“ಸೂಪರ್ ಮಾರ್ಕೇಟ್‌ಗಳಲ್ಲಿ ಮಾಂಸ ಖರೀದಿಸುವ ಮುನ್ನ ಎಚ್ಚರ.. ಈ ಪೋಟೋ ನೋಡಿ ಸೂಪರ್ ಮಾರ್ಕೇಟ್‌ವೊಂದರಲ್ಲಿ ಮನುಷ್ಯರ ಕೈಗಳ ಮಾಂಸವನ್ನು ಮಾರಲಾಗುತ್ತಿದೆ” ಎಂಬ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು ಇದನ್ನು ಸಾಮಾಜಿಕ ಜಾಲತಾಣದ ಬಳಕೆದಾರರು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ ಸಾಕಷ್ಟು ಮಂದಿ ಇದನ್ನು ನಿಜವೆಂದು ನಂಬಿದ್ದಾರೆ.
I’d rather eat python. pic.twitter.com/a6PVqpayLC
— Mrs. S. (@hshLauraJ) March 26, 2024
ಕೆಲವರು ಈ ಕುರಿತು ವಿವಿಧ ಬರಹಗಳೊಂದಿಗೆ ಪೋಸ್ಟ್‌ಗಳನ್ನು ಮಾಡುತ್ತಿದ್ದು, ಸೂಪರ್ ಮಾರ್ಕೇಟ್‌ನಲ್ಲಿ ಸಿಗುವ ಯಾವುದೇ ಮಾಂಸವನ್ನು ಯಾರು ಕೂರ ಖರೀದಿಸಬೇಡಿ ಎಂದು ಕೂಡ ಹಲವು ಮಂದಿ ಬರೆದುಕೊಳ್ಳುತ್ತಿದ್ದಾರೆ. ಹಾಗಿದ್ದರೆ ವೈರಲ್ ಆಗುತ್ತಿರುವ ಪೋಸ್ಟ್‌ಗಳು ನಿಜವೆ ಎಂಬುವುದನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ
High five y’all 🙌🙌🙌
🤣🤦♀️🤷♀️🤭 3d lab meat🤦♀️🤦♀️🤦♀️☠️☠️ pic.twitter.com/5eEpQFREj5
— 🌟Starann🌟 (@StarannThe) March 28, 2024
ಫ್ಯಾಕ್ಟ್‌ಚೆಕ್
ಈ ಕುರಿತು ಸತ್ಯ ಶೋಧನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮೊದಲು ವೈರಲ್ ಆಗಗುತ್ತಿರುವ ಫೋಟೋಗಳನ್ನು ಪರಿಶೀಲನೆ ನಡೆಸಿತು. ಈ ವೇಳೆ ಫೋಟೋಗಳಲ್ಲಿರುವ ಮಾನವ ಕೈಗಳ ಮಾಂಸ ಎನ್ನಲಾದ ಚಿತ್ರದಲ್ಲಿರುವ ಕೆಲವು ಕೈಗಳಲ್ಲಿ ಕೇವಲ ನಾಲ್ಲು ಬೆರಳುಗಳು ಇರುವುದು ಕಂಡು ಬಂದಿದೆ. ವಿವಿಧ ಆಯಾಮಗಳಲ್ಲಿ ಕೂಡ ಫೋಟೋವನ್ನು ಪರಿಶೀಲಿಸಿದಾಗಲೂ ಕೇವಲ ನಾಲ್ಕು ಬೆರಳುಗಳು ಮಾತ್ರ ಕಂಡು ಬಂದಿವೆ.
ಇನ್ನು ಕೆಲವು ಮಾಹಿತಿಗಳನ್ನು ಪಡೆಯಲು ಪರಿಶೀಲಿಸಿದಾಗ ಅಲ್ಲಿದ ಪ್ರೈಸ್ ಟ್ಯಾಗ್‌ಗಳು ಕೂಡ ಅಸ್ಪಷ್ಟವಾಗಿರುವುದು ಕಂಡು ಬಂದಿದೆ. ಸಾಧಾರಣವಾಗಿ ಯಾವುದೆ ಸೂಪರ್ ಮಾರ್ಕೇಟ್‌ಗಳಲ್ಲಿ ಪ್ರೈಸ್ ಟ್ಯಾಗ್‌ಗಳು ಅಸ್ಪಷ್ಟವಾಗಿರುವುದು ಕಂಡು ಬರುವುದಿಲ್ಲ. ಆದರೆ ಈ ಫೋಟೋಗಳಲ್ಲಿ ಬಹುತೇಕ ಪ್ರೈಸ್ ಟ್ಯಾಗ್‌ಗಳು ಅಸ್ಪಷ್ಟವಾಗಿ ಕಂಡು ಬಂದಿರುವುದು ಕೂಡ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಇನ್ನು ಈ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು AI ನಿಂದ ನಿರ್ಮಿತವಾದ ಚಿತ್ರವೇ ಎಂಬ ಅನುಮಾನವು ಕೂಡ ಹುಟ್ಟಿಕೊಂಡಿತು. ಈ ಹಿನ್ನೆಲೆಯಲ್ಲಿ ‘Is it AI‘ ಎಂಬ AI ಚಿತ್ರಗಳನ್ನು ಪತ್ತೆ ಹಚ್ಚುವ ವೆಬ್‌ಸೈಟ್‌ನಲ್ಲಿ ವೈರಲ್ ಫೋಟೋವನ್ನು ಅಪ್‌ಲೋಡ್ ಮಾಡಿ ಪರಿಶೀಲಿಸಲಾಯಿತು. ಈ ವೇಳೆ ಈ ವೆಬ್‌ಸೈಟ್‌ನಲ್ಲಿ ವೈರಲ್ ಆಗಿರುವ ಫೋಟೋ ಶೇ. 72.66 ರಷ್ಟು AI ನಿರ್ಮಿತ ಚಿತ್ರ ಎಂಬುದನ್ನು ಸಾಬೀತು ಪಡಿಸಿದೆ..
ಇನನ್ನು ಈ ವೈರಲ್ ಚಿತ್ರದ ಮೂಲ ಯಾವುದು ಎಂಬುದನ್ನು ಪರಿಶೀಲಿಸಲು ಈ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಲಾಯಯಿತು ಆಗ ಈ ಫೋಟೋವಿನ ಮೂಲ ಚಿತ್ರವನ್ನು ಇದೇ ಮಾರ್ಚ್ 20 ರಂದು ಫೇಸ್‌ಬುಕ್‌ನಲ್ಲಿ Nik Art ಎಂಬ ಖಾತೆಯಿಂದ ಹಂಚಿಕೊಂಡಿರುವುದು ಪತ್ತೆಯಾಗಿದೆ.
ಈ Nik Art ಫೇಸ್‌ಬುಕ್ ಪೇಜ್ ಅನ್ನು ಪರಿಶೀಲನೆ ನಡೆಸಿದಾಗ ಇದರ ಡಿಸ್‌ಕ್ರಿಪ್ಷನ್‌ನಲ್ಲಿ ವಿಶ್ಯುವಕ್ ಆರ್ಟ್ ಎಂದು ಉಲ್ಲೇಖಿಸಿರುವುದನ್ನು ಕೂಡ ಕಾಣಬಹುದಾಗಿದೆ. ಇನ್ನು ಈ ಫೇಸ್ ಬುಕ್ ಪೇಜ್‌ನಲ್ಲಿ ಸಾಕಷ್ಟು ಫೋಟೋಗಳು ಕಂಡು ಬಂದಿದ್ದು ಅವುಗಳಲ್ಲಿ ಬಹುಪಾಲು AI ಸ್ಥಾಪಿತ ಚಿತ್ರಗಳಾಗಿವೆ. ಅದೇ ರೀತಿಯಲ್ಲಿ ಈ ಮಾನವ ಕೈಗಳ ಮಾಂಸದ ಸೂಪರ್ ಮಾರ್ಕೇಟ್ ಚಿತ್ರವನ್ನು ಕೂಡ ಈ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರವ ಮಾನವ ಕೈಗಳ ಮಾಂಸ ಸೂಪರ್ ಮಾರ್ಕೇಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬುದು ಸುಳ್ಳಾಗಿದೆ. ಮತ್ತುಇಂತಹ ಫೋಟೋಗಳನ್ನು ನಂಬುವ ಅಥವಾ ಶೇರ್ ಮಾಡುವ ಮುನ್ನ ಎಚ್ಚರ ವಹಿಸಿ
ಇದನ್ನೂ ಓದಿ : ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಬೆರೆಸಲಾಗಿದೆ ಎಂಬುದು ಸುಳ್ಳು
ಈ ವಿಡಿಯೋ ನೋಡಿ : ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಬೆರೆಸಲಾಗಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.