ಸಾಮಾಜಿಕ ಜಾಲತಾಣದಲ್ಲಿ ” ಲಡಾಕ್‌ನಲ್ಲಿ ಭಾರತೀಯ ಸೇನೆಯ ಟಿ – 72 ಟ್ಯಾಂಕರ್‌ನಲ್ಲಿದ್ದ ಐವರು ಸೈನಿಕರನ್ನು ಕಾಶ್ಮೀರದ ಉಗ್ರರು ಕೊಂದಿದ್ದಾರೆ, ಇದು ಕಾಶ್ಮೀರಿ ಪ್ರತ್ಯೇಕವಾದಿಗಳು ನಡೆಸಿದ ಬೃಹತ್ ದಾಳಿ.” ಎಂಬ ಬರಹದೊಂದಿಗೆ ಹಲವು ಪಾಕಿಸ್ತಾನಿ ಸಾಮಾಜಿಕ ಜಾಲತಾಣದ ಬಳಕೆದಾರರು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದನ್ನು ಪಾಕಿಸ್ತಾನದಾದ್ಯಂತ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಇದನ್ನೇ ನಿಜವೆಂದು ಅಲ್ಲಿನ ಹಲವು ಮಂದಿ ಭಾವಿಸಿದ್ದಾರೆ.
Five lnd!an🇮🇳 Army soldiers kiIIed after Kashm!ri freed0m fighters fired an RPG at an lnd!an T-72 tank in Ladakh, llOJK.#India #IndianArmy #Kashmir #Ladakh #IIOJK #PAFF pic.twitter.com/FvddtZw1eJ
— PSYWAR Bureau (@PSYWAROPS) June 29, 2024
ಇನ್ನು ಅಂತರ್ಜಾಲದಲ್ಲಿ ಪಾಕಿಸ್ತಾನದ ಖಾತೆಗಳಿಂದಲೇ ಈ ಸುದ್ದಿಯು ಹಬ್ಬುತ್ತಿದ್ದು, ಆ ಮೂಲಕ ಪಾಕಿಸ್ತಾನಿಗಳು ಇದರ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಸಾಭೀತಾಗುತ್ತಿದೆ. ಮತ್ತೊಂದು ಕಡೆ ಭಾರತೀಯ ಸೈನಿಕರಿಗೂ ಕಾಶ್ಮೀರದ ನಾಗರೀಕರಿಗೂ ತಿಕ್ಕಾಟವಿದೆ. ಹೀಗಾಗಿ ಕಾಶ್ಮೀರದ ನಾಗರೀಕರು ಸೈನಿಕರ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಲು ಈ ಖಾತೆಗಳು ಪ್ರಯತ್ನಿಸುತ್ತಿವೆ. ಆದರೆ ಈ ಖಾತೆಗಳಲ್ಲಿ ಹೇಳಿದಂತೆ ಭಾರತೀಯ ಸೈನಿಕರು ಕಾಶ್ಮೀರಿ ಉಗ್ರರಿಂದ ಹತರಾಗಿದ್ದಾರೆಯೇ? ಅದರ ಹಿಂದಿನ ಸತ್ಯವೇನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
https://twitter.com/Pak1stTeam/status/1806936577718833241
ಫ್ಯಾಕ್ಟ್‌ಚೆಕ್
ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಪೋಸ್ಟ್‌ನ ಕುರಿತು ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ವೈರಲ್ ಪೋಸ್ಟ್‌ಗೆ ಪೂರಕವಾದ ಯಾವುದೇ ಪೋಸ್ಟ್‌ಗಳು ಕಂಡು ಬಂದಿರಲಿಲ್ಲ.
ಇದಾದ ಬಳಿಕ ಭಾರತೀಯ ಸೈನಿಕರು ಇತ್ತೀಚೆಗೆ ಹುತಾತ್ಮರಾದ ಕೆಲ ವರದಿಗಳನ್ನು ಪರಿಶೀಲನೆ ನಡೆಸಿದಾಗ ಅದರಲ್ಲಿ ಎಲ್‌ಎಸಿ ಬಳಿ ದಿಢೀರ್ ಪ್ರವಾಹ ಉಂಟಾದ ಪರಿಣಾಮವಾಗಿ ಟಿ-72 ಟ್ಯಾಂಕ್ ಅಪಘಾತವಾಗಿದ್ದು, ಅದರಲ್ಲಿದ್ದ 5 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ ಎಂಬ ಹಲವು ವರದಿಗಳು ಕಂಡು ಬಂದವು. ಹಾಗಾಗಿ ಪ್ರವಾಹದಿಂದ ಟಿ-72 ಟ್ಯಾಂಕ್‌ನಲ್ಲಿದ್ದ ಸೈನಿಕರು ಹುತಾತ್ಮರಾಗಿದ್ದಾರೆ ಎಂಬುದು ಈ ವರದಿಗಳಿಂದಲೇ ಸಾಭೀತಾಗಿದ್ದವು.
ಆದರೆ ಇದೇ ಸುದ್ದಿಗಳನ್ನು ದುರ್ಬಳಕೆ ಮಾಡಿಕೊಂಡಿರುವ ಪಾಕಿಸ್ತಾನದ ಕಿಡಿಗೇಡಿಗಳು ಭಾರತೀಯ ಸೈನಿಕರನ್ನು ಕಾಶ್ಮೀರಿ ಹೋರಾಟಗಾರರು ಕೊಂದಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಹರಡುವ ಮೂಲಕ ಅದರ ಲಾಭ ಪಡೆಯಲು ಯತ್ನಿಸಿವೆ. ಮತ್ತು ಈ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸೇನೆಯ ವಿರುದ್ಧ ನಕಾರಾತ್ಮಕ ಭಾವನೆ ಉಂಟು ಮಾಡುವ ನಿಟ್ಟಿನಲ್ಲಿ ವಿಫಲ ಪ್ರಯತ್ನವನ್ನು ಪಾಕಿಸ್ತಾನದ ಸಾಮಾಜಿಕ ಜಾಲತಾಣದ ಬಳಕೆದಾರರು ಮಾಡಿದ್ದಾರೆ.
On 28 Jun 2024 night, while deinducting from a military training activity, an army tank got stuck in the Shyok River, near Saser Brangsa, Eastern Ladakh due to sudden increase in the water level. Rescue teams rushed to the location, however, due to high current and water levels,…
— @firefurycorps_IA (@firefurycorps) June 29, 2024
ಒಟ್ಟಾರೆಯಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಭಾರತೀಯ ಸೈನಿಕತ ಬಗ್ಗೆ ತಪ್ಪು ಮಾಹಿತಿಯನ್ನು ಹರಡುವ ಉದ್ದೇಶದಿಂದ ಪಾಕಿಸ್ತಾನದ ಸಾಮಾಜಿಕ ಜಾಲತಾಣದ ಬಳಕೆದಾರರು ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳು ಕಂಡು ಬಂದಲ್ಲಿ ಅವುಗಳನ್ನು ರಿಪೋರ್ಟ್ ಮಾಡಿ.
ಇದನ್ನೂ ಓದಿ : Fact Check: ಗೃಹ ಸಚಿವಾಲಯದ ನೌಕರರಂತೆ ನಟಿಸಿ ಕಳ್ಳರು ಮನೆ ದರೋಡೆ ನಡೆಸಲು ಬರುತ್ತಾರೆ ಎಂದು ನಕಲಿ ಎಚ್ಚರಿಕೆ ಪತ್ರ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.