ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಮಹಿಳೆಯೊಬ್ಬರು ‘ಮೇರೆ ಘರ್ ರಾಮ್ ಆಯೆ ಹೈ’ ಹಾಡಿಗೆ ನೃತ್ಯ ಮಾಡುವುದನ್ನು ಕಾಣಬಹುದು. ಈ ನೃತ್ಯ ಮಹಿಳೆ ಸಂಬಲ್ಪುರ ಕಲೆಕ್ಟರ್ ಅನನ್ಯ ದಾಸ್ ಎಂದು ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ. ಹೀಗಾಗಿ ವಿಡಿಯೋ ಬಹಳಷ್ಟು ವೈರಲ್ ಆಗಿದೆ. ಸಾಕಷ್ಟು ಮಂದಿ ಇದಕ್ಕೆ ವಿವಿಧ ರೀತಿಯಾದ ಪ್ರತಿಕ್ರಿಯೆಯನ್ನು ನೀಡುತ್ತಿದ್ದು, ವಿವಿಧ ಆಯಾಮದ ಬರಹಗಳನ್ನು ಕೂಡ ಬರೆದುಕೊಂಡು ಶೇರ್ ಮಾಡುತ್ತಿದ್ದಾರೆ.
*Dance performance by Sambalpur collector Mrs Ananya Das (IAS)*
माननीय कलेक्टर सम्बलपुर, (IAS) श्रीमती अनन्या दास जी द्वारा प्रभु श्रीराम आगमन पर प्रस्तुत नृत्य उत्सव 🙌⚜️
अति सुन्दर मनमोहक प्रस्तुति🌺🥀💐 pic.twitter.com/rXzbE14X8z— दद्दा तिवारी 😎🚩 (@agyatlogss) January 28, 2024
ವಿಡಿಯೋವನ್ನು ಹಂಚಿಕೊಳ್ಳುತ್ತಿರುವ ಸಾಮಾಜಿಕ ಜಾಲತಾಣದ ಬಳಕೆದಾರರು ” ಈಕೆ ಈಗ ಬಿಜೆಪಿ ಸರ್ಕಾರವಿರುವುದರಿಂದ ತನ್ನ ಅಧಿಕಾರದಲ್ಲಿ ಉಳಿದುಕೊಂಡಿದ್ದಾಳೆ. ಇಲ್ಲದಿದ್ದರೆ ಈಕೆಯನ್ನು ಹೇಗಾದರೂ ಮಾಡಿ ಕೆಲಸ ಬಿಡುವಂತೆ ಮಾಡುತ್ತಿದ್ದರು. ಪ್ರಧಾನಿ ಮೋದಿ ಬಂದ ಮೇಲೆ ಅಧಿಕಾರಿಗಳು ತಮ್ಮ ಧರ್ಮವನ್ನು ಮತ್ತು ತಮಗಿಷ್ಟದ ದೇವರನ್ನು ಪ್ರಾರ್ಥಿಸುವ ಹಕ್ಕನ್ನು ನೀಡಲಾಗಿದೆ. ಈಗ ಹಿಂದೂಗಳು ಸ್ವತಂತ್ರವಾಗಿದ್ದಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ” ಎಂಬ ರೀತಿಯ ಬರಹಳನ್ನು ಕೂಡ ಬರೆದು ಹಲವರು ವೈರಲ್ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.
*Dance performance by Sambalpur collector Mrs Ananya Das (IAS)*
Credit of *Dance performance by Sambalpur collector Mrs Ananya Das (IAS)* pic.twitter.com/AqHKrae9Xa— डा जयशंकर शुक्ल Dr Jaya shankar Shukla (@DrJayashankarS1) January 29, 2024
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಮೃದುಲಾ ಮಹಾಜನ್ ಎಂಬ ಯುವತಿಯೊಬ್ಬರ ಯೂಟ್ಯೂಬ್ ಚಾನೆಲ್ ನಲ್ಲಿ ಈ ವಿಡಿಯೋದ ಮೂಲ ಆವೃತ್ತಿ ಕಂಡುಬಂದಿದೆ.

8 ಜನವರಿ 2024 ರಂದು ಅಪ್ಲೋಡ್ ಮಾಡಲಾದ ಈ ವೀಡಿಯೊವನ್ನು ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ ಎಂಬುದು ನಮಗೆ ಸ್ಪಷ್ಟವಾಗಿದ್ದು, ಇಲ್ಲಿ ನೀಡಿರುವ ಮಾಹಿತಿಯಲ್ಲಿ ಈ ನರ್ತಕಿಯ ಹೆಸರನ್ನು ಮೃದುಲಾ ಮಹಾಜನ್ ಎಂದು ನಮೂದಿಸಲಾಗಿದೆ. ಈ ಚಾನೆಲ್ನಲ್ಲಿ ಮೃದುಲಾ ಮಹಾಜನ್ ಅವರ ಇನ್ನೂ ಅನೇಕ ವೀಡಿಯೊಗಳು ಕೂಡ ನಮಗೆ ಕಂಡು ಬಂದಿದೆ.
ಇದಾದ ನಂತರ ನಾವು ಐಎಎಸ್ ಅನನ್ಯ ದಾಸ್ ಬಗ್ಗೆ ಹುಡುಕಿದೆವು . ವರದಿಗಳ ಪ್ರಕಾರ, ಅನನ್ಯ ದಾಸ್ ಅವರನ್ನು ಕೈಮಗ್ಗ ಜವಳಿ ಮತ್ತು ಕರಕುಶಲ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಮತ್ತು ಮಯೂರ್ಭಂಜ್ ಕಲೆಕ್ಟರ್ ಅಕ್ಷಯ್ ಸುನಿಲ್ ಅಗರ್ವಾಲ್ ಅವರ ಸ್ಥಾನದಲ್ಲಿ ಸಂಬಲ್ಪುರದ ಕಲೆಕ್ಟರ್ ಆಗಿದ್ದಾರೆ.

ಇದಾದ ನಂತರ ನಾವು ಅನನ್ಯ ದಾಸ್ ಅವರ ಸಾಮಾಜಿಕ ಮಾಧ್ಯಮ ಪ್ರೊಫೈಲ್ಗಳನ್ನು ಹುಡುಕಿದ್ದೇವೆ. ಅವರು ಜನವರಿ 27, 2024 ರಂದು ಮಾಡಿದ ಟ್ವೀಟ್ ಅನ್ನು ನಾವು ಕಂಡುಕೊಂಡಿದ್ದೇವೆ , ಅದರಲ್ಲಿ ಅವರು ವೈರಲ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ವೈರಲ್ ವೀಡಿಯೊದಲ್ಲಿ ಕಂಡುಬರುವ ನರ್ತಕಿ ಅವರಲ್ಲ ಎಂದು ಖಚಿತಪಡಿಸಿದ್ದಾರೆ.
Truly a good performance- sadly not mine 😄 https://t.co/8zLmZ17aGv
— Ananya Das (@AnanyaDasIAS) January 27, 2024
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋದಲ್ಲಿರುವ ಮಹಿಳೆ ಐಎಎಸ್ ಅಧಿಕಾರಿ ಅನನ್ಯ ದಾಸ್ ಅವರಲ್ಲ. ಈ ವಿಡಿಯೋ ಮೃದುಲಾ ಮಹಾಜನ್ ಎಂಬ ಯುವತಿಯದ್ದಾಗಿದ್ದು, ಆಕೆಯ ಯುಟ್ಯೂಬ್ ಚಾನಲ್ನಲ್ಲಿ ಇದೇ ರೀತಿಯ ಇನ್ನೂ ಹಲವು ವಿಡಿಯೋಗಳನ್ನು ಕಾಣಬಹುದಾಗಿದೆ. ಹಾಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check: ಅಮೃತಸರದಲ್ಲಿ ಸಂಭವಿಸಿದ ಅಪಘಾತದ ಹಳೆಯ ವಿಡಿಯೋವನ್ನು ಪ್ರಸ್ತುತ ಹರಿಯಾಣದಲ್ಲಿ ನಡೆದಿದೆ ಎಂದು ಸುಳ್ಳು ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

