ಮುಂಬರುವ ನವೆಂಬರ್ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ, ಅಲ್ಲಿನ ಎಲ್ಲಾ ರಾಜಕೀಯ ಪಕ್ಷಗಳು ಪ್ರಚಾರದ ಕಾರ್ಯದಲ್ಲಿ ನಿರತವಾಗಿವೆ. ಇದರ ಮಧ್ಯೆ ಹಲವು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗುತ್ತಿವೆ. ಇದೀಗ ಅದೇ ಸಾಲಿಗೆ ವಿಡಿಯೋವೊಂದು ಸೇರ್ಪಡೆಯಾಗಿದೆ. ಇದು ಸಾಕಷ್ಟು ವೈರಲ್ ಕೂಡ ಆಗುತ್ತಿದೆ. ಇದರಲ್ಲಿ ಕಾಂಗ್ರೆಸ್ ನಾಯಕ ಬಿಜೆಪಿ ಬೆಂಬಲಿಗರಿಗೆ ಬೆದರಿಕೆ ಹಾಕಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ.
If I see a BJP flag outside your house, you will be beaten up – words of CONg leader Sunil Kedar, a convict in NDCCB scam
This party is a conglomeration of thugs goons and scammers pic.twitter.com/e4Os9VzzLR
— Sameer (@BesuraTaansane) October 25, 2024
ಈ ವಿಡಿಯೋದಲ್ಲಿ ಕೂಡ ಹಲವು ಸಾರ್ವಜನಿಕರ ಮಧ್ಯೆ ವ್ಯಕ್ತಿಯೊಬ್ಬ ಭಾಷಣ ಮಾಡುತ್ತಿದ್ದು, ಆತ ಬಿಜೆಪಿ ಬೆಂಬಲಿಗರಿಗೆ ಬೆದರಿಕೆ ಹಾಕಿರುವುದು ಕೂಡ ಕಂಡು ಬಂದಿದೆ. ಹೀಗಾಗಿ ಇತ್ತೀಚಿಗೆ ಮಹಾರಾಷ್ಟ್ರದಲ್ಲಿ ಬಿಜೆಪಿ ಕಾರ್ಯಕರ್ತರು ಭಯದ ವಾತಾವರಣದ ನಡುವೆ ಚುನಾವಣೆಗೆ ಸಂಬಂಧಿಸಿದ ಕೆಲಸವನ್ನು ನಿರ್ವಹಿಸಬೇಕಾಗಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಹಾಗೂ ಉದ್ಧವ್ ಠಾಕ್ರೆಯವರ ಶಿವ ಸೇನೆಯು ಬಿಜೆಪಿ ಬೆಂಬಲಿಗರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ವಿಡಿಯೋವನ್ನು ವಿವಿಧ ಬರಹಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
If I see a BJP flag outside your house, you will be beaten up – words of CONg leader Sunil Kedar, a convict in NDCCB scam.
Why all such goons in one party? pic.twitter.com/9JvXV1eBVu
— CottXpert (@cottXpert) October 25, 2024
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋವಿನ ವಿವಿಧ ಕೀ ಪ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ 13 ಸೆಪ್ಟೆಂಬರ್ 2019ರ ಟೈಮ್ಸ್ ನೌ ವರದಿಯೊಂದು ಕಂಡುಬಂದಿದ್ದು, ಇದರಲ್ಲಿ “ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕ ಸುನಿಲ್ ಕೇದಾರ್ ಇತ್ತೀಚೆಗೆ ತಮ್ಮ ಮನೆಯ ಹೊರಗೆ ಬಿಜೆಪಿ ಧ್ವಜಗಳನ್ನು ಪ್ರದರ್ಶಿಸಿದರೆ ಅವರನ್ನು ಥಳಿಸುವುದಾಗಿ ಬೆದರಿಕೆ ಹಾಕಿದ್ದಾರೆ.” ಎಂಬ ಮಾಹಿತಿಯನ್ನು ನೀಡಲಾಗಿತ್ತು. ಅಲ್ಲಿಗೆ ಈ ವೈರಲ್ ವಿಡಿಯೋ 2019 ರದ್ದು ಎಂಬುದು ಸ್ಪಷ್ಟವಾಗಿದೆ

ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ಹುಡುಕಾಟವನ್ನು ನಡೆಸಿದಾಗ, ಸಪ್ಟೆಂಬರ್ 2019ರಲ್ಲಿ ಆಜ್ತಕ್ ಸುದ್ದಿವಾಹಿನಿಯಲ್ಲಿ ಕೂಡ ಪ್ರಸಾರವಾದ ವರದಿಯಲ್ಲಿ, ವಿಧಾನಸಭಾ ಚುನಾವಣೆಗೂ ಮುನ್ನ ನಾಗ್ಪುರದ ಸಿಲ್ಲೆವಾಡ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡ ಕೇದಾರ್ ಮಾತನಾಡುವಾಗ ಬಿಜೆಪಿ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು. ಇದೇ ರೀತಿಯ ಮಾಹಿತಿಯು 13 ಸೆಪ್ಟೆಂಬರ್ 2019 ರಂದು ಲೋಕಮಾತ ಸುದ್ದಿವಾಹಿನಿಯ ಯೂಟ್ಯೂಬ್ನಲ್ಲಿ ಹಂಚಿಕೊಳ್ಳಲಾದ ವಿಡಿಯೋ ವರದಿಯಲ್ಲೂ ಕೂಡ ಉಲ್ಲೇಖಿಸಲಾಗಿದೆ.
ಇನ್ನು ಸುನಿಲ್ ಕೇದಾರ್ ಅವರ ಬಗ್ಗೆ ಹುಡುಕಾಟವನ್ನು ನಡೆಸಿದಾಗ, ಡಿಸೆಂಬರ್ 2023ರಲ್ಲಿ ಬ್ಯಾಂಕ್ ಹಗರಣದ ಪ್ರಕರಣದಲ್ಲಿ ಕೇದಾರ್ ಅವರನ್ನು ಅಪರಾಧಿ ಎಂದು ಘೋಷಿಸಿದ ನಂತರ, ಮಹಾರಾಷ್ಟ್ರ ವಿಧಾನಸಭೆಯಿಂದ ಅನರ್ಹಗೊಳಿಸಲಾಗಿದೆ. ಜುಲೈ 2024ರಲ್ಲಿ ಸುಪ್ರೀಂ ಕೋರ್ಟ್ ತನ್ನ ಅಪರಾಧದ ಮೇಲೆ ತಡೆ ಕೋರಿ ಕೇದಾರ್ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿತ್ತು. ಕಾಂಗ್ರೆಸ್ ಕೇದಾರ್ ಅವರ ಪತ್ನಿ ಅನುಜ ಕೇದಾರ್ ಅವರನ್ನು ನಾಗಪುರ ಜಿಲ್ಲೆಯ ಸಾವೋನರ್ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಇಲ್ಲಿಗೆ ಈ ಬಾರಿಯ ಚುನಾವಣೆಯಲ್ಲಿ ಸುನಿಲ್ ಕೇದಾರ್ ಅವರು ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ 2024ರ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಗೂ ಮುನ್ನ, ಅಲ್ಲಿನ ಕಾಂಗ್ರೆಸ್ ನಾಯಕರು ಬಿಜೆಪಿಯ ಕಾರ್ಯಕರ್ತರಿಗೆ ಬೆದರಿಕೆಯನ್ನು ಹಾಕುತ್ತಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿರುವ ವಿಡಿಯೋ 2019 ರದ್ದಾಗಿದೆ. ಅಂದಿನ ಕಾಂಗ್ರೆಸ್ ಕಾರ್ಯಕರ್ತ ಸುನಿಲ್ ಕೇದಾರ್ ಅವರು ಪ್ರಕರಣ ಒಂದರಲ್ಲಿ ದೋಷಿ ಎಂದು ಸಾಬೀತಾದ ನಂತರ ಅವರ ಶಾಸಕ ಸ್ಥಾನವು ವಜಗೊಂಡಿದೆ. ಈಗ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿಲ್ಲ. ಇನ್ನು ಈ ವಿಡಿಯೋ ಕೂಡ ಇತ್ತೀಚೆಗಿನದ್ದು ಎಂಬುದು ಸುಳ್ಳು. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಸುಳ್ಳು ನಿರೂಪಣೆಯಿಂದ ಕೂಡಿದೆ ಎಂಬುದು ಖಚಿತವಾಗಿದೆ. ಹಾಗಾಗಿ ಈ ವಿಡಿಯೋವನ್ನು ಯಾವುದೇ ಕಾರಣಕ್ಕು ಹಂಚಿಕೊಳ್ಳಬೇಡಿ.
ಇದನ್ನೂ ಓದಿ : Fact Check | ಬುರ್ಜ್ ಖಲೀಫಾದಲ್ಲಿ ದಿವಂಗತ ರತನ್ ಟಾಟಾರ ಲೇಸರ್ ಚಿತ್ರ ಎಡಿಟೆಡ್ ಆಗಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

