ಸಾಮಾಜಿಕ ಜಾಲತಾಣದಲ್ಲಿ ಅಮುಲ್ ಜಾಹಿರಾತು ಫಲಕವೊಂದು ವೈರಲ್ ಆಗಿದೆ. ಈ ಜಾಹಿರಾತು ಫಲಕದಲ್ಲಿ ಅಮುಲ್ ಗಾಂಧಿ ಕುಟುಂಬವನ್ನು ಗುರಿಯಾಗಿಸಿಕೊಂಡು ಜಾಹಿರಾತು ಫಲಕ ಅಳವಡಿಸಿದೆ ಎಂದು ಹಲವರು ಹಂಚಿಕೊಳ್ಳುತ್ತಿದ್ದಾರೆ. ಈ ಜಾಹಿರಾತಿನಲ್ಲಿ “ಅಜ್ಜ ತಿಂದರು, ಅಜ್ಜಿ ತಿಂದರು, ತಂದೆ ತಿಂದರು, ತಾಯಿ ತಿಂದರು ಮತ್ತು ಸಹೋದರಿ ನೀವೂ ತಿನ್ನಿ ” ಎಂದು ಉಲ್ಲೇಖಿಸಲಾಗಿದೆ. ಇಲ್ಲಿ “ತಿನ್ನು” ಎಂಬ ಪದವನ್ನು ಗಾಂಧಿ ಕುಟುಂಬ ಭ್ರಷ್ಟಾಚಾರವನ್ನು ಮಾಡಿದೆ ಎಂಬ ಅರ್ಥ ಬರುವಂತೆ ಹಂಚಿಕೊಳ್ಳಲಾಗುತ್ತಿದೆ.
The creative person from Amul surely deserves an award. Brilliant ad … says it all 👏🏻👏🏻👏🏻 pic.twitter.com/JcdQ2AOLcx
— Ninju (@Nikkinkk) December 19, 2024
ವೈರಲ್ ಪೋಸ್ಟ್ಗಳಲ್ಲಿ ಕೂಡ ಜಾಹಿರಾತು ಫಲಕ ನಿಜಾವಾದ ಫಲಕದ ರೀತಿಯಲ್ಲಿ ಕಂಡು ಬಂದಿದ್ದು, ಇದರಲ್ಲಿ ಅಮುಲ್ ಟ್ರೇಡ್ ಮಾರ್ಕ್ನಂತೆಯೇ ಚಿತ್ರಿಸಿರುವುದು ಕಂಡು ಬಂದಿದೆ. ಹೀಗಾಗಿ ಇದನ್ನು ನಿಜವೆಂದು ಭಾವಿಸಿ ಹಲವರು ವೈರಲ್ ಪೋಸ್ಟ್ ಅನ್ನು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡು ಗಾಂಧಿ ಕುಟುಂಬದ ವಿರುದ್ಧ ವ್ಯಂಗ್ಯವಾಡಿದ್ದಾರೆ. ಇನ್ನು ಹಲವರು ಇದನ್ನು ಟ್ರೋಲ್ ಆಗಿ ಬಳಸಿಕೊಳ್ಳುತ್ತಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ಹಿನ್ನೆಲೆ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
Salute Amul’s creativity & boldness 👌🥰💐😆 pic.twitter.com/gFMuzQAMkl
— Binoay B (@binoayb) December 17, 2024
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಪೋಸ್ಟ್ಗೆ ಸಂಬಂಧಿಸಿದಂತೆ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಆಗ ನಮಗೆ ಮೂಲ ಜಾಹಿರಾತು ಫಲಕದ ಫೋಟೋ ಲಭ್ಯವಾಗಿದೆ. ಇದು ಇಂಡಿಯಾ ಮಾರ್ಟ್ ತನ್ನ ಅಧಿಕೃತ ಔಟ್ಡೋರ್ ಹೋರ್ಡಿಂಗ್ ಅನ್ನು ಲಕ್ನೌನಲ್ಲಿ ಅಳವಡಿಸಿರುವ ಕುರಿತು ಮಾಹಿತಿ ನೀಡಿದೆ. ಈ ಬಗ್ಗೆ ತನ್ನ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಿರುವುದು ಕೂಡ ಕಂಡು ಬಂದಿದೆ.

‘ಅಮುಲ್ ಪ್ರಿಯಾಂಕಾ ರಾಹುಲ್ ಜಾಹೀರಾತು’ ಎಂಬ ಕೀವರ್ಡ್ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದಾಗ ಜನವರಿ 24, 2019 ರಂದು ಇಂಡಿಯನ್ ಎಕ್ಸ್ಪ್ರೆಸ್ನಿಂದ ಸುದ್ದಿ ವರದಿ ಕಂಡು ಬಂದಿದೆ. ಈ ವರದಿಯ ಪ್ರಕಾರ ಅಮುಲ್ ಸಂಸ್ಥೆ ಪ್ರಿಯಾಂಕ ಗಾಂಧಿ ಅವರು ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಪಡೆದದನ್ನು ಉಲ್ಲೇಖಿಸಿ ಕಾರ್ಟೂನ್ ಬಿಡುಗಡೆ ಮಾಡಿದೆ ಎಂಬ ಅಂಶವನ್ನು ಉಲ್ಲೇಖಿಸಿರುವುದು ಕಂಡು ಬಂದಿದೆ.
#Amul Topical: Priyanka Gandhi joins politics! pic.twitter.com/6Nl7n0s6kg
— Amul.coop (@Amul_Coop) January 24, 2019
ಈ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ 24 ಜನವರಿ 2019 ರಲ್ಲಿ ಅಮುಲ್ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್ನಲ್ಲಿ ಪ್ರಿಯಾಂಕ ಗಾಂಧಿ ರಾಜಕೀಯಕ್ಕೆ ಪ್ರವೇಶ ಎಂಬ ಶಿರ್ಷಿಕೆಯನ್ನು ನೀಡಿ, ಕಾರ್ಟೂನ್ ಬಿಡುಗಡೆ ಮಾಡಿರುವುದು ಕಂಡು ಬಂದಿದೆ. ಇನ್ನು ಮತ್ತೊಂದು ಪೋಸ್ಟ್ನಲ್ಲಿ ವೈರಲ್ ಫೋಟೋವನ್ನು ಹಂಚಿಕೊಂಡ ವ್ಯಕ್ತಿಗೆ ಸ್ವತಃ ಅಮುಲ್ ಸಂಸ್ಥೆಯೇ ಕಮೆಂಟ್ ಮಾಡಿ ” ಇದು ಸುಳ್ಳು.. ಅಮುಲ್ ಈ ರೀತಿಯಾದ ಟಾಪಿಕಲ್ ಅನ್ನು ಬಿಡುಗಡೆ ಮಾಡಿಲ್ಲ. ಮೂಲ ಟಾಪಿಕಲ್ ಇಲ್ಲಿದೆ ನೋಡಿ” ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.
Dear Sir, It is a fake post. Amul has not released this Topical. The original topical is shared below pic.twitter.com/Xs4QnpOHKG
— Amul4Customer (@amulcares) May 14, 2019
ಒಟ್ಟಾರೆಯಾಗಿ ಹೇಳುವುದಾದರೆ ಅಮುಲ್ ಸಂಸ್ಥೆ ತನ್ನ ಜಾಹಿರಾತು ಫಲಕದಲ್ಲಿ, ಗಾಂಧಿ ಕುಟುಂಬವನ್ನು ಗುರಿಯಾಗಿಸಿಕೊಂಡಿದೆ ಎಂಬುದು ಸುಳ್ಳಾಗಿದೆ. ಈ ಬಗ್ಗೆ ಅಮುಲ್ ಸಂಸ್ಥೆ ಕೂಡ ಅಧಿಕೃತವಾಗಿ ಸ್ಪಷ್ಟನೆಯನ್ನು ನೀಡಿದೆ. ಇನ್ನು ಮೂಲ ಟಾಪಿಕಲ್ನಲ್ಲಿ ಅಮುಲ್ ಪ್ರಿಯಾಂಕ ಗಾಂಧಿ ವಾದ್ರ ಅವರು ರಾಜಕೀಯ ಪ್ರವೇಶ ಪಡೆದಿರುವುದನ್ನು ಉಲ್ಲೇಖಿಸಿ ಟಾಪಿಕಲ್ ಬಿಡುಗಡೆ ಮಾಡಿರುವುದು ಕಂಡು ಬಂದಿದೆ. ಹಾಗಾಗಿ ವೈರಲ್ ಪೋಸ್ಟ್ ಅನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ದರ್ಗಾ ಸಮೀಕ್ಷೆ ನಡೆಸುವಾಗ ಬಿಜೆಪಿ ನಾಯಕ ವಿಜಯ್ ರೂಪಾನಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

