
Fact Check | ಲಂಡನ್ ರೈಲ್ವೆ ಪ್ರವೇಶದ್ವಾರದಲ್ಲಿ ಭಾರತೀಯ ವಲಸಿಗ ಸಿಕ್ಕಿಬಿದ್ದಿದ್ದಾನೆ ಎಂಬುದು ಸುಳ್ಳು
ಭಾರತೀಯ ವಲಸಿಗನೊಬ್ಬ ಟಿಕೆಟ್ ಇಲ್ಲದೆ ಪ್ರಯಾಣಿಸಲು ಯತ್ನಿಸಿ ಲಂಡನ್ ರೈಲ್ವೆ ಪ್ರವೇಶದ್ವಾರದಲ್ಲಿ ಸಿಕ್ಕಿಬಿದ್ದಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ. ಫ್ಯಾಕ್ಟ್ ಚೆಕ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಫೋಟೋದ ಕುರಿತು ನಿಜವನ್ನು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್ ಚೆಕ್ ತಂಡವು ಮುಂದಾಯ್ತು. ಇದಕ್ಕಾಗಿ ವೈರಲ್ ವಿಡಿಯೋದ ಕೀ ಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಾಟ ನಡೆಸಿದಾಗ, ವೈರಲ್ ವಿಡಿಯೋದ ಸ್ಕ್ರೀನ್‌ಶಾಟ್ ಚಿತ್ರವನ್ನೊಳಗೊಂಡ ಸ್ಪ್ಯಾನಿಷ್ ಮಾಧ್ಯಮ ವರದಿಯೊಂದು ಲಭ್ಯವಾಗಿದೆ. ಈವರದಿಯ ಪ್ರಕಾರ…