“ಕೇಂದ್ರದ ಮಾಜಿ ಗೃಹ ಸಚಿವರಾದ ಹಾಗೂ ಭಾರತರತ್ನ ಪುರಸ್ಕೃತರಾದ ಎಲ್ ಕೆ ಅಡ್ವಾಣಿ ಅವರು ರಾಹುಲ್ ಗಾಂಧಿ ಅವರನ್ನು ಭಾರತದ ರಾಜಕೀಯ ಹೀರೋ ಎಂದು ಕರೆದಿದ್ದಾರೆ ಆ ಮೂಲಕ ರಾಹುಲ್ ಗಾಂಧಿಯವರ ನಾಯಕತ್ವವನ್ನು ಎಲ್ ಕೆ ಅಡ್ವಾಣಿ ಅವರು ಮೆಚ್ಚಿಕೊಂಡಿದ್ದಾರೆ” ಎಂದು ಸುದ್ದಿಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
राहुल गांधी भारतीय राजनीति का नायक है : लालकृष्ण आडवाणी.
( अवधभूमि डाट काम )
7. मई. 2024.देश की पूर्व गृहमंत्री भारतरत्न श्री लाल कृष्ण आडवाणी ने राहुल गांधी को लेकर एक बड़ा बयान दिया है। आडवाणी ने कहा है कि भले ही मैं भाजपा से हूँ लेकिन मैं आज भारत देश की समाज सेवक के रूप में… pic.twitter.com/XEcj7s2mar
— Vikas Bansal (@INCBANSAL) May 8, 2024
ಇದೇ ಬರಹದಲ್ಲಿ ಇನ್ನೂ ಮುಂದುವರೆದು “ಈ ಕುರಿತು 7 ಮೇ 2024 ರಂದು ಆವಾದ್‌ಭೂಮಿ ಎಂಬ ವೆಬ್ಸೈಟ್ ವರದಿಯನ್ನು ಮಾಡಿದೆ. ಅಡ್ವಾಣಿ ಅವರು ರಾಹುಲ್ ಗಾಂಧಿಯವರನ್ನು ಹಾಡಿ ಹೊಗಳಿರುವ ಕುರಿತು ಬರೆಯಲಾಗಿದೆ.” ಎಂದು ಈ ಹಿಂದಿ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಇದನ್ನು ಓದಿದ ಬಹುತೇಕರು ಇದು ನಿಜವಾಗಿಯೂ ಅಡ್ವಾಣಿ ಅವರೇ ಈ ಮಾತನ್ನು ಹೇಳಿದ್ದಾರೆ ಎಂದು ಭಾವಿಸಿದ್ದಾರೆ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಕೂಡ ಮಾಡುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ವರದಿಯ ಸತ್ಯಾಸತ್ಯತೆಯನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ
*Flash News*
*Rahul Gandhi is the hero of Indian politics: Lal Krishna Advani (LK Advani).*
*(https://t.co/mgz9yVqrZd)*
*7. May. 2024.*
*The country's former Home Minister Bharat Ratna Shri Lal Krishna Advani has given a big statement regarding Rahul Gandhi. @INCIndia pic.twitter.com/IHDu79SEBV— Arunachal Congress (@INCArunachal) May 9, 2024
ಫ್ಯಾಕ್ಟ್‌ಚೆಕ್
ವೈರಲ್ ವರದಿಯ ಸ್ಕ್ರೀನ್‌ಶಾಟ್ ಅನ್ನು ಕನ್ನಡ ಫ್ಯಾಕ್ಟ್‌ಚೆಕ್ ತಂಡದ ವಾಟ್ಸಪ್ ಸಂಖ್ಯೆಗೆ ಸಾರ್ವಜನಿಕರು ಕಳುಹಿಸಿ ಈ ಕುರಿತು ಪರಿಶೀಲನೆ ನಡೆಸುವಂತೆ ಕೇಳಿಕೊಂಡಿದ್ದರು. ಹೀಗಾಗಿ ವೈರಲ್ ಆಗುತ್ತಿರುವ ಪೋಸ್ಟ್ ನ ಕುರಿತು ಕೀ ವರ್ಡ್ಸ್‌ಗಳನ್ನು ಬಳಸಿ ಹುಡುಕಲಾಗಿತ್ತು. ಆದರೆ ಈ ಸಂಬಂಧ ಯಾವುದೇ ರೀತಿಯಾದಂತಹ ವರದಿಗಳು ಕಂಡುಬಂದಿಲ್ಲ. ಬಳಿಕ ವೈರಲ್ ವರದಿಯ ಸ್ಕ್ರೀನ್‌ಶಾಟ್ ಅನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಿದಾಗ ಇದೊಂದು ಸುಳ್ಳು ಸುದ್ದಿ ಎಂಬ ಕುರಿತು ಆಂಗ್ಲ ಭಾಷೆಯಲ್ಲಿ ಹಲವು ಫ್ಯಾಕ್ಟ್‌ಚೆಕ್ ವರದಿಗಳು ಕಂಡುಬಂದಿವೆ.
ಆದರೆ ಇದನ್ನು ಹೊರತುಪಡಿಸಿ ಹೆಚ್ಚಿನ ಮಾಹಿತಿಗಾಗಿ ಹುಡುಕಿದಾಗ ಅಡ್ವಾಣಿ ಅವರು ರಾಹುಲ್ ಗಾಂಧಿಯವರನ್ನು ಹೊಗಳಿರುವ ಕುರಿತು ಯಾವುದೇ ವರದಿಗಳು ಕಂಡುಬಂದಿಲ್ಲ. ಒಂದು ವೇಳೆ ಬಿಜೆಪಿಯ ಮಾಜಿ ಗೃಹ ಮಂತ್ರಿಗಳಾದ ಲಾಲ್ ಕೃಷ್ಣ ಅಡ್ವಾಣಿ ಅವರು ಈ ಮಾತನ್ನ ಹೇಳಿದ್ದು ನಿಜವೇ ಆದರೆ ರಾಷ್ಟ್ರೀಯ ಮಾಧ್ಯಮಗಳಿಂದ ಹಿಡಿದು ದೇಶದ ಹಲವು ಪ್ರತಿಷ್ಠಿತ ಸುದ್ದಿ ಸಂಸ್ಥೆಗಳು ವರದಿಯನ್ನು ಮಾಡಬೇಕಿತ್ತು. ಆದರೆ ಅಂತಹ ಯಾವುದೇ ವರದಿಗಳು ಕಂಡುಬಂದಿಲ್ಲ. ಹಾಗಾಗಿ ಈ ಸುದ್ದಿಯಲ್ಲಿ ನೈಜತೆ ಇಲ್ಲ ಎಂಬುದು ಸಾಬೀತಾಗಿದೆ.
ತದನಂತರ ವೈರಲ್ ಆದಂತಹ ವೆಬ್‌ಸೈಟ್ ಒಂದರ ವರದಿಯ ಕುರಿತು ಪರಿಶೀಲನೆ ನಡೆಸಲು ವೆಬ್‌ಸೈಟ್ ಡೊಮೈನ್ ಪರಿಶೀಲನಾ ತಾಣವಾದ ಹೂ ಇಸ್ ಎಂಬ ವೆಬ್‌ಸೈಟ್‌ಗಳ ಮಾಹಿತಿ ನೀಡುವ ತಾಣದಲ್ಲಿ ಹುಡುಕಿದಾಗ ಸುಳ್ಳು ವರದಿ ಮಾಡಿದ ಅವಧ್ ಭೂಮಿ ನೆದರ್ಲ್ಯಾಂಡ್‌ನಲ್ಲಿ ನೊಂದಣಿ ಮಾಡಿಸಿಕೊಂಡಿರುವುದು ತಿಳಿದುಬಂದಿದೆ. ಭಾರತೀಯ ಮೂಲವಲ್ಲದ ಈ ವೆಬ್ ತಾಣ ಸುಳ್ಳು ಸುದ್ದಿಯನ್ನು ಹರಡಿ ಗೊಂದಲವನ್ನು ಉಂಟುಮಾಡುವುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಮಾಜಿ ಗೃಹ ಸಚಿವ ಹಾಗೂ ಭಾರತರತ್ನ ಪುರಸ್ಕೃತ ಎಲ್ ಕೆ ಅಡ್ವಾಣಿ ಅವರು ವಿಪಕ್ಷ ನೇತರರಲ್ಲಿ ಒಬ್ಬರಾದ ರಾಹುಲ್ ಗಾಂಧಿಯವರನ್ನು ಭಾರತದ ರಾಜಕೀಯ ಹೀರೋ ಎಂದು ಕರೆದಿದ್ದಾರೆ ಎಂಬುದು ಸುಳ್ಳಾಗಿದೆ. ಹಾಗೂ ಇಂತಹ ಸುದ್ದಿಗಳನ್ನು ನಂಬುವ ಮೊದಲು ಎಚ್ಚರವಹಿಸಿ
ಇದನ್ನೂ ಓದಿ : Fact Check: ಮುಸ್ಲಿಂ ವ್ಯಕ್ತಿಯೊಬ್ಬ ಕಲ್ಲಂಗಡಿಗೆ ರಾಸಾಯನಿಕ ಹಾಕಿ ಸಿಕ್ಕಿಬಿದ್ದಿದ್ದಾನೆ ಎಂದು ಹಂಚಿಕೊಳ್ಳುತ್ತಿರುವುದು ಜಾಗೃತಿ ವಿಡಿಯೋ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ