ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಲಂಡನ್‌ನ ಮೇಯರ್ ಆಗಿ ಸಾದಿಕ್ ಖಾನ್ (ಇಲ್ಲಿ ಮತ್ತು ಇಲ್ಲಿ) ಜಯಗಳಿಸುತ್ತಿದ್ದಂತೆ, ವಿಜಯಯಾತ್ರೆ ನಡೆಸಿದ್ದಾರೆ ಎಂದು ಹೇಳಿಕೊಳ್ಳುವ ವೀಡಿಯೊವನ್ನು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಲೇಖನದ ಮೂಲಕ ನಾವು ಈ ಪ್ರತಿಪಾದನೆ ವಾಸ್ತವವಾಗಿ ನಿಜವೇ ಎಂದು ಪರಿಶೀಲಿಸೋಣ.
🚨 London Has Fallen ⚠️ pic.twitter.com/Y8dt3swFzc
— Ishaan Chaudhary ॐ 🚩 (@im_ishaan_) May 7, 2024
ಫ್ಯಾಕ್ಟ್‌ಚೆಕ್: ವೈರಲ್ ಪ್ರತಿಪಾದನೆಯ ನಿಖರತೆಯನ್ನು ಪರಿಶೀಲಿಸಲು ನಾವು ವೈರಲ್ ವೀಡಿಯೊದ ಕೆಲವು ಕೀಫ್ರೇಮ್‌ಗಳಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ. ಸೆಪ್ಟೆಂಬರ್ 2021 ರಂದು ಅದೇ ವೀಡಿಯೊವನ್ನು ಒಳಗೊಂಡಿರುವ Facebook ಪೋಸ್ಟ್ (ಆರ್ಕೈವ್ ಲಿಂಕ್) ಒಂದು ಲಭ್ಯವಾಗಿದ್ದು. ಇದನ್ನು ‘ಅಶುರಾ ಮೆರವಣಿಗೆ 2021 ಲಂಡನ್’ ನ ದೃಶ್ಯಗಳು ಎಂದು ವಿವರಿಸಲಾಗಿದೆ.
ನಾವು ನಂತರ 2021 ರಿಂದ ಈ ಮೆರವಣಿಗೆಯ ಹೆಚ್ಚಿನ ವೀಡಿಯೊಗಳನ್ನು ಹುಡುಕಿದಾಗ, 2021 ರಿಂದ ಅನೇಕ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು (ಇಲ್ಲಿ ಮತ್ತು ಇಲ್ಲಿ) ಲಭ್ಯವಾಗಿದ್ದು, ಇದು ‘ಅಶುರಾ ಮೆರವಣಿಗೆ 2021 ರ ದೃಶ್ಯಗಳನ್ನು ಒಳಗೊಂಡಿದೆ ಎಂದು ತಿಳಿದು ಬಂದಿದೆ. ಅಶುರಾ ಇಸ್ಲಾಮಿಕ್ ಪವಿತ್ರ ದಿನವನ್ನು ಮುಸ್ಲಿಂ ಕ್ಯಾಲೆಂಡರ್‌ನ ಮೊದಲ ತಿಂಗಳು, ಅಂದರೆ ಮೊಹರಂನ 10 ನೇ ದಿನದಂದು ಆಚರಿಸಲಾಗುತ್ತದೆ.
ವೈರಲ್ ವೀಡಿಯೊ ಮತ್ತು ಈ ಮೆರವಣಿಗೆಯ ವೀಡಿಯೊಗಳಲ್ಲಿನ ಸಾಮ್ಯತೆಗಳನ್ನು ಕೆಳಗಿನ ಕೊಲಾಜ್‌ನಲ್ಲಿ ನೀವು ನೋಡಬಹುದು. ವಿಡಿಯೋದಲ್ಲಿರುವವರು ಒಂದೇ ರೀತಿಯ ಲೋಗೋಗಳೊಂದಿಗೆ ಒಂದೇ ರೀತಿಯ ಫಲಕಗಳನ್ನು ಹಿಡಿದಿದ್ದಾರೆ ಮತ್ತು ಆಕ್ಸ್‌ಫರ್ಡ್ ಸ್ಟ್ರೀಟ್ ಬ್ಯಾನರ್‌ಗಳನ್ನು ಮೆರವಣಿಗೆಯ ವೀಡಿಯೊಗಳಲ್ಲಿ ಕಾಣಬಹುದು.
ಲಂಡನ್ ಮೇಯರ್ ಚುನಾವಣೆಯಲ್ಲಿ ಸಾದಿಕ್ ಖಾನ್ ಗೆಲುವನ್ನು ಮುಸ್ಲಿಮರು ಸಂಭ್ರಮಿಸುತ್ತಿರುವ ವಿಡಿಯೋ ಎಂದು ಹಳೆಯ ವಿಡಿಯೋವನ್ನು ಶೇರ್ ಮಾಡುತ್ತಿರುವುದು ಇದರಿಂದ ಸ್ಪಷ್ಟವಾಗಿದೆ. ಹಮಾಸ್-ಇಸ್ರೇಲ್ ಸಂಘರ್ಷಕ್ಕೆ ಸಂಬಂಧಿಸಿ 2023ರಲ್ಲಿ ಇದೇ ವಿಡಿಯೋ ವೈರಲ್ ಆಗಿತ್ತು. ಮಿಸ್ಬರ್ ಮತ್ತು ಬೂಮ್‌ಲೈವ್‌ನಂತಹ ಸತ್ಯ-ಪರಿಶೀಲನಾ ಸಂಸ್ಥೆಗಳು ಆಗ ಸುಳ್ಳು ಪ್ರತಿಪಾದನೆಗಳನ್ನು ನಿರಾಕರಿಸಿದವು.
ಒಟ್ಟಾರೆಯಾಗಿ ಹೇಳುವುದಾದರೆ, ಇತ್ತೀಚೆಗೆ ನಡೆದ ಲಂಡನ್ ಮೇಯರ್ ಚುನಾವಣೆಯಲ್ಲಿ ಸಾದಿಕ್ ಖಾನ್ ಅವರ ವಿಜಯವನ್ನು ಮುಸ್ಲಿಮರು ಆಚರಿಸುತ್ತಿರುವ ದೃಶ್ಯಗಳು ಎಂದು 2021 ರ ಹಳೆಯ ವೀಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿ: ಮುಸ್ಲಿಂ ವ್ಯಕ್ತಿಯೊಬ್ಬ ಕಲ್ಲಂಗಡಿಗೆ ರಾಸಾಯನಿಕ ಹಾಕಿ ಸಿಕ್ಕಿಬಿದ್ದಿದ್ದಾನೆ ಎಂದು ಹಂಚಿಕೊಳ್ಳುತ್ತಿರುವುದು ಜಾಗೃತಿ ವಿಡಿಯೋ
ವಿಡಿಯೋ ನೋಡಿ: ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ