Fact Check: ಮಂಗಳೂರಿನ ಇಫ್ತಾರ್ ಕೂಟದ ವಿಡಿಯೋವನ್ನು ಬಂಗಾಳದ ವಿಡಿಯೋ ಎಂದು ಹಂಚಿಕೊಳ್ಳಲಾಗುತ್ತಿದೆ

ಕೆಲವು ದಿನಗಳ ಹಿಂದೆಯಷ್ಟೆ ಮಂಗಳೂರಿನಲ್ಲಿ ರಸ್ತೆ ಮಧ್ಯೆಯೇ ಇಫ್ತಾರ್ ಕೂಟವನ್ನು ಆಯೋಜಿಸಲಾಗಿದೆ ಎಂದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮತ್ತು ಪೋಟೋಗಳು ಹರಿದಾಡುತ್ತಿದ್ದವು. ಜನರು ರಸ್ತೆ ಮಧ್ಯೆ ಮಾಡುವ ಅಗತ್ಯವಿತ್ತೆ ಎಂದು ಟೀಕಿಸಿದ್ದರು ಮತ್ತು ಈ ಕಾರ್ಯಕ್ರಮದ ಆಯೋಜಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದರು.

ಆದರೆ ಈಗ, “ಇತ್ತೀಚೆಗೆ ರಸ್ತೆಯಲ್ಲಿ ನಮಾಜ್ ಮಾಡಿದ್ದರು ನಂತರ ಇಫ್ತಾರ್ ಕೂಟವನ್ನು ರಸ್ತೆಯಲ್ಲಿ ಆಯೋಜಿಸಲಾಗಿದೆ. ಈ ವಿಡಿಯೋ ಪಶ್ಚಿಮ ಬಂಗಾಳದ ಕೋಲ್ಕತ್ತಾದಿಂದ ಬಂದಿದೆ. ಇದು ನಿಜವೆ?” ಎಂಬ ಹೇಳಿಕೆಯೊಂದಿಗೆ ಇಫ್ತಾರ್ ಕೂಟದ ಪೂರ್ವಸಿದ್ದತೆಯ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ಚೆಕ್: ಇದು ಮಾರ್ಚ್ 30 ರಂದು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಮುಡಿಪಿನಲ್ಲಿ ರಸ್ತೆ ಮಧ್ಯೆಯೇ ಆಯೋಜಿದ್ದ ಸೌಹಾರ್ದ ಇಫ್ತಾರ್ ಕೂಟದ ವಿಡಿಯೋ ಇದಾಗಿದೆ. ಈ ಇಫ್ತಾರ್ ಕೂಟವನ್ನು ಆಟೋ ರಾಜಕನ್ಮಾರ್ ಆಯೋಜಿಸಿದ್ದರು ಮತ್ತು ರಿಕ್ಷಾ ಚಾಲಕರು, ವ್ಯಾಪಾರಿಗಳು ಮತ್ತು ಸ್ಥಳೀಯರು ಇದರಲ್ಲಿ ಭಾಗವಹಿಸಿದ್ದರು. ಈ ಕುರಿತು ಮಂಗಳೂರು ಮಿರರ್, ಟಿವಿ 9 ಕನ್ನಡ ಸೇರಿದಂತೆ ಅನೇಕ ಮಾಧ್ಯಮಗಳು ವರದಿ ಮಾಡಿವೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದಾರೆ. ಅದಾಗ್ಯೂ, ಸ್ಥಳೀಯರಿಂದ ಯಾವುದೇ ವಿರೋಧ ವ್ಯಕ್ತವಾಗಿಲ್ಲ ಎಂದು ತಿಳಿದುಬಂದಿದೆ. ಈ ಹಿಂದೆ ಇಫ್ತಾರ್ ಕಾರ್ಯಕ್ರಮವನ್ನು ಸಭಾಂಗಣವೊಂದರಲ್ಲಿ ಆಯೋಜಿಸಲಾಗಿತ್ತು. ಆದರೆ ಹಿಂದೂ ಭಾಂದವರಿಗೆ ಭಾಗವಹಿಸಲು ಸಾಧ್ಯವಾಗದ ಕಾರಣ ಮುಡಿಪು ಜಂಕ್ಷನ್​ಗೆ ಈ ಕಾರ್ಯಕ್ರಮವನ್ನು ಸ್ಥಳಾಂತರಿಸಲಾಗಿದೆ. ಎಂದು ಮಂಗಳೂರು ಮಿರರ್ ತನ್ನ ಸುದ್ದಿಯಲ್ಲಿ ವರದಿ ಮಾಡಿದೆ.

“ಮುಡಿಪುವಿನಲ್ಲಿ ಯಾವುದೇ ಧರ್ಮದ, ಯಾವುದೇ ರಾಜಕೀಯ ಪಕ್ಷದ ಕಾರ್ಯಕ್ರಮ ಒಂದು ಭಾಗದ ರೋಡ್ ಬ್ಲಾಕ್ ಮಾಡಿ ಯೇ ಮಾಡುವುದು. ಪ್ರಮುಖ ಕಾರಣ ಯಾವುದೇ ಸಾರ್ವಜನಿಕ ಮೈದಾನ ಇಲ್ಲದೆ ಇರುವುದು, ಮತ್ತು ಎರಡೂ ಭಾಗದ ರಸ್ತೆಗಳು ಚತುಷ್ಪಥ ಆಗಿವೆ. ಮತ್ತು ವಾಹನ ದಟ್ಟಣೆ ತೀರಾ ಕಡಿಮೆ.” ಎಂದು ಮುಡಿಪುವಿನಲ್ಲಿ ನಡೆದ ಇಫ್ತಾರ್ ಕಾರ್ಯಕ್ರಮದಲ್ಲಿ ಭಾಗವಹಸಿದ ಸ್ಥಳಿಯರೊಬ್ಬರು ಮಾಹಿತಿ ನೀಡಿದ್ದಾರೆ.

ಕರಾವಳಿ ಆಟೋ ರಿಕ್ಷಾ ಪಾರ್ಕಿನ ಪ್ರಸಾದ್ ಕುರ್ನಾಡು ಮಾತನಾಡಿ, ಸೌಹಾರ್ದಯತವಾಗಿ ನಡೆದ ಕಾರ್ಯಕ್ರಮದಲ್ಲಿ ಎಲ್ಲಾ ಧರ್ಮೀಯರು ಭಾಗವಹಿಸಿದ್ದಾರೆ. ರಿಕ್ಷಾ ಚಾಲಕರ ಒಗ್ಗಟ್ಟಿಗೆ ಆಟೋರಾಜಕನ್ಮಾರ್ ಬಲ ನೀಡಿದೆ. ಮುಡಿಪುವಿನಲ್ಲಿ ಎಲ್ಲಾ ಧರ್ಮೀಯರು ಸೇರಿಕೊಂಡು ಆಚರಿಸಿದ ದೊಡ್ಡ ಕಾರ್ಯಕ್ರಮ ಇದಾಗಿದೆ ಎಂದರು. ಎಂದು ವಾರ್ತಾಭಾರತಿ ವರದಿ ಮಾಡಿದೆ. 

ಆದ್ದರಿಂದ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಇಫ್ತಾರ್ ಕೂಟವನ್ನು ರಸ್ತೆಯಲ್ಲಿ ಆಯೋಜಿಸಲಾಗಿದೆ ಎಂಬುದು ಸುಳ್ಳು.


ಇದನ್ನು ಓದಿ: Fact Check: ಮುಖ್ತಾರ್ ಅನ್ಸಾರಿ ಜೈಲಿನಲ್ಲಿ ವಿಷ ಸೇವಿಸಿದ್ದರು ಎಂದು ಅಮಿತ್ ಶಾ ಅವರು ಹೇಳಿಲ್ಲ


ವಿಡಿಯೋ ನೋಡಿ: ಅರವಿಂದ್‌ ಕೇಜ್ರಿವಾಲ್‌ ಯುವಕನಾಗಿದ್ದಾಗ ಅತ್ಯಾಚಾರದ ಆರೋಪಿ ಎಂಬುದು ಸುಳ್ಳು | Kannada Fact Check | Fact


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *