“ಈ ವಿಡಿಯೋ ನೋಡಿ ಉತ್ತರ ಪ್ರದೇಶದ ರಾಂಪುರ ಪಟ್ಟಣದ ಮನೆ ಪೇಂಟರ್ ಒಬ್ಬರನ್ನು ಕೇರಳದಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಕೇರಳದಲ್ಲಿಇಂತಹ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.” ಎಂಬ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇನ್ನು ಕೆಲವರು ಈ ಘಟನೆ ಉತ್ತರಖಂಡ್‌ನಲ್ಲಿ ನಡೆದಿದೆ ಎಂದರೆ, ಮತ್ತೆ ಕೆಲವರು ಈ ಘಟನೆ ನೋಯ್ಡಾದಲ್ಲಿ ನಡೆದಿದೆ ಎಂದು ಕೂಡ ಹಂಚಿಕೊಳ್ಳುತ್ತಿದ್ದಾರೆ.
ಇನ್ನು ಈ ವೈರಲ್ ವೀಡಿಯೋದಲ್ಲಿ, ಮರದ ಆಸರೆಯ ಮೇಲೆ ನಿಂತುಕೊಂಡು ಗೋಡೆಗೆ ಪೇಂಟಿಂಗ್ ಮಾಡುತ್ತಿರುವಂತೆ ಕಾಣುವ ವ್ಯಕ್ತಿಯನ್ನು, 13 ಸೆಕೆಂಡ್‌ಗಳ ಅಂತರದಲ್ಲಿ ಕನಿಷ್ಠ ಹದಿನೇಳು ಬಾರಿ ಗುಂಡು ಹಾರಿಸಲಾಗಿದೆ. ಇನ್ನು ವಿಡಿಯೋ ಕೂಡ ನಿಜವಾಗಿರುವ ಕಾರಣ ಈ ವಿಡಿಯೋ ಎಲ್ಲಿನದ್ದು ಎಂಬುದನ್ನು ಕೂಡ ಪರಿಶೀಲನೆ ನಡೆಸದೆ ಸಾಕಷ್ಟು ಮಂದಿ ವಾಟ್ಸ್‌ಆಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಶೇರ್ ಮಾಡುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋದ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಈ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆ ನಡೆಸಿದ್ದು, ಇದಕ್ಕಾಗಿ ವೈರಲ್ ವಿಡಿಯೋದ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆಯನ್ನು ನಡೆಸಲಾಯಿಜತು ಈ ವೇಳೆ 30 ಜೂನ್ 2024 ರಂದು ಎಕ್ಸ್‌ನಲ್ಲಿ ಕೂಡ ಇದೇ ವೈರಲ್ ವಿಡಿಯೋದ ಮೂಲ ವಿಡಿಯೋ ಪತ್ತೆಯಾಗಿದೆ. ಪೋರ್ಚುಗೀಸ್ ಶೀರ್ಷಿಕೆಯನ್ನು ಹೊಂದಿದ್ದರಿಂದ ಇದನ್ನು ಇಂಗ್ಲೀಷ್‌ಗೆ ಭಾಷಾಂತರಗೊಳಿಸಿದಾಗ “ಕ್ರೇಜಿ! ಮನೌಸ್‌ನಲ್ಲಿರುವ ನೊವೊ ಅಲೆಕ್ಸೊ ನೆರೆಹೊರೆಯಲ್ಲಿ “ಓಲ್ಹಾವೊ” ಎಂದು ಕರೆಯಲ್ಪಡುವ ವ್ಯಕ್ತಿಯನ್ನು ಕ್ರಿಮಿನಲ್ ಒಬ್ಬ ಕೊಲೆ ಮಾಡಿ ವಿಡಿಯೋವನ್ನು ಚಿತ್ರೀಕರಿಸಿದ್ದಾನೆ ಎಂದು ಬರೆಯಲಾಗಿತ್ತು.
⚠️DOIDEIRA! Criminoso grava vídeo assassinando um homem conhecido como "Olhão" no bairro Novo Aleixo, em Manaus.
Sem censura: https://t.co/JAhIm11oaB pic.twitter.com/aXE9VhDYLf
— BAÚ DO RIO OFC (@baudorio) June 29, 2024
ಇದರಿಂದ ಮಾಹಿತಿಯನ್ನು ಪಡೆದ ನಾವು, ಈ ಘಟನೆಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದ್ದೇವೆ. ಈ ವೇಳೆ 28-06-2024 ರಂದು ಪ್ರಕಟಗೊಂಡ ಪೋರ್ಚುಗೀಸ್ ವರದಿಯೊಂದು ಪತ್ತೆಯಾಗಿದೆ. ಆ ವರದಿಯಲ್ಲಿ ಬ್ರೆಜಿಲ್‌ನ ಮನೌಸ್ ನಗರದಲ್ಲಿ ನೊವೊ ಅಲೆಕ್ಸೊ ನೆರೆಹೊರೆಯಲ್ಲಿರುವ ಮನೆಯಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಲ್ಯೂಕಾಸ್ ಪೆರೇರಾ ಎಂಬುವವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿತ್ತು.
ಪೋರ್ಟಾಲ್ ಡೊ ಹೋಲಾಂಡ ಈ ಘಟನೆಯ ಕುರಿತು ವರದಿಯ ವಿಡಿಯೋವೊಂದನ್ನು ತನ್ನ ಯುಟ್ಯುಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಅದರಲ್ಲಿ ಹತ್ಯೆಗೊಳಗಾದ ಲ್ಯೂಕಾಸ್ ಪೆರೇರಾ ಮಾಧಕ ಕಳ್ಳ ಸಾಗಾಟದ ಪ್ರಕರಟವನ್ನು ಹೊಂದಿದ್ದು, ಈತ ಈ ವಿಚಾರದಲ್ಲಿ ಗುಂಪೊಂದರ ಜೊತೆ ಜಗಳವಾಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಜೊತೆಗೆ ಇದೇ ಕಾರಣಕ್ಕೆ ಈತನ ಹತ್ಯೆ ನಡೆದಿರಬಹುದು ಎಂದು ಉಲ್ಲೇಖಿಸಲಾಗಿದೆ. ಈ ಅಂಶಗಳಿಂದ ಈ ವೈರಲ್ ವಿಡಿಯೋ ಭಾರತಕ್ಕೆ ಸಂಬಂಧಿಸಿದ್ದಲ್ಲ ಎಂದು ತಿಳಿದು ಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವ ಹಾಗೆ ವೈರಲ್ ವಿಡಿಯೋದ ಘಟನೆ ಕೇರಳದಲ್ಲಿ ನಡೆದಿದೆ ಎಂಬುದು ಸುಳ್ಳು, ಅಸಲಿಗೆ ಈ ವಿಡಿಯೋ ಭಾರತಕ್ಕೆ ಸಂಬಂಧಿಸಿದ್ದಲ್ಲ ಮತ್ತು ಇದು ಬ್ರೆಜಿಲ್‌ನಲ್ಲಿ ನಡೆದ ಘಟನೆಯಾಗಿದೆ. ಹಾಗಾಗಿ ಈ ವೈರಲ್ ವಿಡಿಯೋ ಸುಳ್ಳು ಪ್ರತಿಪಾದನೆ ಮತ್ತು ಟಿಪ್ಪಣಿಗಳಿಂದ ಹಂಚಿಕೊಳ್ಳಲಾಗುತ್ತಿದೆ ಎಂಬುದು ಈ ಎಲ್ಲಾ ಅಂಶಗಳಿಂದ ಸಾಭೀತಾಗಿದೆ.
ಇದನ್ನೂ ಓದಿ : Fact Check: ಫ್ರಾನ್ಸ್ ಚುನಾವಣೆಯಲ್ಲಿ ಬಹುಮತ ಬರದ ಕಾರಣ ಮರೀನ್ ಲೆ ಪೆನ್ ಅವರು ಕಣ್ಣೀರು ಹಾಕಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ