ಸಾಮಾಜಿಕ ಜಾಲತಾಣದಲ್ಲಿ ” “ಮುಹಮ್ಮದ್ ಮೊಯಿನ್ ಅಲ್-ದಿನ್, 86 ವರ್ಷ. ಗದ್ದೆಯೊಂದರಲ್ಲಿ 7 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಇದು ಇಸ್ಲಾಮಿಕ್ ಸಂಸ್ಕೃತಿ, ಮತ್ತು ಇಸ್ಲಾಂನ ಪ್ರವಾದಿ ಮುಹಮ್ಮದ್ ಅವರು 6 ವರ್ಷದವಳಾದ ಆಯಿಷಾಳನ್ನು ವಿವಾಹವಾಗಿದ್ದರು. ಈ ಸಂಸ್ಕೃತಿಯನ್ನು ನಂಬುವ ಜನರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಅವರು ಇಂದು ಲಕ್ಷಾಂತರ ಸಂಖ್ಯೆಯಲ್ಲಿ ಪಶ್ಚಿಮದಲ್ಲಿ ವಾಸಿಸುತ್ತಿದ್ದಾರೆ.” ಎಂದು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷವನ್ನು ಹರಡಿಸುತ್ತಾ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
Be very careful lefties what you wish for. But remember, while you lot try to destroy Ireland, I and many more like me will be here to defend it. #IrelandOptsOut #IrelandIsRising #KeepIrelandSafe https://t.co/7o5aftizTW
— TheIrishWatchdog (@WatchdogTh96012) June 20, 2024
ಈ ವಿಡಿಯೋ ನೋಡಿದ ಹಲವರು ಇದು ನಿಜವಾದ ಘಟನೆ ಎಂದು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುವುದರ ಜೊತೆಗೆ ಮುಸ್ಲಿಂ ಸಮುದಾಯದ ವಿರುದ್ಧವು ಹಲವು ರೀತಿಯಾದ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಈ ವಿಡಿಯೋವನ್ನು ಗಮನಿಸಿದಾಗ ಇದು ಹಲವು ಅನುಮಾನಗಳನ್ನು ಹುಟ್ಟಿಸುತ್ತಿದೆ. ಹಾಗಾಗಿ ಈ ವೈರಲ್ ವಿಡಿಯೋದ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿತು. ಈ ವೇಳೆ @xavierjp__ ಎಂಬ ಎಕ್ಸ್ ಖಾತೆಯ ಬಳಕೆದಾರರು ವೈರಲ್ ಪೋಸ್ಟ್‌ವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ಅದರಲ್ಲಿ ಅವರು ಈ ಕ್ಲಿಪ್ 2004 ರ “ಝಹ್ರಾಸ್ ಐಸ್” ಎಂಬ ಚಲನಚಿತ್ರದಿಂದ ತೆಗೆದುಕೊಳ್ಳಲಾಗಿದೆ ಎಂದು ಉಲ್ಲೇಖಿಸಿದ್ದಾರೆ.
https://twitter.com/xavierjp__/status/1803735333378400725
ಬಳಿಕ ಈ ಕುರಿತು ಇನ್ನಷ್ಟು ಕೀ ವರ್ಡ್ಸ್‌ಗಳನ್ನು ಬಳಸಿ ಹುಡುಕಿದಾಗ, ಇದು 2004 ರಲ್ಲಿ ಪ್ರಾರಂಭವಾದ ಇರಾನಿನ ಟಿವಿ ಸರಣಿಯಾಗಿದೆ. ಈ ಸರಣಿಯನ್ನು ಮೂಲತಃ ಪರ್ಷಿಯನ್ ಭಾಷೆಯಲ್ಲಿ ಚಿತ್ರೀಕರಿಸಲಾಯಿತು ನಂತರ ಅರೇಬಿಕ್ ಭಾಷೆಗೆ ಡಬ್ ಮಾಡಲಾಯಿತು ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಈ ಸರಣಿಯ ಕರಿತು ಹೆಚ್ಚಿನ ಮಾಹಿತಿಗಾಗಿ ಪರಿಶೀಲನೆ ನಡೆಸಿದಾಗ 26 ಜನವರಿ 2024ರಂದು “ನೆಟ್‌ವರ್ಕ್ ಮೂವಿ” ಹೆಸರಿನ YouTube ಚಾನಲ್‌ನಲ್ಲಿ ಈ ವೈರಲ್ ಕ್ಲಿಪ್‌ನ ಪೂರ್ಣ ಆವೃತ್ತಿಯ ಸಿನಿಮಾವನ್ನೇ ಅಪ್‌ಲೋಡ್ ಮಾಡಲಾಗಿದ್ದು 2-ಗಂಟೆ-32-ನಿಮಿಷಗಳ ಅವಧಿಯಲ್ಲಿ ಈ ವೈರಲ್ ಕ್ಲಿಪ್‌ನಲ್ಲಿ ಬರುವ ದೃಶ್ಯವಿದೆ. ಆದರೆ ವೈರಲ್ ಪೋಸ್ಟ್‌ನಲ್ಲಿ ಹೇಳಿದಂತೆ ಇದು ಅತ್ಯಾಚಾರದ ದೃಶ್ಯವಲ್ಲ. ಬದಲಿಗೆ ಈ ಸಿನಿಮಾದ ಕತೆಯ ಪ್ರಕಾರ ಇಸ್ರೇಲ್ ಸೇನೆಯಿಂದ ತಪ್ಪಿಸಿಕೊಳ್ಳಲು ವಯೋವೃದ್ಧನೊಬ್ಬ ತನ್ನ ಕಣ್ಣು ಕಾಣದ ಮೊಮ್ಮಗಳನ್ನು ಮತ್ತು ತನ್ನನ್ನು ರಕ್ಷಿಸಿಕೊಳ್ಳಲು ಅಡಗಿ ಕುಳಿತುಕೊಳ್ಳುವ ದೃಶ್ಯವಾಗಿದೆ. ಹಾಗಾಗಿ ವೈರಲ್ ವಿಡಿಯೋ ತಪ್ಪು ದಾರಿಗೆಳೆಯುವಂತೆ ಚಿತ್ರಿಸಲಾಗಿದೆ ಎಂಬುದು ತಿಳಿದು ಬಂದಿದೆ.
https://www.youtube.com/watch?v=001CzaVSC2E
ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ವೈರಲ್ ವಿಡಿಯೋದಲ್ಲಿ ಹೇಳಿದಂತೆ ಇರಾನ್‌ನಲ್ಲಿ ಮುಸ್ಲಿಂ ವ್ಯಕ್ತಿ ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ್ದಾನೆ ಎಂಬುದು ಸುಳ್ಳು ಹಾಗು ಇದನ್ನು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷವನ್ನು ಹರಡಲು ಸಿನಿಮಾ ದೃಶ್ಯವನ್ನು ಬಳಸಿಕೊಂಡು ಈ ಸುಳ್ಳು ಸುದ್ದಿಯನ್ನು ಹರಡಲಾಗಿದೆ ಎಂಬುದು ಸಾಬೀತಾಗಿದೆ.
ಇದನ್ನೂ ಓದಿ : ಮುಸ್ಲಿಂ ವ್ಯಕ್ತಿಯೊಬ್ಬ ಕೆಟ್ಟ ಪಾನಿಪುರಿ ಮಾಡುತ್ತಿದ್ದಾನೆ ಎಂಬುದು ನಾಟಕೀಯ ವಿಡಿಯೋ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.