“ಮುಂಬೈನ ಸಿದ್ಧಿವಿನಾಯಕ ದೇವಸ್ಥಾನ ಇರುವ ಜಾಗವನ್ನು ಈಗ ವಕ್ಫ್ ತನ್ನದೆಂದು ಹೇಳಿಕೊಳ್ಳುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ದೇವಸ್ಥಾನವನ್ನು ಮತ್ತು ದೇವಸ್ಥಾನದ ಆಸ್ತಿಯನ್ನು ಕಾನೂನಾತ್ಮಕವಾಗಿ ವಶಪಡಿಸಿಕೊಳ್ಳಲಿದೆ. ಹಿಂದೂಗಳೆ ಎಚ್ಚರದಿಂದಿರಿ. ಇಲ್ಲದಿದ್ದರೆ ಇಡೀ ದೇಶವನ್ನೇ ತನ್ನದೆಂದು ವಕ್ಪ್ ಹೇಳಿಕೊಳ್ಳುತ್ತದೆ. ಈ ಬಗ್ಗೆ ಎಲ್ಲರೂ ಎಚ್ಚರದಿಂದ ಇರಬೇಕು. ಇಸ್ಲಾಂ ಹುಟ್ಟುವುದಕ್ಕೂ ಮೊದಲೇ ಇದ್ದ ದೇವಸ್ಥಾನಗಳನ್ನು ತನ್ನದೂ ಎಂದು ಹೇಳಿಕೊಳ್ಳುವ ವಕ್ಫ್ ಮುಂದೆ ದೇಶಕ್ಕೆ ಬಹುದೊಡ್ಡ ಅಪಾಯವನ್ನೇ ತರಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ” ಎಂದು ಪೋಸ್ಟ್ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.
Wake up call for Maharastra Hindus ‼️
Now the famous "Siddhivinayak Temple" in Prabhadevi, Mumbai has been claimed as "WAKF PROPERTY"!!
Dear Hindus,
Your single vote is the matter of your survival!!Don't Forget "EK HAI TO SAFE HAI" pic.twitter.com/Psd3Jn6p5M
— Mahesh Vikram Hegde 🇮🇳 (@mvmeet) November 18, 2024
ವೈರಲ್ ಪೋಸ್ಟ್ ನೋಡಿದ ಹಲವು ಮಂದಿ ಇದು ನಿಜವಿರಬಹುದು ಎಂದು ಭಾವಿಸಿದ್ದು, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡು ವಕ್ಫ್ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಭಾರತೀಯ ಜನತಾ ಪಕ್ಷದ ಶಾಸಕ ನಿತೇಶ್ ರಾಣೆ ಕೂಡ ಇದೇ ವೈರಲ್ ಪೋಸ್ಟ್ ಅನ್ನು ಹಂಚಿಕೊಂಡಿದ್ದು, “ವಕ್ಫ್ ಮಂಡಳಿಯು ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದ ಪ್ರದೇಶ ತನಗೆ ಸೇರಿದ್ದು ಎಂದು ಹೇಳಿಕೊಂಡಿದೆ. ಹೀಗಾಗಿ UBT (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಶಿವಸೇನೆ) ಮತ್ತು ಕಾಂಗ್ರೆಸ್ಗೆ ಮತ ಹಾಕಬೇಡಿ” ಎಂದು ಮನವಿಯನ್ನು ಕೂಡ ಮಾಡಿಕೊಂಡಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ.
https://twitter.com/chotu_donn/status/1858538999301706157
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 18 ನವೆಂಬರ್ 2024 ರಂದು ಶಿವಸೇನಾ UBT ನಾಯಕ ಆದಿತ್ಯ ಠಾಕ್ರೆ ಅವರ ಈ X ಪೋಸ್ಟ್ ಕಂಡು ಬಂದಿದೆ. ಇದರಲ್ಲಿ ಅವರು ವೈರಲ್ ಪೋಸ್ಟ್ ನಕಲಿಯಾಗಿದೆ. ಬಿಜೆಪಿ ಸುಳ್ಳು ಮಾಹಿತಿಯನ್ನು ನೀಡಿದೆ ಎಂದು ಉಲ್ಲೇಖಿಸಿ ಬಿಜೆಪಿ ವಿರುದ್ಧ ಟೀಕೆ ಮಾಡಿದ್ದಾರೆ.
The absolutely disgusting mentality of the bjp’s ecosystem. Divide and rule. Lie and try to win.
Will the @ECISVEEP and @MumbaiPolice ever act and arrest such disgusting hate creators and Maharashtra haters?
Don’t play with our sentiments and emotions in Maharashtra for your… pic.twitter.com/bnYdFixXXN
— Aaditya Thackeray (@AUThackeray) November 18, 2024
ಈ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ 18 ನವೆಂಬರ್ 2024ರಂದು ಮುಂಬೈ ತರುಣ್ ಭಾರತ್ ಎಂಬ ಮಾಧ್ಯಮದ ಎಕ್ಸ್ ಪೋಸ್ಟ್ವೊಂದು ಕಂಡು ಬಂದಿದ್ದು, ಅದರಲ್ಲಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸೊಸೈಟಿಯ ಖಜಾಂಚಿ ಆಚಾರ್ಯ ಪವನ್ ತ್ರಿಪಾಠಿ ಅವರು ವಕ್ಫ್ ಬೋರ್ಡ್ ಮಾಡುವ ಉದ್ದೇಶವನ್ನು ಹೊಂದಿಲ್ಲ ಎಂದು ಪ್ರತಿಪಾದಿಸುವ 26 ಸೆಕೆಂಡುಗಳ ವೀಡಿಯೊವನ್ನು ಹಂಚಿಕೊಂಡಿರುವುದು ಕಂಡು ಬಂದಿದೆ. ವೈರಲ್ ಪೋಸ್ಟ್ ಹೆಚ್ಚು ವೈರಲ್ ಆಗುತ್ತಿದ್ದಂತೆ ಸಾಕಷ್ಟು ಮಂದಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ವೈರಲ್ ಪೋಸ್ಟ್ ನಕಲಿ ಎಂದು ಸ್ಪಷ್ಟ ಪಡಿಸಿದ್ದಾರೆ. ಒಂದು ವೇಳೆ ವೈರಲ್ ಪೋಸ್ಟ್ನಲ್ಲಿನ ಪ್ರತಿಪಾದನೆ ನಿಜವೇ ಆಗಿದ್ದರೆ. ಆ ಬಗ್ಗೆ ಹಲವು ಮಾಧ್ಯಮಗಳ ವರದಿಗಳು ಕಂಡು ಬರಬೇಕಿತ್ತು, ಆದರೆ ಇದುವರೆಗೂ ಅಂತಹ ಯಾವುದೇ ಅಧಿಕೃತ ವರದಿಗಳು ಕಂಡು ಬಂದಿಲ್ಲ.
सिद्धिविनायक मंदिर गणेश भक्तांचेच; वक्फचा दावा सपशेल खोटा!
– मंदिराचे कोषाध्यक्ष आचार्य पवन त्रिपाठी यांचे स्पष्टीकरण
#WaqfBoard #SiddhivinayakTemple #Dadar #News #Election2024 #Maharashtra #MahaMTB@pawantripathi_ pic.twitter.com/aY23pM9DCA— महा MTB (@TheMahaMTB) November 18, 2024
ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿ ಹೇಳುವುದಾದರೆ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿಯಲ್ಲಿ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನ ಇರುವ ಜಾಗವನ್ನು ಈಗ ವಕ್ಫ್ ತನ್ನದೆಂದು ಹೇಳಿಕೊಳ್ಳುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ದೇವಸ್ಥಾನವನ್ನು ಮತ್ತು ದೇವಸ್ಥಾನದ ಆಸ್ತಿಯನ್ನು ಕಾನೂನಾತ್ಮಕವಾಗಿ ವಶಪಡಿಸಿಕೊಳ್ಳಲಿದೆ ಎಂಬುದು ಸುಳ್ಳು. ಈ ಬಗ್ಗೆ ಯಾವುದೇ ಅಧಿಕೃತ ವರದಿಗಳು ಇದುವರೆಗೂ ಕಂಡು ಬಂದಿಲ್ಲ. ವಕ್ಫ್ ಕೂಡ ಈ ನಿರ್ಧಾರ ತೆಗೆದುಕೊಂಡಿರುವುದರ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಹಾಗಾಗಿ ವೈರಲ್ ಪೋಸ್ಟ್ ಸುಳ್ಳು ನಿರೂಪಣೆಯಿಂದ ಕೂಡಿದೆ ಎಂಬುದು ಸಾಬೀತಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ವೈರಲ್ ಪೋಸ್ಟ್ ಅನ್ನು ಹಂಚಿಕೊಳ್ಳಬೇಡಿ ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check: ಭಾರತ ಸರ್ಕಾರವು ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 62 ಕ್ಕೆ ಹೆಚ್ಚಿಸಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

