Fact Check | “ನಾನು ರೈತನ ಮಗ, ಯಾರಿಗೂ ಹೆದರುವುದಿಲ್ಲ” ಎಂದು ಜಗದೀಪ್ ಧನಕರ್ ಇತ್ತೀಚೆಗೆ ಹೇಳಿದ್ದಾರೆ ಎಂಬುದು ಸುಳ್ಳು

ಭಾರತದ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರು ಜುಲೈ 21, 2025 ರಂದು ಅನಿರೀಕ್ಷಿತವಾಗಿ ಆರೋಗ್ಯ ಕಾರಣಗಳನ್ನು ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು . ಅಧ್ಯಕ್ಷೆ ದ್ರೌಪದಿ ಮುರ್ಮು ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ , ತಮ್ಮ ವೈದ್ಯಕೀಯ ಆರೈಕೆ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡಲು ತಾವು ಹುದ್ದೆಯಿಂದ ಕೆಳಗಿಳಿಯುತ್ತಿರುವುದಾಗಿ ತಿಳಿಸಿದ್ದಾರೆ. ಅವರ ಅವಧಿ ಪೂರ್ಣಗೊಳ್ಳುವ ಸುಮಾರು ಎರಡು ವರ್ಷಗಳ ಮೊದಲು ಅವರ ನಿರ್ಧಾರ ಬಂದಿದ್ದು, ವ್ಯಾಪಕ ಊಹಾಪೋಹ ಮತ್ತು ರಾಜಕೀಯ ಚರ್ಚೆಗೆ ಕಾರಣವಾಯಿತು.ಈಗ ಅಂತಹದ್ದೇ…

Read More

Fact Check | ಎಲ್‌.ಕೆ ಅತೀಕ್‌ ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಲಾಗಿದೆ ಎಂಬುದು ಸುಳ್ಳು

1991 ರ ಬ್ಯಾಚ್ ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್ ಅವರು ಜನವರಿ 31 ರಂದು ನಿವೃತ್ತರಾದ ನಂತರ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್) ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದೀಗ ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ನ ನೇತೃತ್ವವನ್ನು ವಹಿಸಲಿದ್ದಾರೆ ಎಂದು ಹೇಳಾಗುತ್ತಿದೆ. ಈ ಮಧ್ಯೆ ಎಲ್.ಕೆ. ಅತೀಕ್ ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಲಾಗಿದೆ ಎಂಬ ಸುದ್ದಿಯೊಂದು ವೈರಲ್‌ ಆಗಿದೆ. ಹೀಗೆ ಸುದ್ದಿ ವೈರಲ್‌ ಆಗಲು ಪ್ರಮುಖವಾದ ಕಾರಣ Btv ಕನ್ನಡ,…

Read More

Fact Check : ಸುಧಾಮೂರ್ತಿಯವರು ಹೂಡಿಕೆ ಅಪ್ಲಿಕೇಶನ್‌ ಕುರಿತು ಪ್ರಚಾರ ಮಾಡುತ್ತಿದ್ದಾರೆ ಎಂಬುದು ಸುಳ್ಳು

ರಾಜ್ಯಸಭಾ ಸಂಸದೆ ಸುಧಾ ಮೂರ್ತಿಯವರು ಹೂಡಿಕೆ ಅಪ್ಲಿಕೇಶನ್‌ ಕುರಿತು ಪ್ರಚಾರ ಮಾಡುತ್ತಿರುವ ವೀಡಿಯೊವನ್ನು  ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಸುಧಾ ಮೂರ್ತಿಯವರು ತಮ್ಮ ಪತಿ ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರೊಂದಿಗೆ ವೇದಿಕೆಯಲ್ಲಿ ಮಾತನಾಡುವಾಗ  ದಿನಕ್ಕೆ ₹ 21,000 ಆರಂಭಿಕ ಹೂಡಿಕೆಯನ್ನು ಮಾಡಿದರೆ ₹35,000 ವರೆಗೆ ಗಳಿಸಬಹುದು ಎಂದು ಜನರನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌ : ಈ ವೈರಲ್‌ ವೀಡಿಯೋದ ಸ್ಕ್ರೀನ್‌ಸಾಟ್‌ ಚಿತ್ರಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು, ವೀಡಿಯೊದ ಕೀಫ್ರೇಮ್‌ಗಳನ್ನು ಹಾಕಿ ಹುಡುಕಿದಾಗ,…

Read More
ಶಿವಸೇನೆ

Fact Check: ಬಿಜೆಪಿಯ ಮೇಧಾ ಕುಲಕರ್ಣಿ ಮರಾಠಿಯಲ್ಲಿ ಮಾತನಾಡುವುದಕ್ಕೆ ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ ಆಕ್ಷೇಪ ವ್ಯಕ್ತಪಡಿಸಿಲ್ಲ

ರಾಜ್ಯಸಭಾ ಕಲಾಪದ ಸಂದರ್ಭದಲ್ಲಿ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ), ಸಂಸದೆ ಪ್ರಿಯಾಂಕಾ ಚತುರ್ವೇದಿ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದೆ ಮೇಧಾ ಕುಲಕರ್ಣಿ ನಡುವಿನ ಸಂಭಾಷಣೆಯನ್ನು ತೋರಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಅಧಿವೇಶನದಲ್ಲಿ, ಪ್ರಿಯಾಂಕಾ ಚತುರ್ವೇದಿ ರಾಜ್ಯಸಭೆಯ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ವೈರಲ್ ವೀಡಿಯೋದಲ್ಲಿ, ಯುವಕರಿಗೆ ತರಬೇತಿ ಮತ್ತು ಉತ್ಕೃಷ್ಟತೆ ಮತ್ತು ಅನುಭವದ ಪ್ರಮಾಣಪತ್ರವನ್ನು ನೀಡುವ ಯೋಜನೆಯನ್ನು ಕೈಗೊಂಡಿದ್ದಕ್ಕಾಗಿ ಮೇಧಾ ಕುಲಕರ್ಣಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದರು. ಮಹಾರಾಷ್ಟ್ರದ ಮಹಾನಗರಕ್ಕೆ ಬಜೆಟ್ ಹಂಚಿಕೆಯ ಬಗ್ಗೆ ಅವರು ಮಾತನಾಡುತ್ತಾರೆ….

Read More

Fact Check: ವಿಧಾನ ಸೌಧದಲ್ಲಿ “ಪಾಕಿಸ್ತಾನ ಜಿಂದಾಬಾದ್” ಘೋಷಣೆ ಎಂದು ಸುಳ್ಳು ವರದಿ ಮಾಡಿದ ಕರ್ನಾಟಕದ ಮಾಧ್ಯಮಗಳು

ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎಂಬ ಗಾದೆ ಮಾತು ನಮ್ಮ ಸಮಾಜದಲ್ಲಿ ಬಹು ಹಿಂದಿನಿಂದಲೂ ಇದೆ. ಆದರೆ ಇಂದು ಬಹುತೇಕ ಮಾಧ್ಯಮಗಳು ಜನರಿಗೆ ಸತ್ಯವನ್ನು ತೋರಿಸುವ ಬದಲಾಗಿ ಆಧಾರರಹಿತವಾದ ಸುಳ್ಳುಗಳನ್ನೇ ಹಂಚಿಕೊಳ್ಳುತ್ತಿವೆ. ಸುದ್ದಿಯ ನಿಖರತೆಯನ್ನು ಪರೀಕ್ಷಿಸಿಕೊಳ್ಳದೆ ಪತ್ರಿಕಾ ಧರ್ಮವನ್ನು ಮರೆತವರಂತೆ ವರ್ತಿಸುತ್ತಿವೆ. ಇದಕ್ಕೆ ಸಾಕ್ಷಿಯೆಂಬಂತೆ ನೆನ್ನೆ ನಡೆದ ರಾಜ್ಯ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಂಸದ ನಾಸಿರ್ ಹುಸೇನ್ ಅವರ ಬೆಂಬಲಿಗರಿಂದಲೇ ವಿಧಾನ ಸೌಧದಲ್ಲಿ “ಪಾಕಿಸ್ತಾನ್ ಜಿಂದಾಬಾದ್” ಘೋಷಣೆ ಕೇಳಿಬಂದಿದೆ. ಎಂದು ಕನ್ನಡದ ಬಹುತೇಕ ಮಾಧ್ಯಮಗಳು ವರದಿ ಮಾಡಿವೆ….

Read More