ಸಾಮಾಜಿಕ ಜಾಲತಾಣದಲ್ಲಿ “ಮಹಿಳೆಯೊಬ್ಬರು ಕೊಳದ ಬಳಿ ಫೋಟೋಗೆ ಪೋಸ್ ನೀಡುತ್ತಿದ್ದಾಗ, ಮೊಸಳೆಯೊಂದು ಮಹಿಳೆಯ ಮೇಲೆ ದಾಳಿ ಮಾಡಿ, ಆಕೆಯನ್ನು ಭಕ್ಷಿಸಿದೆ” ಎಂಬ ವಿಡಿಯೋವೊಂದು ವ್ಯಾಪಕವಾಗಿ ವೈರಲ್ ಆಗಿದೆ. ಈ ವಿಡಿಯೋದ ನೋಡಿದ ಹಲವರು ಇದು ನಿಜವಿರಬಹುದು ಎಂದು ಭಾವಿಸಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ.
रील बनाने के चक्कर में बिलकुल भी मदहोश ना हो pic.twitter.com/91CTDUTAl2
— महादेव♥️ (@Kedarholic) June 19, 2024
ವೈರಲ್ ವಿಡಿಯೋದಲ್ಲಿ ಕೂಡ ಮಹಿಳೆಯು ಪೋಟೋಗೆ ಫೋಸ್ ನೀಡುವುದನ್ನು ಕಾಣಬಹುದಾಗಿದೆ. ಇದೇ ವೇಳೆ ಹಿಂದೆಯಿಂದ ಬಂದ ಮೊಸಳೆಯೊಂದು ಆಕೆಯ ಮೇಲೆ ದಿಢೀರ್ ಎಂದು ದಾಳಿ ನಡೆಸಿ ಆಕೆಯನ್ನು ಭಕ್ಷಿಸುತ್ತದೆ. ಇದನ್ನು ನೋಡಿದ ಛಾಯಗ್ರಾಹಕಿ, ಕಿರುಚುತ್ತಾಳೆ. ಛಾಯಗ್ರಾಹಕಿ ಹಾಗೂ ಮಹಿಳೆಯನ್ನು ವಿಡಿಯೋ ಮಾಡುತ್ತಿದ್ದ ವ್ಯಕ್ತಿ ಓಡಿ ಬಂದು ಪರಿಶೀಲಿಸುವಷ್ಟರಲ್ಲಿ ಮೊಸಳೆ ದಾಳಿಗೆ ಒಳಗಾದ ಮಹಿಳೆಯ ಬ್ಯಾಗ್ ಮಾತ್ರ ಕಾಣಿಸಿಕೊಳ್ಳುತ್ತದೆ. ಈ ಎಲ್ಲಾ ಘಟನೆಗಳು ನೈಜ ದೃಶ್ಯದಂತೆ ಕಂಡು ಬಂದಿದೆ. ಹೀಗಾಗಿ ಈ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದೆ. ಈ ವಿಡಿಯೋ ಎಷ್ಟು ನಿಜ? ಎಷ್ಟು ಸುಳ್ಳು? ಎಂಬುದನ್ನು ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋವಿನ ಕೆಲವೊಂದು ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ 03 ಅಕ್ಟೋಬರ್ 2013 ರಂದು ಪ್ರಿವಿವ್ ಪಿಹೆಚ್ ಎಂಬ ಯುಟ್ಯೂಬ್ ಚಾನಲ್‌ನಲ್ಲಿ “ಹೌ ನಾಟ್ ಟು Instagram” ಎಂಬ ಶೀರ್ಷಿಕೆಯಲ್ಲಿ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿರುವುದು ಕಂಡು ಬಂದಿದೆ.
ಈ ವಿಡಿಯೋದ ಡಿಸ್ಕ್ರಿಪ್ಷನ್‌ನಲ್ಲಿ ” ಈ ವಿಡಿಯೋ #imapreviewgirl’ ಅಭಿಯಾನದ ಜಾಹೀರಾತಿನ ಭಾಗವಾಗಿದೆ. ಪ್ರಿ ವಿವ್ ಮ್ಯಾಗಜಿನ್ ಸ್ಪರ್ಧೆಯ ಭಾಗವಾಗಿ ಇನ್ನಷ್ಟು ವಿಡಿಯೋಗಳು ಬರಲಿವೆ” ಎಂದು ಉಲ್ಲೇಖಿಸಲಾಗಿದೆ. ಒಟ್ಟು ಇದು #imapreviewgirl ಸರಣಿಯಲ್ಲಿ ಏಳನೇ ವೀಡಿಯೊ ಎಂಬುದು ತಿಳಿದು ಬಂದಿದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಹುಡುಕಾಟವನ್ನು ನಡೆಸಿದಾಗ ಪ್ರಿ ವಿವ್ ಮ್ಯಾಗಜೀನ್‌ನ ವೈರಲ್ ಯೂಟ್ಯೂಬ್ ವೀಡಿಯೋ, “ ಹೌ ನಾಟ್ ಟು ಇನ್‌ಸ್ಟಾಗ್ರಾಮ್ ” ಸಹ ಮನ್ನಣೆಯನ್ನು ಗಳಿಸಿದೆ ಎಂದು ತಿಳಿದುಬಂದಿದೆ. ಇದು ಸುಬಿಕ್ ಬೇ ಫ್ರೀಪೋರ್ಟ್ ವಲಯದಲ್ಲಿ ನಡೆದ 2014 ಕಿಡ್ಲಾಟ್ ಪ್ರಶಸ್ತಿಗಳಲ್ಲಿ ಫಿಲ್ಮ್ ಇಂಟರ್ನೆಟ್ ಮೊಬೈಲ್ ವೀಡಿಯೊ ವಿಭಾಗದಲ್ಲಿ ಕಂಚಿನ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಮಹಿಳೆಯೊಬ್ಬರು ಮೊಸಳೆಯಿಂದ ದಾಳಿಗೊಳಗಾದ ಘಟನೆ ನಿಜವಲ್ಲ. ಇದು ಜಾಹಿರಾತಿಗಾಗಿ ತಯಾರಿಸಲಾದ ವಿಡಿಯೋ ಕ್ಲಿಪ್ ಆಗಿದ್ದು, ಇಂತಹ ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮುನ್ನ ಎಚ್ಚರ ವಹಿಸಿ.
ಇದನ್ನೂ ಓದಿ : Fact Check | ಇರಾನಿನ ಮುಸ್ಲಿಂ ವ್ಯಕ್ತಿ ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ್ದಾನೆ ಎಂದು ವೆಬ್ ಸಿರೀಸ್ ವಿಡಿಯೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.