ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಇದನ್ನು ಹಂಚಿಕೊಂಡಿರುವ ಹಲವರು ಉತ್ತರಪ್ರದೇಶದಲ್ಲಿ ಇಬ್ಬರು ಮುಸ್ಲಿಂ ಯುವಕರು ಸಿಕ್ಕಸಿಕ್ಕ ಅಂಗಡಿಗಳನ್ನು ಧ್ವಂಸ ಮಾಡಿದ್ದಾರೆ, ದಾರಿಯಲ್ಲಿ ಹೋಗುತ್ತಿದ್ದವರಿಗೆ ಕಿರುಕುಳ ನೀಡಿದ್ದಾರೆ. ಇವರು ಜಿಹಾದಿಗಳಾದ ಕಾರಣ, ಪೊಲೀಸರೇ ಇವರಿಗೆ ಬುದ್ದಿ ಕಲಿಸಿದ್ದಾರೆ ಎಂದು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ವಿಡಿಯೋದಲ್ಲಿ ಕೂಡ ಇಬ್ಬರು ಯುವಕರು ಅಂಗಡಿಗಳನ್ನು ಧ್ವಂಸ ಮಾಡುವುದನ್ನು ಮತ್ತು ದಾರಿಹೋಕರನ್ನು ಥಳಿಸುವುದನ್ನು ಕಾಣಬಹುದು, ನಂತರ ಒಬ್ಬ ಪೊಲೀಸ್ ಅವರಲ್ಲಿ ಒಬ್ಬನನ್ನು ಹಿಡಿದು ಥಳಿಸುವುದನ್ನು ಕಾಣಬಹುದಾಗಿದೆ. ಹೀಗಾಗಿ ಹಲವರು ವೈರಲ್ ಪೋಸ್ಟ್ ಅನ್ನು ನಿಜವೆಂದು ಭಾವಿಸಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲಿಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 30 ಡಿಸೆಂಬರ್, 2022 ರಂದು, ANI ಎಕ್ಸ್ ಹ್ಯಾಂಡಲ್ನಿಂದ ಪೋಸ್ಟ್ ಮಾಡಲಾದ ವಿಡಿಯೋ ವರದಿಯೊಂದು ಕಂಡು ಬಂದಿದೆ.ವೈರಲ್ ವೀಡಿಯೊದ ಒಂದು ಭಾಗವನ್ನು ಇದರಲ್ಲಿ ಕಾಣಬಹುದು.ಈ ವರದಿ ಪ್ರಕಾರ, ಮಹಾರಾಷ್ಟ್ರದ ಪುಣೆಯ ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಹಗಢ ಕಾನೂನು ಕಾಲೇಜು ಆವರಣದ ಮುಂದೆ ‘ಕೊಯ್ಟಾ ಗ್ಯಾಂಗ್’ಗೆ ಸೇರಿದ ಕೆಲವು ದುಷ್ಕರ್ಮಿಗಳು ಹರಿತವಾದ ಆಯುಧಗಳಿಂದ ಪುಣೆಯ ಜನರನ್ನು ಹೆದರಿಸಲು ಪ್ರಯತ್ನಿಸಿದರು ಎಂಬುದು ತಿಳಿದು ಬಂದಿದೆ.
#WATCH | Maharashtra: Some miscreants carrying machetes, who are allegedly from 'Koyata Gang' attempted to terrorise people in front of the Sinhgad Law College campus area under Bharti Vidhyapeeth Police Station jurisdiction, Pune
(Video Source: Local, confirmed by Police) pic.twitter.com/OUsjxK8CNY
— ANI (@ANI) December 29, 2022
ಈ ಬಗ್ಗೆ ಇನ್ನಷ್ಟು ಪರಿಶೀಲನೆ ನಡೆಸಿದಾಗ 29 ಡಿಸೆಂಬರ್ 2022 ರಂದು, ಲೋಕಮತ್ನ x ಹ್ಯಾಂಡಲ್ ವೈರಲ್ ವೀಡಿಯೊದ ಒಂದು ಭಾಗವನ್ನು ಪೋಸ್ಟ್ ಮಾಡಿ ಇದು ಪುಣೆಯಲ್ಲಿ ನಡೆದ ಘಟನೆಯಾಗಿದೆ., ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದ ಯುವಕರನ್ನು ಪೊಲೀಸರು ಥಳಿಸಿದ್ದಾರೆ ಎಂದು ಪೋಸ್ಟ್ ಮಾಡಿರುವುದು ಕಂಡು ಬಂದಿದೆ.
पुण्याच्या सिंहगड कॉलेजजवळ दारू पिऊन धिंगाणा घालणाऱ्या तरुणांना पोलिसांचा चोप #Pune #Police pic.twitter.com/Ix37ZWclJI
— Lokmat (@lokmat) December 29, 2022
ಈ ಇಬ್ಬರೂ ಆರೋಪಿಗಳ ಹೆಸರುಗಳನ್ನು ಡಿಸೆಂಬರ್ 30 ರಂದು ಪೊಲೀಸ್ ನಾಮಾ ಎಂಬ ವೆಬ್ಸೈಟ್ನಲ್ಲಿ ನೀಡಲಾಗಿದೆ. ಅವರಿಬ್ಬರೂ ಮುಸ್ಲಿಮರಲ್ಲ ಎಂಬುದು ಇದರಲ್ಲಿನ ಮಾಹಿತಿಯಿಂದ ಖಚಿತವಾಗಿದೆ. ಆದರೆ ಇಬ್ಬರೂ ಅಪ್ರಾಪ್ತರು ಎಂಬುದು ತಿಳಿದುಬಂದಿದೆ.(ಆರೋಪಿಗಳು ಅಪ್ರಾಪ್ತ ವಯಸ್ಕರಾಗಿರುವುದರಿಂದ ನಾವು ವೆಬ್ಸೈಟ್ ಲಿಂಕ್ ಅನ್ನು ಇಲ್ಲಿ ನೀಡಿಲ್ಲ). ಇನ್ನು ಈ ಘಟನೆಯ ಬಗ್ಗೆ ವಿಶ್ವಾಸ್ ಸುದ್ದಿ ಸಂಸ್ಥೆ ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್ಪೆಕ್ಟರ್ ಸಾವ್ಲಾರಾಮ್ ಸಲ್ಗಾಂವ್ಕರ್ ಅವರನ್ನು ಸಂಪರ್ಕಿಸಿದ್ದು, ಈ ಪ್ರಕರಣದಲ್ಲಿ ಆರೋಪಿಗಳು ಅಪ್ರಾಪ್ತರಾಗಿದ್ದರು ಮತ್ತು ಈ ಘಟನೆಯಲ್ಲಿ ಯಾವುದೇ ಕೋಮು ಆಯಾಮವಿಲ್ಲ ಎಂದು ತಿಳಿಸಿರುವುದು ಕಂಡು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ ವೈರಲ್ ವಿಡಿಯೋಗೂ ಉತ್ತರಪ್ರದೇಶಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಈ ಘಟನೆ ಮಹಾರಾಷ್ಟ್ರಕ್ಕೆ ಸಂಬಂಧಿಸಿದ್ದಾಗಿದೆ. ಇನ್ನು ವಿಡಿಯೋದಲ್ಲಿ ಕಂಡು ಬಂದ ಇಬ್ಬರೂ ಅಪ್ರಾಪ್ತರಾಗಿದ್ದು, ಅವರು ಮುಸಲ್ಮಾನರಲ್ಲ ಎಂಬುದು ಕೂಡ ಪೊಲಿಸರೇ ಖಚಿತ ಪಡಿಸಿದ್ದಾರೆ. ಹೀಗಾಗಿ ವೈರಲ್ ವಿಡಿಯೋ ಸುಳ್ಳು ನಿರೂಪಣೆಯಿಂದ ಕೂಡಿದೆ. ಈ ಕಾರಣಕ್ಕಾಗಿ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ನೆಹರು ಸರ್ಕಾರದ ಅವಧಿಯಲ್ಲಿ ಸುಭಾಷ್ ಚಂದ್ರ ಬೋಸ್ ಚಿತ್ರವಿರುವ ನೋಟನ್ನು ರದ್ದುಗೊಳಿಸಲಾಯಿತು ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

