದಲ್ಲಿ ಪ್ರಧಾನಿ ಮೋದಿಯವರು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡ ಸಂದರ್ಭದ್ದಾಗಿದೆ. ಈ ಸಭೆಯ ಮೂಲ ವೀಡಿಯೊವನ್ನು 02:05 ರಿಂದ 02:16 ರ ಸಮಯದ ನಡುವೆ ಕಟ್ ಮಾಡಿ ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಈ ಸಭೆಯ ಮೂಲ ವೀಡಿಯೊ ಬಿಜೆಪಿ ತನ್ನ ಅಧಿಕೃತ ಯೂಟೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದು, ದೀರ್ಘ ಆವೃತ್ತಿಯಲ್ಲಿ, ಪ್ರಧಾನಿ ಮೋದಿ ತನಗೆ ನೀಡಿದ ಗಣೇಶನ ವಿಗ್ರಹವನ್ನು ಸ್ವೀಕರಿಸುವುದನ್ನು ನಾವು ಸ್ಪಷ್ಟವಾಗಿ ನೋಡಬಹುದು. ಆದ್ದರಿಂದ ನರೇಂದ್ರ ಮೋದಿಯವರು ಕಾರ್ಯಕ್ರಮವೊಂದರಲ್ಲಿ ಗಣೇಶನ ಮೂರ್ತಿಯನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ ಎಂಬುದು ಸುಳ್ಳು.


ಇದನ್ನು ಓದಿ: Fact Check: ಪಾಕಿಸ್ತಾನದಲ್ಲಿ ಹಿಂದುಗಳ ಜನಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ ಎಂಬುದು ಸುಳ್ಳು


ವಿಡಿಯೋ ನೋಡಿ: ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್‌ ಅಕ್ಕಿ ಬೆರೆಸಲಾಗಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *