ಮುಸ್ಲಿಂ ಯುವತಿಯೊಬ್ಬಳು ತಾನು ತನ್ನ ತಂದೆಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಿದ್ದೇನೆ ಎಂದು ಹೇಳುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಹಂಚಿಕೊಂಡ ಹಲವರು, ಇಸ್ಲಾಂ ಸಮುದಾಯದಲ್ಲಿ ಮಾತ್ರ ಇಂತಹ ಸಂಸ್ಕೃತಿಯನ್ನು ನೋಡಲು ಸಾಧ್ಯ ಎಂದು ಬರೆದುಕೊಂಡು ಕೋಮು ದ್ವೇಷವನ್ನು ಹರಡುವ ಕೆಲಸವನ್ನು ಮಾಡುತ್ತಿದ್ದಾರೆ. ಹೀಗಾಗಿ ವಿಡಿಯೋ ಕೂಡ ಕೋಮು ನಿರೂಪಣೆಯೊಂದಿಗೆ ಹಂಚಿಕೆಯಾಗುತ್ತಿದೆ.
*ये मेरे अब्बू है*
*मेरे साथ रोज संबंध बना रहे है* pic.twitter.com/HpNkPujUSM
— Manoj Srivastava (@ManojSr60583090) February 24, 2025
ವೈರಲ್ ವಿಡಿಯೋದಲ್ಲಿ ಕೂಡ ವ್ಯಕ್ತಿಯೊಬ್ಬ ಬುರ್ಖಾ ಧರಿಸಿದ ಯುವತಿಯನ್ನು ಮಾತನಾಡಿಸುತ್ತಿದ್ದು, ಇದರಲ್ಲಿ ಆಕೆ ತಾನು ತನ್ನ ತಂದೆಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಿದ್ದೇನೆ ಎಂದು ಹೇಳುತ್ತಾಳೆ. ಜೊತೆಗಿರುವ ಮುಸ್ಲಿಂ ಟೋಪಿ ಧರಿಸಿದ ವ್ಯಕ್ತಿಯು ತಾನು ತನ್ನ ಮಗಳೊಂದಿಗೆ ದೈಹಿಕ ಸಂಬಂಧವನ್ನು ಹೊಂದಿದ್ದೇನೆ ಎಂದು ಹೇಳುವುದು ಕಂಡುಬಂದಿದೆ. ಹೀಗಾಗಿ ಈ ವಿಡಿಯೋವನ್ನು ನಿಜವೆಂದು ಭಾವಿಸಿ, ಹಲವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಶೇರ್ ಮಾಡಲಾಗುತ್ತಿರುವ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
मौज़ हब की खूबसूरती अल्ला
भी खुश मोहल्ला भी ख़ुश अब्बू भी ख़ुश
😂😂☝️ pic.twitter.com/bxShZ5P6Lq
— हिरेन पांडे (मोदी का परिवार) (@pande_Hiren123) February 24, 2025
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಾವು ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಗೂಗಲ್ ರಿವರ್ಸ್ ಇಮೇಜಿನಲ್ಲಿ ಹುಡುಕಾಟ ನಡೆಸಿದೆವು. ಈ ವೇಳೆ 13 ಫೆಬ್ರವರಿ 2025 ರಂದು ಅಶ್ವಿನಿ ಪಾಂಡೆ ಎಂಬ ಯುಟ್ಯೂಬ್ ಚಾನಲ್ನಿಂದ ಅಪ್ಲೋಡ್ ಮಾಡಲಾದ ವಿಡಿಯೋದ ವಿಸ್ತೃತ ಆವೃತ್ತಿಯೊಂದು ಕಂಡುಬಂದಿದೆ. ಈ ವಿಡಿಯೋವನ್ನು ಪರಿಶೀಲಿಸಿದಾಗ 6 ಸೆಕೆಂಡ್ನ ಟೈಮ್ ಸ್ಟ್ಯಾಂಪ್ನಲ್ಲಿ ಈ ವಿಡಿಯೋವನ್ನು ಮನರಂಜನೆ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗಿದೆ ಎಂದು ಸೂಚನೆ ನೀಡಿರುವುದು ಕಂಡು ಬಂದಿದೆ. ಹಾಗಾಗಿ ಈ ವಿಡಿಯೋ ನಿಜವಾದ ಘಟನೆಯೆಲ್ಲ ಎಂಬುದು ನಮಗೆ ಖಚಿತವಾಗಿದೆ.
ಇನ್ನು ಈ ಯೂಟ್ಯೂಬ್ ಚಾನೆಲ್ ಅನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದಾಗ ಇದರಲ್ಲಿ ಸ್ಕ್ರಿಪ್ಟ್ ಮಾಡಿದ ಹಲವು ವಿಡಿಯೋಗಳು ನಮಗೆ ಕಂಡುಬಂದಿವೆ. 13 ಫೆಬ್ರವರಿ 2025 ರಂದು ಅಶ್ವಿನಿ ಪಾಂಡೆ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಕೂಡ ವೈರಲ್ ವಿಡಿಯೋವನ್ನು ಹಂಚಿಕೊಂಡಿದ್ದು, ಅದರಲ್ಲೂ ಕೂಡ ಈ ವಿಡಿಯೋವನ್ನು ಮನರಂಜನೆಯ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗಿದೆ ಎಂಬುದನ್ನು ಉಲ್ಲೇಖಿಸಿರುವುದು ಕಂಡು ಬಂದಿದೆ.

ಇನ್ನು ಈ ಅಶ್ವಿನಿ ಪಾಂಡೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ತಮ್ಮನ್ನು ತಾವು ನಟ ಮತ್ತು ತಮಾಷೆಯ ವಿಡಿಯೋಗಳ ಕ್ರಿಯೇಟರ್ ಎಂದು ಬರೆದುಕೊಂಡಿರುವುದು ಕಂಡು ಬಂದಿದೆ. ಇನ್ನು ಅವರ ಫೇಸ್ಬುಕ್ ಪುಟದಲ್ಲಿ ಕೂಡ ಇದೇ ರೀತಿಯಲ್ಲಿ ಹಲವು ಸ್ಕ್ರಿಪ್ಟ್ ಮಾಡಿದ ವಿಡಿಯೋಗಳು ಕೂಡ ಕಂಡುಬಂದಿದ್ದು, ಈ ನಾಟಕೀಯ ವಿಡಿಯೋಗಳನ್ನು ಕೇವಲ ಮನೋರಂಜನೆಯ ಉದ್ದೇಶಗಳಿಗಾಗಿ ಮಾಡಲಾಗಿದೆ ಎಂಬ ಸೂಚನೆಯನ್ನು ಕೂಡ ನೀಡಿರುವುದು ಕಂಡುಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಮುಸ್ಲಿಂ ಯುವತಿ ತನ್ನ ತಂದೆಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಿದ್ದೇನೆ ಎಂದು ಹೇಳಿಕೊಂಡಿರುವ ವಿಡಿಯೋ ನಾಟಕೀ ವಿಡಿಯೋವಾಗಿದೆ. ಈ ರೀತಿಯ ಹಲವು ಸ್ಕ್ರಿಪ್ಟ್ ಮಾಡಿದ ವಿಡಿಯೋವನ್ನು ಅಶ್ವಿನಿ ಪಾಂಡೆ ಅವರು ತಮ್ಮ ಯೂಟ್ಯೂಬ್ ಮತ್ತು ಫೇಸ್ಬುಕ್ ಖಾತೆಗಳಲ್ಲಿ ಹಂಚಿಕೊಂಡಿರುವುದು ಕಂಡುಬಂದಿದೆ. ಹೀಗಾಗಿ ವೈರಲ್ ವಿಡಿಯೋ ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಈ ಕಾರಣದಿಂದ ಸುಳ್ಳು ನಿರೂಪಣೆಯಿಂದ ಕೂಡಿರುವ ವಿಡಿಯೋವನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ದೇಶದ ನಾಗರಿಕರಿಗೆ 1999 ರೂ. ನೀಡಲಾಗುತ್ತದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

