Fact Check | ಶ್ರೀನಗರದಲ್ಲಿ ಉಗ್ರಗಾಮಿ ಬಂಧನ ಎಂದು ಬ್ರೆಜಿಲ್ ವಿಡಿಯೋ ಹಂಚಿಕೆ

“ಈ ವಿಡಿಯೋ ನೋಡಿ ಇದು ಭಾರತೀಯ ಸೇನೆ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಉಗ್ರನೊಬ್ಬನನ್ನು ಸೆರೆಹಿಡಿದ ಪರಿ. ಈ ಉಗ್ರ ಸೈನಿಕರ ಕೈಯಿಂದ ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ದೇಶದ ಸೈನಿಕರು ಇವನನ್ನು ಬೆಂಬಿಡದೆ ಹಿಂಬಾಲಿಸಿ ಸೆರೆ ಹಿಡಿದಿದ್ದಾರೆ. ಆ ಮೂಲಕ ದೇಶದಲ್ಲಿ ಆಗುತ್ತಿದ್ದ ಅನಾಹುತವನ್ನು ತಪ್ಪಿಸಿದ್ದಾರೆ.” ಎಂಬ ಬರಹದೊಂದಿಗೆ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತದೆ

ಉಗ್ರಗಾಮಿಯ ಬಂಧನವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ
ಉಗ್ರಗಾಮಿಯ ಬಂಧನವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ

ಇನ್ನೂ ಕೆಲವರು ಈ ವಿಡಿಯೋದಲ್ಲಿ “ಮೋದಿ ಸರ್ಕಾರದಿಂದಲೇ ಈ ಉಗ್ರನನ್ನ ಬಂಧಿಸಲಾಗಿದೆ ಇದರ ಸಂಪೂರ್ಣ ಶ್ರೇಯ ಮೋದಿಯವರಿಗೆ ಸಲ್ಲಬೇಕು” ಎಂದು ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ನಿಜಕ್ಕೂ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಮೋಟರ್ ಸೈಕಲ್ ನಲ್ಲಿ ತೆರಳುತ್ತಿದ್ದ ಉಗ್ರನನ್ನು ಸೈನಿಕರು ಸೆರೆ ಹಿಡಿದರೆ ಎಂಬುದನ್ನು ಈ ಅಂಕಣದಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ  ವಿಡಿಯೋದ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ವಿಡಿಯೋದ ವಿವಿಧ ಕೀ ಪ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿತು. ಈ ವೇಳೆ ವೈರಲ್ ವಿಡಿಯೋದಲ್ಲಿನ ಘಟನೆಗೆ ಸಂಬಂಧಿಸಿದಂತೆ ಅಂಕಣ ಒಂದು ಪತ್ತೆಯಾಗಿತ್ತು.

ಈ ಅಂಕಣ ಇಷ್ಟೊಯಿ ಎಂಬ ಸುದ್ದಿ ತಾಣಕ್ಕೆ ಸೇರಿದ್ದಾಗಿದ್ದು, ಬ್ರೆಜಿಲಿಯನ್ ಮಾಧ್ಯಮದಲ್ಲೂ ಈ ಸುದ್ದಿ ಪ್ರಕಟವಾಗಿರುವುದು ಪತ್ತೆಯಾಯಿತು. ಈ ಅಂಕಣದಲ್ಲಿ ಯುವಕನನ್ನು ಬೆನ್ನುಹತ್ತಿ ಹಿಡಿದ ಪೊಲೀಸರು ಎಂದು ಉಲ್ಲೇಖಿಸಲಾಗಿದ್ದು, ಆಗಸ್ಟ್ 1ರಂದು ಬ್ರೆಜಿಲ್ ನ ಪೆರೋಲ ಎಂಬ ಪಟ್ಟಣದಲ್ಲಿ ಈ ಘಟನೆ ನಡೆದಿದೆ ಎಂಬುದನ್ನು ಉಲ್ಲೇಖಿಸಲಾಗಿದೆ.

ಈ ಘಟನೆಯಲ್ಲಿ 17 ವರ್ಷದ ಯುವಕ ಮೋಟಾರ್ ಸೈಕಲ್ ನಲ್ಲಿ ವೇಗವಾಗಿ ಹೋಗುತ್ತಿರುವುದನ್ನು ಕಂಡ ಪೊಲೀಸರು ಆತನ ಮೋಟಾರ್ ಸೈಕಲ್ ನಿಲ್ಲಿಸಲು ಹೇಳಿದ್ದಾರೆ. ಆದರೆ ಆತ ಪೊಲೀಸರ ಮಾತಿಗೆ ಬೆಲೆ ಕೊಡದೆ ನೇರವಾಗಿ ವಾಹನವನ್ನು ಚಲಾಯಿಸಿದ್ದಾನೆ. ಇದರಿಂದ ಪೊಲೀಸರು ಆತನನ್ನು ಹಿಂಬಾಲಿಸಿ ಸೆರೆ ಹಿಡಿದು ತದನಂತರ ಆತನ ಮೋಟರ್ ಸೈಕಲ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಈ ಅಂಕಣದಲ್ಲಿ ಉಲ್ಲೇಖಿಸಲಾಗಿದೆ.

ಇದಕ್ಕೆ ಪೂರಕ ಎಂಬಂತೆ ಯೂಟ್ಯೂಬ್ ನಲ್ಲೂ ಕೂಡ ಇದೇ ಘಟನೆಯನ್ನು ಉಲ್ಲೇಖಿಸಿ ಕೆಲ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಬಂಧಿತನಾದವನು ಬ್ರೆಜಿಲ್ ನ ಅಪ್ರಾಪ್ತ ಬಾಲಕನಾಗಿದ್ದು, ಈತ ಮೋಟಾರ್ ಸೈಕಲ್ ಚಲಾಯಿಸಿದ ಹಿನ್ನೆಲೆ ಬಂಧಿಸಲಾಗಿದೆ. ಇದೇ ವಿಡಿಯೋವನ್ನು ಬಳಸಿಕೊಂಡು ಶ್ರೀನಗರದಲ್ಲಿ ಭಾರತೀಯ ಸೇನೆ ಉಗ್ರನೊಬ್ಬರನ್ನು ಸೆರೆಹಿಡಿದಿದೆ ಎಂದು ಸುಳ್ಳು ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ.


ಇದನ್ನೂ ಓದಿ : ಲಂಡನ್ ಮೇಯರ್ ಚುನಾವಣೆಯಲ್ಲಿ ಸಾದಿಕ್ ಖಾನ್ ಅವರ ವಿಜಯವನ್ನು ಆಚರಿಸುತ್ತಿರುವ ದೃಶ್ಯಗಳು ಎಂದು 2021 ರ ಹಳೆಯ ವೀಡಿಯೊ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *