Fact Check: ಪಾಕಿಸ್ತಾನದಲ್ಲಿ ಹಿಂದುಗಳ ಜನಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ ಎಂಬುದು ಸುಳ್ಳು

“CAA ಯಾಕೆ ಬೇಕು? ಭಾರತದದಲ್ಲಿ ಮುಸ್ಲಿಂ ಜನಸಂಖ್ಯೆ 1947: 3 ಕೋಟಿ, 2024: 21 ಕೋಟಿ. ಪಾಕಿಸ್ತಾನದಲ್ಲಿ ಹಿಂದೂ ಜನಸಂಖ್ಯೆ 1947:20.5%, 2024:1.9%. ಭಾರತದಲ್ಲಿ 70 ವರ್ಷದಲ್ಲಿ ಮಸ್ಲಿಂ ಜನಸಂಕ್ಯೆ 7 ಪಟ್ಟು ಹೆಚ್ಚಳ ಕಂಡರೆ. ಪಾಕಿಸ್ತಾನದಲ್ಲಿ ಹಿಂದುಗಳ ಜನಸಂಖ್ಯೆ 20% ನಿಂದ 2%ಗೆ ಇಳಿಕೆ ಕಂಡಿದೆ.” ಎಂಬ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಪ್ರತಿಪಾದನೆ ನಿಜವೇ ತಿಳಿಯೋಣ ಬನ್ನಿ.

ಫ್ಯಾಕ್ಟ್‌ಚೆಕ್: ಸ್ವಾತಂತ್ರ್ಯಕ್ಕೂ ಮುಂಚೆ ಅಂದರೆ 1941ರ ಜನಗಣತಿ ಪ್ರಕಾರ ಪಾಕಿಸ್ತಾನದಲ್ಲಿ ಹೆಚ್ಚಿನ ಹಿಂದೂಗಳು ಇದ್ದದ್ದು ನಿಜ. ಆದರೆ 1947ರಲ್ಲಿ ವಿಭಜನೆಯ ನಂತರ 46 ಲಕ್ಷ ಹಿಂದೂ ಮತ್ತು ಸಿಖ್‌ರು ಭಾರತಕ್ಕೆ ಬಂದರು. 1951ರ ಜನಗಣತಿಯಂತೆ ಪಾಕಿಸ್ತಾನದ ಹಿಂದೂಗಳ ಸಂಖ್ಯೆ ಕೇವಲ 1.6% ಇತ್ತು. 2017ರ ಜನಗಣತಿಯ ಪ್ರಕಾರ 2.14% ಅಂದರೆ 2 ಸುಮಾರು 4.4 ಮಿಲಿಯನ್ ಜನರು ಇದ್ದಾರೆ.

ಪಾಕಿಸ್ತಾನದಲ್ಲಿ ಹಿಂದು ಧರ್ಮವು ದೇಶದ ಎರಡನೇ ಅತಿದೊಡ್ಡ ಧರ್ಮವಾಗಿದ್ದು, ಹಿಂದುಗಳ ಜನಸಂಖ್ಯೆ ಭಾರತಕ್ಕಿಂತ ಹೆಚ್ಚು ಗಣನೀಯವಾಗಿ ಹೆಚ್ಚಳವಾಗುತ್ತಿದೆ ಎಂದು ಬಿಸಿನೆಸ್‌ ಸ್ಟಾಂಡರ್ಡ್ಸ್ ವರದಿ ಮಾಡಿದೆ. ಆದರೂ ಸಹ ಬಹುಸಂಖ್ಯಾತ ಮುಸ್ಲಿಂ ಸಮುದಾಯ ಮತ್ತು ಅಲ್ಪಸಂಖ್ಯಾತ ಹಿಂದು ಸಮುದಾಯಗಳ ನಡುವೆ ಸಂಘರ್ಷಗಳು ನಿರಂತರವಾಗಿ ನಡೆಯುತ್ತಿದೆ. ಇಲ್ಲಿನ ಸಿಂಧ್ ಪ್ರಾಂತ್ಯದಲ್ಲಿ ಹೆಚ್ಚಿರುವ ಹಿಂದುಗಳನ್ನು(ಸಿಂಧ್: 8.7% (ಉಮರ್‌ಕೋಟ್ ಜಿಲ್ಲೆಯಲ್ಲಿ ಅತಿ ಹೆಚ್ಚು 52.2% ಶೇಕಡಾವಾರು ಹಿಂದೂ ನಿವಾಸಿಗಳಿದ್ದಾರೆ ) ಇಸ್ಲಾಂಗೆ ಮತಾಂತರ ಮಾಡಿದ ಪ್ರಕರಣಗಳು ಸಹ ನಡೆಯುತ್ತಿರುತ್ತವೆ.

ವಿಭಜನೆಯ ಮೊದಲು, ಹಿಂದೂಗಳು ಪಶ್ಚಿಮ ಪಾಕಿಸ್ತಾನದಲ್ಲಿ (ಈಗ ಪಾಕಿಸ್ತಾನ) 14.6% ಮತ್ತು ಪೂರ್ವ ಪಾಕಿಸ್ತಾನದಲ್ಲಿ (ಈಗ ಬಾಂಗ್ಲಾದೇಶ) 28% ರಷ್ಟಿದ್ದರು. ಆದಾಗ್ಯೂ, ಸ್ವಾತಂತ್ರ್ಯದ ನಂತರ, ಅನೇಕ ಹಿಂದೂಗಳು ಮತ್ತು ಸಿಖ್ಖರು ನಿರಾಶ್ರಿತರಾಗಿ ಭಾರತಕ್ಕೆ ವಲಸೆ ಬಂದರು. ಸ್ವಾತಂತ್ರ್ಯದ ನಂತರದ ಮೊದಲ ಜನಗಣತಿಯಲ್ಲಿ (1951), ಹಿಂದೂಗಳು ಪಶ್ಚಿಮ ಪಾಕಿಸ್ತಾನದ ಒಟ್ಟು ಜನಸಂಖ್ಯೆಯ 1.6% ಮತ್ತು ಪೂರ್ವ ಪಾಕಿಸ್ತಾನದ 22% ರಷ್ಟಿದ್ದರು. 

ಪ್ರಧಾನವಾಗಿ ಮುಸ್ಲಿಂ ರಾಷ್ಟ್ರವಾಗಿದ್ದರೂ, ಪಾಕಿಸ್ತಾನದ ಸಿಂಧ್ ಪ್ರಾಂತ್ಯವು ಗಮನಾರ್ಹವಾದ ಹಿಂದೂ ಪರಂಪರೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಆದಾಗ್ಯೂ, ಹಿಂದೂಗಳು ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ತಾರತಮ್ಯವು ಕಳವಳಕಾರಿಯಾಗಿ ಉಳಿದಿದೆ. ಪಾಕಿಸ್ತಾನದ ಸಂವಿಧಾನವು ಸಮಾನ ಹಕ್ಕುಗಳನ್ನು ಒದಗಿಸುತ್ತದೆ, ಆದರೆ ಇಸ್ಲಾಂ ರಾಜ್ಯ ಧರ್ಮವಾಗಿ ಉಳಿದಿದೆ, ಹಿಂದೂಗಳು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರಿಗಿಂತ ಮುಸ್ಲಿಮರಿಗೆ ಹೆಚ್ಚಿನ ಸವಲತ್ತುಗಳನ್ನು ನೀಡುತ್ತದೆ.

ಆದರೆ ನಮ್ಮ ಭಾರತದ ಸಂವಿಧಾನದ ಸುಂದರತೆ ಎಂದರೆ ಅದು ಯಾವುದೇ ಧರ್ಮ ಅಥವಾ ಭಾಷೆಯನ್ನು ರಾಷ್ಟ್ರೀಯ ಧರ್ಮ ಮತ್ತು ಭಾಷೆ ಎಂದು ಅಂಗೀಕರಿಸದೆ ಬಹುತ್ವಕ್ಕೆ ಅಥವಾ ವೈವಿದ್ಯತೆಗೆ ಮನ್ನಣೆ ನೀಡಿದೆ ಹಾಗಾಗಿ ಭಾರತದಲ್ಲಿ ಧಾರ್ಮಿಕ ಕಲಹಗಳು ಮತ್ತು ಭಾಷಾ ಕಲಹಗಳು ಗಣನೀಯವಾಗಿ ಕಡಿಮೆ ಇರಲು ಕಾರಣವಾಗಿದೆ. ಮತ್ತು ಎಲ್ಲಾ ಧರ್ಮದವರಿಗೂ ಸಮಾನ ಹಕ್ಕು ಮತ್ತು ರಕ್ಷಣೆಯನ್ನು ಒದಗಿಸಿರುವುದರಿಂದ ಭಾರತದ ಸಂವಿಧಾನ ಜಗತ್ತಿಗೆ ಮಾದರಿಯಾಗಿದೆ.

ಆದ್ದರಿಂದ ಪಾಕಿಸ್ತಾನದಲ್ಲಿ ಹಿಂದುಗಳ ಜನಸಂಖ್ಯೆ 20% ನಿಂದ 2%ಗೆ ಇಳಿಕೆ ಕಂಡಿದೆ ಎಂಬುದು ತಪ್ಪು ಪ್ರತಿಪಾದನೆಯಾಗಿದೆ.


ಇದನ್ನು ಓದಿ: Fact Check: ಅರವಿಂದ್ ಕೇಜ್ರಿವಾಲ್ ಕ್ರಿಪ್ಟೋ ಕ್ರಿಶ್ಚಿಯನ್ ಎಂಬುದು ಸಂಪೂರ್ಣ ಸುಳ್ಳು


ವಿಡಿಯೋ ನೋಡಿ: ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್‌ ಅಕ್ಕಿ ಬೆರೆಸಲಾಗಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *